fbpx
ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ ಒಟ್ಟಿಗೆ ನಟಿಸಿ ಜನಮನ ಗೆದ್ದಿದ್ದ ಈ 8 ಎವರ್ಗ್ರೀನ್ ಜೋಡಿಗಳನ್ನ ಈಗಲೂ ಜನ ನೋಡೋಕೆ ತುಂಬಾ ಇಷ್ಟಪಡ್ತಾರೆ

ಸ್ಯಾಂಡಲ್ ವುಡ್ ಅನೇಕ ಶ್ರೇಷ್ಠ ನಟರು ಮತ್ತು ನಟಿಯರನ್ನು ತೆರೆಗೆತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ, ಇದರಲ್ಲಿ ಕೆಲವು ನಟರು ಮತ್ತು ನಟಿಯರು ಉತ್ತಮ ತೆರೆಯ ಕೆಮಿಸ್ಟ್ರಿಯನ್ನು ಹಂಚಿಕೊಂಡು ಜನಮನ ಗೆಲ್ಲಲು ಸಫಲರಾದರು , ಈ ಕೆಮಿಸ್ಟ್ರಿಯಿಂದಲೇ ಗಲ್ಲಾಪೆಟ್ಟಿಗೆಯಲ್ಲಿ ಕೆಲವು ಸಿನೆಮಾಗಳು ಹಿಟ್ ಆದವು , ಈಗಲೂ ಸಹ ಮತ್ತೆ ಮತ್ತೆ ಈ ಜೋಡಿಗಳ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತೇವೆ , ಪರದೆಯ ಮೇಲೆ ಉತ್ತಮ ಜೋಡಿಯಾಗಿ ಮೆರೆದ ಕನ್ನಡ ಚಿತ್ರರಂಗದ ಜೊಡಿ ಚಿತ್ರಗಳನ್ನೂ ಜನ ಇಷ್ಟಪಟ್ಟಿದ್ದಾರೆ .

ಅಂತ ಎವರ್ಗ್ರೀನ್ ಜೋಡಿಗಳು ಯಾವುವು ಗೊತ್ತೇ .

 

 

 

ವಿಷ್ಣುವರ್ಧನ್ ಮತ್ತು ಸುಹಾಸಿನಿ:ಈ ರೀಲ್ ದಂಪತಿಗಳು ಮಾತಾಡ್ ಮಾತಾಡು ಮಲ್ಲಿಗೆ, ಬಂಧನ ,ಮುತ್ತಿನ ಹಾರ , ಸುಪ್ರಭಾತ ,ಸ್ಕೂಲ್ ಮಾಸ್ಟರ್ , ಹಿಮಪಾತ ,ಹೆಂಡತಿಗೇಳ್ಬೇಡಿ ಹೀಗೆ ಅನೇಕ ಕನ್ನಡ ಚಿತ್ರಗಳಲ್ಲಿ ಈ ಜೋಡಿ ನಟಿಸಿದೆ , ಬಂಧನ ಚಿತ್ರದಲ್ಲಿ ಹರೀಶ್ ಪಾತ್ರಧಾರಿಯಾಗಿ ವಿಷ್ಣುವರ್ಧನ್ ಡಾಕ್ಟರ್ ನಂದಿನಿ ಪಾತ್ರದಲ್ಲಿ ಸುಹಾಸಿನಿ ಅದ್ಭುತವಾಗಿ ನಟಿಸಿದ್ದರು ಆಗಿನಿಂದ ಈ ಜೋಡಿ ಜನ ಫೆವರೇಟ್ ಈ ಜೋಡಿ ಸ್ಯಾಂಡಲ್ವುಡ್ನಲ್ಲಿ ಅನೇಕ ಹಿಟ್ಗಳನ್ನು ನೀಡಿ ಜನಮನ ಗೆದ್ದಿದೆ .

