fbpx
ಮನೋರಂಜನೆ

ಚಿತ್ರರಂಗದ ಹಿರಿಯರ ಬಗ್ಗೆ ಟ್ವೀಟ್ ಮಾಡಿದ ಶ್ರುತಿ ಹರಿಹರನ್: ಆ ಪತ್ರದಲ್ಲಿ ಇರುವುದೇನು?

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ.. ಇನ್ನೂ ಕೆಲವರು ಈ ವಿಚಾರಕ್ಕೆ ರಾಜಕೀಯ ಎಳೆದು ಧರ್ಮದ ಬಣ್ಣ ಕತ್ತೆ ಗಬ್ಬೆಬ್ಬಿಸಿದ್ದಾರೆ.. ಶ್ರುತಿ ಹರಿಹರನ್ ಮಾಡಿರುವ ಆರೋಪ ಈಗ ಯಾವ್ಯಾವುದೋ ತಿರುವುಗಳನ್ನ ಪಡೆದುಕೊಂಡಿದೆ. ಅರ್ಜುನ್ ಸರ್ಜಾ ಅವರನ್ನು ಸಮರ್ಥಿಸುವ ಭರದಲ್ಲಿ ಶೃತಿ ಹರಿಹರನ್ ನಡತೆ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವು ನಿರ್ಮಾಪಕರು, ನಟರು, ಜನಸಾಮಾನ್ಯರು ಮಿತಿಮೀರಿ ವರ್ತಿಸುತ್ತಿದ್ದಾರೆ. ಅಂತೆಯೇ ಶೃತಿಯನ್ನು ಸಮರ್ಥಿಸುವ ಭರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಸ್ರೀಪೀಡಕನ ಪಟ್ಟ ಕಟ್ಟುವ ಕೆಲಸವೂ ಚಾಲ್ತಿಯಲ್ಲಿದೆ . ಈ ಎಲ್ಲಾ ವಿಚಾರಗಳ ಬಗ್ಗೆ ಸ್ವತಃ ಶ್ರುತಿ ಹರಿಹರನ್ ಅವರೇ ಟ್ವಿಟರ್ ಮೂಲಕ ಆರು ಅಂಶಗಳನ್ನ ಮುಂದಿಟ್ಟಿದ್ದಾರೆ.

ಟ್ವಿಟರ್ ನಲ್ಲಿ ಪತ್ರವೊಂದನ್ನು ಬರೆದಿರುವ ಶ್ರುತಿ ಹರಿಹರನ್ ಚಿತ್ರರಂಗದ ಹಿರಿಯರ ವರ್ತನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
“ಚಲನಚಿತ್ರ ವಾಣಿಜ್ಯ ಮಂಡಳಿಯ ಹಿರಿಯರಾದ ಮುನಿರತ್ನ ಸರ್, ಸಾರಾ ಗೋವಿಂದು ಅವರಿಗೆ, ಚೆನ್ನೇ ಗೌಡರಿಗೆ, ಹಾಗೂ ಇತರ ಗಣ್ಯರಲ್ಲಿ ಒಂದು ಮನವಿ: ಕಲಾವಿದರನ್ನು ರಕ್ಷಿಸೋ ನ್ಯಾಯಾವನ್ನು ಒದಗಿಸುವ ಜವಾಬ್ದಾರಿ ಹೊತ್ತವರು ನೀವು. ತಾವು ನೀಡುವ ನ್ಯಾಯ ತರ್ಕಬದ್ದ ಹಾಗೂ ಸಮಾನವಾಗಿರಬೆಆಕು. ಚಲನಚಿತ್ರ ಉದ್ಯಮ ಹೆಂಗಸರಿಗೆ ಸುರಕ್ಷೆತವಾಗಿರುವಂತೆ ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸಂಗೀತ್ ಭಟ್, ಸಂಜನಾ ಗಲ್ರಾಣಿ, ಏಕ್ತಾ ಹಾಗೂ ಇತರರ ಅನುಭವ ಕೇಳಿದಾಗ ಅದು ಸುರಕ್ಷಿತ ಅಲ್ಲ ಅನ್ನುವುದು ಸ್ಪಷ್ಟವಾಗಿ ಕಾಣುತ್ತದೆ ತಾನೆ? ಅದನ್ನು ಸರಿಪಡಿಸುವ ಬದಲು ಕೆಲ ಮಾಧ್ಯಮಗಳಲ್ಲಿ ಕೂತು ನಮ್ಮಣ್ಣ ಮಾನಹಾನಿಯಾಗಿ ಮಾತಾಡಿ, ತೇಜೋವಧೆ ಮಾಡುತ್ತಾ ಸ್ತ್ರೀ ವಿರೋಧಿ ಮಾತುಗಳನ್ನ ಅಡುವುದನ್ನ ಬಿಡಿ. ಅ ಕಾಲ ಮುಗಿದಿದೆ. ಸಮಯ ಬದಲಾಗಿದೆ. ನೀವು ಸಾದ್ಯವಾದರೆ ಬದಲಾಗಿ.” ಎಂದು ಬರೆದುಕೊಳ್ಳುವ ಮೂಲಕ ವಾಣಿಜ್ಯ ಮಂಡಳಿಯಲ್ಲಿರುವವರಿಗೆ ಟಾಂಗ್ ಕೊಟ್ಟಿದ್ದಾರೆ.

