fbpx
ಸಮಾಚಾರ

ಈ ವಜ್ರದ ವ್ಯಾಪಾರಿಯಿಂದ ನೌಕರರಿಗೆ ಸಿಕ್ಕ ದೀಪಾವಳಿ ಗಿಫ್ಟ್ ಏನ್ ಗೊತ್ತಾ,ಗೊತ್ತಾದ್ರೆ ನೀವು ಬೆಚ್ಚಿ ಬೀಳೋದು ಖಂಡಿತಾ

2017ನ್ನೇ ಇಸವಿಯಲ್ಲಿ ತನ್ನ ನೌಕರರಿಗೆ ವಿಶೇಷ ಗಿಫ್ಟ್ ನೀಡುವ ಮೂಲಕ ಫುಲ್ ಸುದ್ದಿಯಾಗಿದ್ದ ವಜ್ರ ವ್ಯಾಪಾರಿ ರಿಕೃಷ್ಣ ಎಕ್ಸ್ ಪೋರ್ಟ್ಸ್ ಕಂಪನಿಯ ಮಾಲೀಕ ಸಾವಜಿ ಡೊಲಕಿಯಾ ಮತ್ತೆ ಅಂತ ಕಾರಣದಿಂದ ಮತ್ತೆ ಸುದ್ದಿಯಲ್ಲಿ ಇದ್ದಾರೆ .ಹೌದು ಸಾವಜಿ ಡೊಲಕಿಯಾ ಈ ಸಲದ ದೀಪಾವಳಿಗೂ ಕೂಡ ತನ್ನ ನೌಕರರಿಗೆ ವಿಶೇಷ ಗಿಫ್ಟ್ ಕೊಡುವುದಕ್ಕೆ ನಿರ್ಧಾರ ಮಾಡಿದ್ದಾರೆ.ಆ ಸಲ ಕೂಡ ಹಿಂದಿನಂತೆ ಭಾರೀ ಬೆಲೆಯ ಗಿಫ್ಟ್ ನೀಡಲು ನಿರ್ಧರಿಸಿದ್ದಾರೆ ಸಾವಜಿ ಡೊಲಕಿಯಾ,ದೀಪಾವಳಿ ಬೋನಸ್ ರೂಪದಲ್ಲಿ ತನ್ನ ನೌಕರರಿಗೆ 600 ಕಾರು ಮತ್ತು 900 ಜನರಿಗೆ ಎಫ್‍ಡಿ ನೀಡುತ್ತಿದ್ದಾರೆ.

 

 

 

ಇದರ ಹಿಂದಿನ ಉದ್ದೇಶ ನೌಕರರನ್ನು ಪ್ರೋತ್ಸಾಹಿಸಲು ಕಾರುಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ, ವಿಶೇಷ ಬೋನಸ್ ಪಡೆಯಲು 1500 ಜನರನ್ನು ಆಯ್ಕೆ ಮಾಡಲಾಗಿತ್ತು. 600 ಜನರು ತಮಗೆ ಕಾರು ಬೇಕೆಂದು ಮನವಿ ಮಾಡಿದ್ರೆ, ಉಳಿದ 900 ನೌಕರರು ಅದೇ ಹಣವನ್ನು ಎಫ್‍ಡಿ ಮಾಡಬೇಕೆಂದು ಕೇಳಿಕೊಂಡರು. ಕಂಪನಿಯ ನೌಕರರ ಇಚ್ಚೆಯನುಸಾರವಾಗಿ ಬೋನಸ್ ನೀಡಲಾಗುತ್ತಿದೆ. ಇದಕ್ಕಾಗಿ ಬರೋಬ್ಬರಿ 50 ಕೋಟಿ ರೂ. ವ್ಯಯಿಸಲಾಗಿದೆ. ಮೊದಲ ಬಾರಿಗೆ ನಮ್ಮ ಕಂಪನಿಯ ನಾಲ್ವರು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಗಿಫ್ಟ್ ಪಡೆಯಲಿದ್ದಾರೆ ಎಂದು ಸಾವಜಿ ಡೊಲಕಿಯಾ ತಿಳಿಸಿದ್ದಾರೆ.600 ನೌಕರರಿಗೆ ಮಾರುತಿ ಸುಜುಕಿ ಸೆಲೆರಿಯೋ ಕಾರ್ ಸಿಗಲಿದೆ. ಹಬ್ಬದ ದಿನದಂದು 6,000 ಸಾವಿರ ಜನರಿಗೆ ಔತಣಕೂಟವನ್ನು ಸಹ ಏರ್ಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ಕಂಪನಿಯಲ್ಲಿ 25 ವರ್ಷ ಪೂರೈಸಿದ್ದ ದೆಹಲಿ ಶಾಖೆಯ ಮೂವರಿಗೆ ಬೆಂಜ್ ಕಾರ್ ಉಡುಗೊರೆಯಾಗಿ ನೀಡಿದ್ದರು. ಈ ಬೆಂಜ್ ಕಾರನ್ನು ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್‍ರ ಮೂಲಕ ಕೊಡಿಸಲಾಗಿತ್ತು.

ಒಂದು ಸಲ ನಾವು ನೀವು ಇದನ್ನ ಕೇಳಿದ್ರೆ ಅಬ್ಬಾ ಅನಿಸೋದು ಖಂಡಿತಾ ,ಒಂದು ಕಡೆ ಅವರ ಧಾರಾಳತನವನ್ನು ಹೊಗಳ ಬೇಕೋ ಅಥವಾ ಹಂಚಿ ತಿನ್ನುವ ಅವರ ವಿಶಾಲ ಮನೋಭಾವವನ್ನು ಹೊಗಳಬೇಕೋ ಗೊತ್ತಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top