ಮನೋರಂಜನೆ

‘ದಿ ವಿಲನ್’ ಸಿನಿಮಾ ನೋಡಲು ಜಪಾನ್’ನಿಂದ ಬಂದ ಕಿಚ್ಚನ ಕ್ರೇಜಿ ಫ್ಯಾನ್- ಇದು ಅಭಿಮಾನದ ಮ್ಯಾಜಿಕ್.

ಅಭಿನಯ ಚಕ್ರವರ್ತಿ ಸುದೀಪ್​, ಕೇವಲ ಸ್ಯಾಂಡಲ್​ವುಡ್​ನ ನಟನಷ್ಟೇ ಅಲ್ಲ. ತನ್ನ ವಿಭಿನ್ನ ಮ್ಯಾನರಿಸಂನಿಂದ ದೇಶ, ಭಾಷೆಗೂ ಮೀರಿ ಬೆಳೆದು ನಿಂತಿರೋ ಕಲಾವಿದ.. ಸುದೀಪ್ ಸಿನಿಮಾ ನೋಡಲು, ಆಟೋಗ್ರಾಫ್ ಪಡೆಯಲು , ಸೆಲ್ಫಿ ತೆಗೆಸಿಕೊಳ್ಳಲು ದೂರದ ಊರಿಂದ ಅಭಿಮಾನಿಗಳು ಬರುವುದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕಿಚ್ಚ ಹುಚ್ಚು ಅಭಿಮಾನಿ ‘ದಿ ವಿಲನ್’ ಚಿತ್ರ ನೋಡಲು ಮತ್ತು ಸುದೀಪ್‌ರನ್ನು ಮೀಟ್ ಮಾಡಲು ಜಪಾನ್‌ನಿಂದ ಬಂದಿದ್ದಾರೆ. ಆ ಕ್ರೇಜಿ ಫ್ಯಾನ್ ಹೆಸರು ಜುಂಕೋ..

 

 

ತೆಲುಗಿನ ‘ಈಗ’ ಚಿತ್ರದ ಮೂಲಕ ಪ್ರಪಂಚದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟ ಕಿಚ್ಚಾ ಸುದೀಪ್. ಆ ಚಿತ್ರ ಜಪಾನ್‌ನಲ್ಲಿ ತೆರೆಕಂಡಿತ್ತು. ಅದು ಸೂಪರ್ ಹಿಟ್ ಆಗಿತ್ತು ಕೂಡ. ಅಲ್ಲಿನ ಜನತೆಗೆ ಸುದೀಪ್ ಇಷ್ಟವಾಗಿದ್ದರು. ಚಾಕೊಲೆಟ್ ಪೇಪರ್‌ನಲ್ಲಿ ಸುದೀಪ್ ಫೋಟೋ ಪ್ರಿಂಟ್ ಹಾಕಿಸಿದ್ದರು ಅಲ್ಲಿನ ಅಭಿಮಾನಿಗಳು. ಇದೀಗ ಅಲ್ಲಿನ ಕಟ್ಟಾ ಅಭಿಮಾನಿಯೊಬ್ಬರು ‘ದಿ ವಿಲನ್’ ಸಿನಿಮಾ ನೋಡಲುಬೆಂಗಳೂರು ಫ್ಲೈಟ್ ಹತ್ತಿಕೊಂಡು ಬಂದಿದ್ದಾರೆ.

ಕಳೆದವಾರ ತೆರೆಕಂಡು ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಮಾರಣಹೋಮ ಮಾಡಿರುವ ಕಿಚ್ಚ ಸುದೀಪ್ ಮತ್ತು ಶಿವಣ್ಣ ಅಭಿನಯದ ‘ದಿ ವಿಲನ್’ ಸಿನಿಮಾ ನೋಡಲೆಂದೇ ಬೆಂಗಳೂರಿಗೆ ಆಗಮಿಸಿದ್ದ ಜುಂಕೋ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.. ನಂತರ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ಅವರನ್ನು ಭೇಟಿಯಾಗಿ ಜುಂಕೋ ಕೆಲಹೊತ್ತು ಕಾಲಕಳೆದಿದ್ದಾರೆ.. ಸಿನಿಮಾ ನೋಡಲೆಂದೇ ಸುಮಾರು 6500 ಕಿಲೋ ಮೀಟರ್ ಪ್ರಯಾಣ ಮಾಡುವುದು ಸುಲಭದ ಮಾತಲ್ಲ. ಇಂಥಾ ಅಭಿಮಾನಿಗಳನ್ನ ಪಡೆದಿರುವ ಕಿಚ್ಚ ನಿಜಕ್ಕೂ ಧನ್ಯ.

ಅಂದಹಾಗೆ ಈ ಜಪಾನ್ ಅಭಿಮಾನಿ ಸುದೀಪ್ ಚಿತ್ರ ವೀಕ್ಷಿಸಲು ಬೆಂಗಳೂರಿಗೆ ಬರುತ್ತಿರುವುದು ಇದೆ ಮೊದಲೇನಲ್ಲಾ, ಈ ಹಿಂದೆ ಮಾಣಿಕ್ಯ,ರನ್ನ. ಹೆಬ್ಬುಲಿ, ಕೋಟಿಗೊಬ್ಬ2 ಚಿತ್ರಗಳ ಬಿಡುಗಡೆಯಾದಾಗ ಮತ್ತು ಸುದೀಪ್ ಹುಟ್ಟುಹಬ್ಬದ ದಿನದಂದೂ ಬೆಂಗಳೂರಿಗೆ ಬಂದು ಸುದೀಪ್ ಭೇಟಿ ಮಾಡಿ ಹೋಗಿದ್ದರು. ‘ದಿ ವಿಲನ್’ ಚಿತ್ರದ ಸುದೀಪ್ ಫೋಟೋವನ್ನು ತನ್ನ ಮೊಬೈನಲ್ಲೂ ಹಾಕಿಕೊಂಡು ಅಭಿಮಾನವನ್ನು ಪ್ರದರ್ಶಿಸಿದ್ದಾರೆ ಜುಂಕೋ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top