ಮನೋರಂಜನೆ

ಮೊದಲ ಬಾರಿಗೆ ‘ಆಡುವ ಗೊಂಬೆ’ ಚಿತ್ರದಲ್ಲಿ ಆಯ್ತು ರಾಜ್ ಪುತ್ರರ ಸಮಾಗಮ.

ಕಸ್ತೂರಿ ನಿವಾಸದಂತಹ ಎವರ್ ಗ್ರೀನ್ ಹಿಟ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಹಿರಿಯ ನಿರ್ದೇಶಕ ಭಗವಾನ್ 23 ವರ್ಷಗಳ ಬಳಿಕ “ಆಡುವ ಗೊಂಬೆ” ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು ಈ ಚಿತ್ರದಲ್ಲಿ ವರನಟ ಡಾ.ರಾಜಕುಮಾರ್ ಪುತ್ರರು ಒಟ್ಟಿಗೆ ಸೇರಿದ್ದಾರೆ. ಹಾಗಂತ ಈ ಮೂರು ಜನ ಒಟ್ಟಿಗೆ ನಟಿಸುತ್ತಿದ್ದಾರೆ ಎಂದುಕೊಳ್ಳಬೇಡಿ ಇವರು ಒಂದಾಗಿರುವುದು ಹಾಡು ಹಾಡುವ ಮೂಲಕ..

ಈ ಚಿತ್ರಕ್ಕಾಗಿ ನಟರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಮೂವರು ಕೂಡ ತಲಾ ಒಂದೊಂದು ಹಾಡನ್ನು ಹಾಡಿದ್ದಾರೆ. ಆ ದೇವ ರೂಪಿಸಿದ ಅಂದದ ಗೊಂಬೆ’ ಎಂಬ ಹಾಡಿಗೆ ಪುನೀತ್ ದನಿಯಾಗಿದ್ದರೆ, ‘ಆಡಿಸಿ ನೋಡು’ ಎಂಬ ಹಾಡನ್ನು ರಾಘವೇಂದ್ರ ರಾಜಕುಮಾರ್ ಹಾಡಿದ್ದಾರೆ. ಇನ್ನು ‘ರಾಜರ ಹಿರಿಮಗ’ ಶಿವರಾಜ್ ಕುಮಾರ್ ಕೂಡ ‘ಪಿಸುಮಾತಿಗೆ ತುಸುಸಲಿಗೆ’ ಎಂಬ ಹಾಡನ್ನು ಹಾಡಿದ್ದಾರೆ.. ಅಷ್ಟೇ ಅಲ್ಲದೆ ರಾಜ್ ಸೋದರಳಿಯ ವಿಜಯ್‌ ರಾಘವೇಂದ್ರ ಅವರು ಕೂಡ ಹಾಡೊಂದಕ್ಕೆ ದನಿಯಾಗಿದ್ದಾರೆ.

ಕಸ್ತೂರಿ ನಿವಾಸ ಕ್ರಿಯೇಷನ್ಸ್ ಲಾಂಛನದಲ್ಲಿ ಶಂಕರಪ್ಪ ಹಾಗೂ ವೇಣುಗೋಪಾಲ್ ಅವರು ನಿರ್ಮಿಸುತ್ತಿರುವ “ಆಡುವ ಗೊಂಬೆ” ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರಾದ ಅನಂತ್ ನಾಗ್, ಸಂಚಾರಿ ವಿಜಯ್ ಮುಖ್ಯ ಪಾತ್ರವನ್ನು ಮಾಡುತ್ತಿದ್ದಾರೆ.. ಉಳಿದಂತೆ ಸುಧಾ ಬೆಳವಾಡಿ, ನಿರೋಷಾ, ರಿಶಿತಾ ಮಲ್ನಾಡ್, ಸೀಮಾ ಗೌಡ, ಖುಷಿ, ಸತೀಶ್, ವೇಣುಗೋಪಾಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 23 ವರ್ಷಗಳ ಬಳಿಕ ನಿರ್ದೇಶನ ಮಾಡುತ್ತಿರುವ ದೊರೆ ಭಗವಾನ್ ಅವರೇ ಸ್ವತಃ ಚಿತ್ರಕ್ಕೆ ಕತೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top