ಡಾ. ರಾಜ್ ಕುಮಾರ್ ಮತ್ತು ಲೀಲಾವತಿ:ಕನ್ನಡ ಚಿತ್ರರಂಗದ ಬಹಳ ಹಿಟ್ ಜೋಡಿಯಲ್ಲಿ ಕನ್ನಡದ ರಾಜ್ ಕುಮಾರ್ ಹಾಗು ಲೀಲಾವತಿ ಕೂಡ ಇದ್ದಾರೆ , ಅನೇಕ ರೊಮ್ಯಾಂಟಿಕ್ ಚಲನಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ನಟನೆ ಮಾಡಿದ್ದಾರೆ , ಸುಮಾರು 46 ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ನಟನೆ ಮಾಡಿದೆ , ವೀರ ಕೇಸರಿ , ಭಕ್ತ ಕುಂಬಾರ, ನಾ ನಿನ್ನ ಮರೆಯಲಾರೆ , ಜ್ವಾಲಾಮುಖಿ , ಅಬ್ಬಾ ಆ ಹುಡುಗಿ , ರಣಧೀರ ಕಂಠೀರವ , ಕರುಣೆಯೇ ಕುಟುಂಬದ ಕಣ್ಣು , ನಂದಾ ದೀಪಾ, ಸಂತ ತುಕಾರಾಮ್ ಬಹಳ ಜನಪ್ರಿಯವಾದ ಚಿತ್ರಗಳು .ಕನ್ನಡ ಚಿತ್ರರಂಗದಲ್ಲಿ ಅವರು ನಿಜವಾಗಿಯೂ ಉತ್ತಮ ಜೋಡಿಯಾಗಿದ್ದಾರೆ. ಒಲವು ಮೂಡಿಗಾಗ, ಚಂದನಾಡ ಗೊಂಬೆ ಮತ್ತು ನಾ ನಿಣ್ಣಾ ಬಿಡಾಲಾರೆ ಈ ಜೋಡಿಯ ಕೆಲವು ಅದ್ಭುತ ಚಿತ್ರಗಳಾಗಿವೆ. ವಾಸ್ತವವಾಗಿ, ಈ ಹಿಟ್ ಗಲ್ಲಾಪೆಟ್ಟಿಗೆಯಲ್ಲಿ ಜೋಡಿ ಒಂದೇ ಮಗ್ನವನ್ನು ಮಾಡಲಿಲ್ಲ. 

ಅನಂತ್ ನಾಗ್ ಮತ್ತು ಲಕ್ಷ್ಮಿ:ಕನ್ನಡ ಚಿತ್ರರಂಗದಲ್ಲಿ ನಿಜವಾಗಿಯೂ ಉತ್ತಮ ಜೋಡಿ ಇದು , ಒಲವು ಮೂಡಿದಾಗ , ಚಂದನದ ಗೊಂಬೆ , ನಾ ನಿನ್ನ ಬಿಡಲಾರೆ ,ಇಬ್ಬನಿ ಕರಗಿತು , ಬೆಂಕಿಯ ಬಲೆ, ಬಿಡುಗಡೆಯ ಬೇಡಿ ಹೀಗೆ ಅನೇಕ ಫ್ಯಾಮಿಲಿ ನೋಡಬಹುದಾದ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ ಈ ಜೋಡಿ ಪ್ರೇಕ್ಷಕರನ್ನು ಮೂಡಿ ಮಾಡಲು ಯಶಸ್ವಿಯಾದರು .

ಸುನಿಲ್ ಮತ್ತು ಮಾಲಾಶ್ರಿ:90 ರ ದಶಕದಲ್ಲಿ ಹಿಟ್ ಜೋಡಿಯಾಗಿದ್ದ ಸುನಿಲ್ ಮತ್ತು ಮಾಲಾಶ್ರಿ ಹಲವಾರು ಹಿಟ್ಗಳನ್ನು ನೀಡಿದ್ದರು , ಬೆಳ್ಳಿ ಕಾಲುಂಗುರ , ಸಿಂದೂರ ತಿಲಕ , ಮನ ಮೆಚ್ಚಿದ ಸೊಸೆ , ಮರಣ ಮೃದಂಗ ಹೀಗೆ ಅನೇಕ ಚಿತ್ರಗಳಲ್ಲಿ ಈ ಜೋಡಿ ರೋಮ್ಯಾಂಟಿಕ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದರು , ಈ ಜೋಡಿ ತೆರೆಯ ಮೇಲೆ ಬಹಳ ಮುದ್ದುಮುದ್ದಾಗಿ ಕಾಣಿಸಿಕೊಳ್ಳುತ್ತಿತ್ತು ,ಮಾಲಾಶ್ರೀ ಸ್ವಲ್ಪ ಜೋರು ಎನಿಸಿದರೂ ಸುನಿಲ್ ಅವರ ಚಾಕಲೇಟ್ ಹೀರೋ ಇಮೇಜ್ ಅದಕ್ಕೆ ಹೇಳಿಮಾಡಿಸಿದ ಹಾಗೆ ಇರುತ್ತಿತ್ತು .

