fbpx
ದೇವರು

500 ವರ್ಷ ಪುರಾತನವಾದ ಮಹಿಮಯುತ ಸೂಳೇ ಭಾವಿ ಮಹಾಲಕ್ಷ್ಮಿ ದೇವಿ ಮಹಿಮೆ,ಈ ದೇವಿಗೆ ಈ ಒಂದು ಹರಕೆ ಹೊತ್ತರೆ ಸಾಕಂತೆ ಇಷ್ಟಾರ್ಥಗಳು ಪಟ್ ಅಂತ ಸಿದ್ಧಿಯಾಗುತ್ತದಂತೆ

ಈಕೆ ಕೋಮಲ ಮನಸ್ಸಿನ ಶಕ್ತಿ ದೇವತೆ.ಇಡೀ ಗ್ರಾಮವೇ ಇವಳ ದಾಸಾನುದಾಸರು.ನವರಾತ್ರಿಯಲ್ಲಿ ಈ ತಾಯಿಯ ರೂಪ ನೋಡುವುದೇ ಕಣ್ಣಿಗೆ ಹಬ್ಬ. ನವರಾತ್ರಿ ಆರಂಭವಾದರೆ ಈ ದೇವಿ ದೇವಸ್ಥಾನದಲ್ಲಿ ಸಂಭ್ರಮ ಮುಗಿಲು ಮುಟ್ಟುತ್ತದೆ.ಇಡೀ ಗ್ರಾಮವೇ ದೇವಿಯ ಆರಾಧನೆಯಲ್ಲಿ ಮಗ್ನ ವಾಗುತ್ತದೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಇದ್ದಾರೆ. ಈ ದೇವಿಗೆ ಅಪಾರ ಸಂಖ್ಯೆಯ ಭಕ್ತರು ಇದ್ದಾರೆ. ಇವಳೇ ಸುಳೇಭಾವಿ ಮಹಾಲಕ್ಷ್ಮಿ ದೇವಿ. ಇಡೀ ಗ್ರಾಮದ ಆರಾಧ್ಯ ದೇವಿಯಾದ ಈಕೆ ಶ್ರೀಮನ್ನಾರಾಯಣನ ಒಡತಿ. ಕಡು ಬಡವರನ್ನು ಶ್ರೀಮಂತನನ್ನಾಗಿಸುವ ಕಾಮಧೇನು. ಭಕ್ತರು ಬೇಡಿದ್ದನ್ನು ಕರುಣಿಸುವ ಕರುಣಾಮಯಿ. ಇದು ಉತ್ತರ ಕರ್ನಾಟಕದ ಹೆಬ್ಬಾಗಿಲು , ಕುಂದಾ ನಗರಿ ಎಂದೇ ಹೆಸರಾಗಿರುವ ಬೆಳಗಾವಿ ತಾಲೂಕಿನ ಶ್ರೀಕ್ಷೇತ್ರ ಸುಳೇಭಾವಿ. ಇಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನೆಲೆ ನಿಂತಿರುವ ಈ ತಾಯಿಯು ಸೂಳೇಭಾವಿ ಮಹಾಲಕ್ಷ್ಮಿ ಎಂದೇ ಪ್ರಸಿದ್ಧಿಯಾಗಿದ್ದಾಳೆ. ಇತಿಹಾಸ ಪುರಾಣ ಪ್ರಸಿದ್ಧವಾಗಿರುವ ಈ ದೇವಾಲಯದಲ್ಲಿ ನವರಾತ್ರಿ ಆಚರಣೆ ಅದ್ದೂರಿಯಾಗಿ ನೆರವೇರುತ್ತದೆ.