 

 

ಅಲ್ಲದೆ ತಮ್ಮ ಆರೋಪವನ್ನು ಪ್ರಶ್ನಿಸುತ್ತಿರುವವರಿಗೂ ಉತ್ತರಿಸಿರುವ ಶ್ರುತಿ ಕೆಲವೊಂದು ಅಂಶಗಳನ್ನು ಮುಂದಿಟ್ಟಿದ್ದಾರೆ.
1.ನನಗೆ ಮತ್ತು Mr. ಅರ್ಜುನ್ ಸರ್ಜಾಗೆ ಮಾತ್ರ ಸತ್ಯ ಗೊತ್ತಿದೆ. ಇದು ಅರ್ಜುನ್ ಸರ್ಜಾ ವಿರುದ್ಧ ನಾನು ಎತ್ತಿದ ದನಿ. ನೀವು ಊಹಿಸಿದ ಹಾಗೆ ನನ್ನ ಹಿಂದೆ ಯಾರೂ ಇಲ್ಲ. ನನಗೆ ಹೀಗೆ ಮಾಡಲು ಯಾರೂ ಕುಮ್ಮಕ್ಕು ಕೊಟ್ಟಿಲ್ಲ. ಚೇತನ್, ಪ್ರಕಾಶ್ ರೈ, ಕವಿತಾ ಲಂಕೇಶ್ ಯಾರೊಬ್ಬರು ಇದಕ್ಕೆ ಕಾರಣರಲ್ಲ. ನನ್ನ ಬೆಂಬಲಕ್ಕೆ ನಿಂತವರು ಅವರು, ಅದಕ್ಕಾಗಿ ಕೃತಜ್ಞಳಾಗಿರುತ್ತೇನೆ ಎಂದು ಶೃತಿ ಸ್ಪಷ್ಟಪಡಿಸಿದ್ದಾರೆ.

2.ಅರ್ಜುನ್ ಸರ್ಜಾ ವಿರುದ್ಧ ನಾನು ಮಾಡಿರುವ ಆರೋಪಗಳು ನಿಜ. ಸರ್ಜಾ ಒಂದು ವೇಳೆ ಮಾನನಷ್ಟ ಮೊಕದ್ದಮೆ ಹಾಕಿದರೇ ನಾನು ಕೂಡ ಕಾನೂನಿನ ಹೋರಾಟಕ್ಕೆ ಸಿದ್ಧವಾಗಿದ್ದೇನೆ’ ಎಂದು ಶ್ರುತಿ ಹೇಳುತ್ತಿದ್ದಾರೆ.

3. ಈ ಕುರಿತಾಗಿ ಯಾರಿಗೂ ನಾನು ಸಾಕ್ಷ್ಯ ಒದಗಿಸುವ ಅಗತ್ಯವಿಲ್ಲ. ನಿಮಗೆ ಯಾರ ಪರ ನಿಲ್ಲಬೇಕೆನಿಸುತ್ತದೋ ಅವರ ಪರ ನಿಲ್ಲಬಹುದು. ಕೇಸು ಕೋರ್ಟಿಗೆ ಬಂದರೆ ನಾನು ಖಂಡಿತವಾಗಿಯೂ ಎಲ್ಲಾ ಸಾಕ್ಷ್ಯಗಳನ್ನೂ ಕೋರ್ಟಿಗೆ ಒದಗಿಸುತ್ತೇನೆ.

4.ಸರ್ಜಾ ಕುಟುಂಬದ ಫ್ಯಾನ್ಸ್ ಕ್ಲಬ್ ಗಳಿಂದ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ ಎಂದು ಶೃತಿ ಹೇಳಿದ್ದು, ಟ್ರೋಲ್ ಮತ್ತು ನನ್ನ ಮೇಲಿನ ಬರಹಗಳಿಂದ ನನಗೇನೂ‌ ಆಗಬೇಕಿಲ್ಲ. ಸತ್ಯ ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ನಿಮಗೆ ತೋಚಿದ್ದು ನೀವು ಮಾಡಿ, ನನಗೆ ಏನು ಮಾಡಬೇಕು ಎನ್ನುವುದು ಗೊತ್ತಿದೆ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top