 

 

 

ಪುನೀತ್ ರಾಜ್ ಕುಮಾರ್ ಮತ್ತು ರಮ್ಯಾ ಜೋಡಿ:ಅರಸು ,ಆಕಾಶ್ ,ಅಭಿ ಹೀಗೆ ಅನೇಕ ಚಿತ್ರಗಳಲ್ಲಿ ಒಟ್ಟೊಟ್ಟಿಗೆ ನಟಿಸಿದ್ದ ಪುನೀತ್ ರಾಜ್ ಕುಮಾರ್ ಮತ್ತು ರಮ್ಯಾ ಜೋಡಿ ಮೊದಲಿನಿಂದಲೂ ನೋಡಲು ತುಂಬಾ ಕ್ಯೂಟ್ ಎನಿಸುತ್ತಿತ್ತು , ಅಪ್ಪು ಜೊತೆಗೆ ರಮ್ಯಾ ಅಭಿನಯ ಪಕ್ಕದ ಮನೆಯ ಜೋಡಿಯ ಹಾಗೆ ಇರುತ್ತಿತ್ತು .

ಸುದೀಪ್ ಮತ್ತು ರಾಗಿಣಿ ದ್ವಿವೇದಿ:ವೀರ ಮದಕರಿ , ಕಿಚ್ಚ ,ಕೆಂಪೇಗೌಡ ಚಿತ್ರಗಳಲ್ಲಿ ರೋಮ್ಯಾಂಟಿಕ್ ಕೆಮಿಸ್ಟ್ರಿ ಹಂಚಿಕೊಂಡಿದ್ದ ಸುದೀಪ್ ಮತ್ತು ರಾಗಿಣಿ ದ್ವಿವೇದಿ ಪ್ರೇಕ್ಷಕರಿಗೆ ಮತ್ತೊಮ್ಮೆ ಈ ಜೋಡಿಯನ್ನು ತೆರೆಯ ಮೇಲೆ ನೋಡಿದರೆ ಒಳ್ಳೆಯದು ಎನಿಸುತ್ತದೆ .

ಅಂಬರೀಷ್ ಮತ್ತು ಅಂಬಿಕಾ:ಮೂರು ಜನ್ಮ , ಚಕ್ರವ್ಯೂಹ , ಹಸಿದ ಹೆಬ್ಬುಲಿ , ಹಾಂಗ್ ಕಾಂಗ್ ನಲ್ಲಿ ಏಜೆಂಟ್ ಅಮರ್ ಹೀಗೆ ಅನೇಕ ಚಿತ್ರಗಳಲ್ಲಿ ಒಟ್ಟೊಟ್ಟಿಗೆ ನಟಿಸಿದ್ದ ಈ ಜೋಡಿ 90 ರ ದಶಕದ ಹಿಟ್ ಜೋಡಿಗಳಲ್ಲಿ ಒಂದು .

ಸುಧಾ ರಾಣಿ ಮತ್ತು ರಮೇಶ್:ಪಂಚಮವೇದ , ಅನುರಾಗ ಸಂಗಮ , ಶ್ರೀ ಗಂಧ ಹೀಗೆ ಒಟ್ಟೊಟಿಗೆ ನಟಿಸಿದ್ದ ಸುಧಾ ರಾಣಿ ಮತ್ತು ರಮೇಶ್ ಜೋಡಿ ಪ್ರೇಮಿಗಳ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿ ಜನ ಮನ ಗೆದ್ದಿದ್ದಾರೆ , ಈ ಜೋಡಿ ತೆರೆಯ ಮೇಲೆ ಬಹಳ ಮುದ್ದುಮುದ್ದಾಗಿ ಕಾಣಿಸಿಕೊಳ್ಳುತ್ತಿತ್ತು ಇವರ ಚಿತ್ರಗಳಲ್ಲಿ ಹಾಡುಗಳು ಸಹ ಅದ್ಭುತವಾಗಿ ಮೂಡಿಬಂದಿದ್ದವು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top