ನವರಾತ್ರಿ ವೇಳೆ ದೇವಿಯ ದೇವಾಲಯದಲ್ಲಿ ಅದ್ದೂರಿ ಪೂಜೆ ಆಚರಣೆಗಳು ಇರುವುದು ಸಹಜ. ಆದರೆ ಈ ದೇವಾಲಯದಲ್ಲಿ ನವರಾತ್ರಿ ಆಚರಣೆ ಹೆಚ್ಚು ಕಳೆ ಕಟ್ಟುವುದಕ್ಕೆ ಕಾರಣವಿದೆ. ಅದೇನೆಂದರೆ ಈ ದೇವಿಗೆ 5 ವರ್ಷಕ್ಕೊಮ್ಮೆ ಮಾತ್ರ ಜಾತ್ರೆ ನಡೆಯುತ್ತದೆ. ಹೀಗಾಗಿ ನವರಾತ್ರಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ನವರಾತ್ರಿಯ ವೇಳೆ ಇಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತದೆ. ದೇವಿ ಪಾರಾಯಣದ ಮೂಲಕ ನವರಾತ್ರಿಗೆ ಚಾಲನೆ ಸಿಗುತ್ತದೆ. ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಅಲಂಕಾರಗಳು ಇರುತ್ತವೆ. ನವರಾತ್ರಿಯ ಪ್ರತಿ ದಿನವೂ ದೇವಿಗೆ ಹೊಸ ಸೀರೆ ಉಡಿಸಲಾಗುತ್ತದೆ. ಇನ್ನೂ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ 2 ಕೆಜಿಗೂ ಅಧಿಕ ಚಿನ್ನದ ಆಭರಣಗಳು ಈ ತಾಯಿಯ ಬಳಿ ಇವೆ. ಈ ಎಲ್ಲ ಒಡವೆಗಳನ್ನು ತೊಡಿಸಿ ವಿಶೇಷ ರೀತಿಯಲ್ಲಿ ತಾಯಿಯನ್ನು ಸಿಂಗಾರ ಮಾಡಲಾಗುತ್ತದೆ.

 

 

 

ನವರಾತ್ರಿಯ ವೇಳೆ ಮಹಾಲಕ್ಷ್ಮಿ ದೇವಿ ಸಾಕ್ಷಾತ ಶಕ್ತಿ ಸ್ವರೂಪಿಣಿ ಯಾಗುತ್ತಾಳೆ. 9 ದಿನಗಳ ಕಾಲ ದೇವಿಯ ವಿಶಿಷ್ಟ ರೂಪಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ನಾಡಿನ ಹಲವು ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬರುತ್ತಾರೆ.ನವರಾತ್ರಿಯ ವೇಳೆ ಸೂಳೆಭಾವಿ ಮಹಾಲಕ್ಷ್ಮಿ ದೇವಿ ಜಾಗೃತವಾಗಿರುತ್ತಾಳೆ. ಆದ್ದರಿಂದಲೇ ಈ ವೇಳೆ ದೇವಿಯನ್ನು ಆರಾಧಿಸಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ. ಅಷ್ಟೇ ಅಲ್ಲ ನವರಾತ್ರಿಯಲ್ಲಿ ದೇವಿಯ ಬಳಿ ಏನೇ ಬೇಡಿಕೆಗಳನ್ನು ಕೋರಿಕೊಂಡರು ಸಿದ್ಧಿಸುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಇದು ಸಾಕ್ಷಾತ್ ಮಹಾಲಕ್ಷ್ಮಿಯೇ ಇಚ್ಛೆಪಟ್ಟು ನೆಲೆಸಿರುವ ದಿವ್ಯಕ್ಷೇತ್ರ. ಈ ಪುರಾತನ ಮೂರ್ತಿ ದಿವ್ಯ ತೇಜಸ್ಸಿಗೆ ಬೆರಗಾಗದವರು ಇಲ್ಲ. ಇಂತಹ ಅಪರೂಪದ ಮೂರ್ತಿಯನ್ನು ನೀವು ಬೇರೆಲ್ಲೂ ನೋಡುವುದಕ್ಕೆ ಸಾಧ್ಯವಿಲ್ಲ. ಸೊಳೆಭಾವಿ ಮಹಾಲಕ್ಷ್ಮಿ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ಭಾಗದ ಜನರ ಆರಾಧ್ಯ ದೇವಿ. ನಂಬಿದ ಜನರ ಭಕ್ತರ ಪಾಲಿನ ಆರಾಧ್ಯ ದೇವತೆ. ಭಕ್ತರ ಪಾಲಿನ ಸಂಜೀವಿನಿ, ಕಷ್ಟ ಎಂದು ಬರುವ ಭಕ್ತರನ್ನು ಕೈಹಿಡಿದು ಕಾಪಾಡುವ ದೇವತೆ. ಸುಳ್ಳು, ಮೋಸ ಮಾಡುವವರಿಗೆ ತಕ್ಕ ಶಾಸ್ತಿ ಮಾಡುವ ದೇವತೆ.

