ಅರೋಗ್ಯ

ಮುಖದ ಮೇಲೆ ರಂದ್ರಗಳು ಹೆಚ್ಚಾಗಿ ಮುಖದ ಅಂದ ಹಾಳು ಮಾಡಿದ್ರೆ ಚಿಂತೆ ಮಾಡ್ಬೇಡಿ ,ಹೆಚ್ಗೆ ಖರ್ಚು ಇಲ್ದಂಗೆ ಸರಿ ಮಾಡ್ಕೋಬಹುದು.

ಮುಖದ ಮೇಲೆ ಎಣ್ಣೆ ಹೆಚ್ಚಾಗಿ ಮುಖದ ಮೇಲೆ ರಂಧ್ರಗಳು ಮೂಡಲು ಶುರುವಾಗುತ್ತದೆ ಈ ರಂಧ್ರಗಳು ಮುಂದೆ ಕಪ್ಪು ಕಲೆಗಳು, ಮಚ್ಚೆಗಳು ಮತ್ತು ಗುಳ್ಳೆಗಳನ್ನು ಉಂಟು ಮಾಡುತ್ತದೆ, ಎಣ್ಣೆ ಚರ್ಮದವರಿಗೆ ಈ ಸಮಸ್ಯೆ ಇನ್ನೂ ಬಹಳ ಹೆಚ್ಚಾಗುತ್ತದೆ.

 

 

 

ಬನ್ನಿ ಈ ಮುಖದ ಮೇಲಿನ ರಂಧ್ರಗಳ  ಸಮಸ್ಯೆಗೆ ಪರಿಹಾರವನ್ನು ತಿಳಿದುಕೊಳ್ಳೋಣ.

ಮಂಜುಗಡ್ಡೆ:ಮೇಕಪ್ ಮಾಡಿಕೊಳ್ಳುವ ಮುಂಚೆ ಮಂಜುಗಡ್ಡೆಯನ್ನು ಉಪಯೋಗಿಸಿ ಮುಖವನ್ನು ಒರೆಸಿಕೊಂಡರೆಮುಖದ ಮೇಲಿನ ರಂಧ್ರಗಳನ್ನು ಮರೆಮಾಚಲು ಸಹಾಯ ಮಾಡುತ್ತದೆ.ಬಟ್ಟೆಯಲ್ಲಿ ಮಂಜುಗಡ್ಡೆಯನ್ನು ಸುತ್ತಿ ಹದಿನೈದು ರಿಂದ ಮೂವತ್ತು ಸೆಕೆಂಡುಗಳ ಮುಖದ ಮೇಲೆ ಒರೆಸಿಕೊಂಡರು ಮುಖದ ಮೇಲಿನ ರಂಧ್ರಗಳು ಮಾಯವಾಗುತ್ತದೆ.

ಆಪಲ್ ಸೀಡರ್ ವಿನಿಗರ್:ಕೆಲವು ಹನಿ ಆಪಲ್ ಸೀಡರ್ ವಿನಿಗರ್ ಹಾಗೂ ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖದ ಮೇಲೆ ಹಚ್ಚಿಕೊಂಡು ಇಪ್ಪತ್ತರಿಂದ ಮೂವತ್ತು ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ಮುಖವನ್ನು ಬೆಚ್ಚಗಿನ ನೀರಿನಲ್ಲಿಶುದ್ಧಿ ಮಾಡಿ

ಮೊಟ್ಟೆ:ಮೊಟ್ಟೆಯ ಬಿಳಿ ಭಾಗಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಮುಖದ ಮೇಲೆ ಹಚ್ಚಿಕೊಂಡು ಮೂವತ್ತು ನಿಮಿಷಗಳ ಕಾಲ ಹಾಗೇ ಬಿಟ್ಟು ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ

ಸಕ್ಕರೆ:ಒಂದು ಚಿತ್ರ ಸಕ್ಕರೆಗೆ ಆಲಿವ್ ಎಣ್ಣೆ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ ಹದಿನೈದು ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ

ಮುಲ್ತಾನಿ ಮಿಟ್ಟಿ:ಮುಲ್ತಾನಿ ಮಟ್ಟಿಗೆ ಗುಲಾಬಿ ಜಲವನ್ನು ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಒಣಗಲು ಬಿಟ್ಟು ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ

ಜೇನು ಮತ್ತು ನಿಂಬೆ ರಸ:ಮೂರ್ನಾಲ್ಕು ಹನಿ ಜೇನು ತುಪ್ಪವನ್ನು ಮೂರ್ನಾಲ್ಕು ಹನಿ ನಿಂಬೆ ರಸದಲ್ಲಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತೊಳೆಯಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top