ಪೌರಾಣಿಕ ಐತಿಹ್ಯವುಳ್ಳ ಈ ಕ್ಷೇತ್ರದಲ್ಲಿ ಲಕ್ಷ್ಮೀ ನೆಲೆಸಿರುವುದರ ಹಿಂದೆ ಒಂದು ರೋಚಕ ಕಥೆ ಇದೆ.
ಹಿಂದಿ ರಾಕ್ಷಸರು ಇಲ್ಲಿರುವ ಜನರಿಗೆ ಸಾಕಷ್ಟು ಹಿಂಸೆಯನ್ನು ಕೊಡುತ್ತಿದ್ದರಂತೆ. ಆಗ ಇಲ್ಲಿನ ಸಾಧು ಸಂತರು ಲಕ್ಷ್ಮಿ ದೇವಿಯ ಮೊರೆ ಹೋದರು. ಆಗ ದೇವಿ ಸಂಕಷ್ಟದಲ್ಲಿರುವ ತನ್ನ ಭಕ್ತರನ್ನು ಕಲ್ಯಾಣ ಮಾಡುವ ಸಲುವಾಗಿ ಪ್ರಕಟವಾಗುತ್ತದೆ. ತನ್ನ ಭಕ್ತರಿಗೆ ಹಿಂಸೆ ನೀಡುತ್ತಿದ್ದ ರಾಕ್ಷಸರನ್ನು ವದೆ ಮಾಡಿದಳು. ನಂತರ ಭಕ್ತರ ಇಚ್ಛೆಯನುಸಾರ ಮನುಕುಲ ಕಲ್ಯಾಣಕ್ಕಾಗಿ ದೇವಿ ಇಲ್ಲೇ ನೆಲೆಸಿದಳು ಎನ್ನಲಾಗುತ್ತದೆ. ಪುಟ್ಟ ಗುಡಿಯಲ್ಲಿದ್ದ ದೇವಿಗೆ ಒಂದು ದಿನ ಶ್ರೀಮಂತನೊಬ್ಬ ಸಂತಾನಕ್ಕಾಗಿ ಬೇಡಿದ್ದನಂತೆ, ಮಗುವಾದರೆ ದೇವಿಗೆ ಗುಡಿ ಕಟ್ಟುವ ಹರಕೆ ಹೊತ್ತುಕೊಂಡ ನಂತೆ, ಅಂತೆಯೇ ಈ ತಾಯಿಯ ಹರಕೆ ಹೊತ್ತ ನಂತರ ಆ ದಂಪತಿಗಳಿಗೆ ಹೆಣ್ಣು ಮಗು ಜನಿಸಿತ್ತಂತೆ. ಆ ಶ್ರೀಮಂತ ಈ ದೇವಿಯ ಭಕ್ತಿಗೆ ತಲೆಬಾಗಿ ಸುಂದರವಾದ ದೇಗುಲವನ್ನು ನಿರ್ಮಿಸಿದ ಎನ್ನಲಾಗುತ್ತದೆ. ಸೂಳೆಬಾವಿ ಮಹಾಲಕ್ಷ್ಮಿ ತನ್ನ ಮಹಿಮೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಸಂಪಾದಿಸಿದ್ದಾಳೆ. ಇವಳ ಬಳಿ ಹರಕೆ ಕಟ್ಟಿಕೊಂಡಿರುವ ಭಕ್ತರು ತಾಯಿಗೆ ಉದಾರ ಮನಸ್ಸಿನಿಂದ ಕಾಣಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಭಕ್ತರು ನೀಡಿರುವ ಕಾಣಿಕೆಯಿಂದ ದೇವಿಯ ದೇವಸ್ಥಾನ ಇಂದು ಈ ಮಟ್ಟಿಗೆ ಜೀರ್ಣೋದ್ಧಾರವಾಗಿದೆ. ದೇವಾಲಯವು ಹೊಸತಾದರೂ ಇಲ್ಲಿರುವ ಮೂರ್ತಿ ಮಾತ್ರ 500 ವರ್ಷಗಳ ಪುರಾತನವಾದದ್ದು. ಈ ಮೂರ್ತಿಯ ತೇಜಸ್ಸು ಅಂದಿನಿಂದ ಇಂದಿನವರೆಗೂ ಒಂದಿಷ್ಟು ಕಡಿಮೆಯಾಗಿಲ್ಲ.
ಈ ಸೂಳೇಭಾವಿ ಮಹಾಲಕ್ಷ್ಮಿ ಇಲ್ಲಿ ದಶಾವತಾರದಲ್ಲಿ ದರ್ಶನ ನೀಡುತ್ತಾಳೆ.

 

 

 

ದೇವಿಯ ಇನ್ನೊಂದು ವಿಶೇಷ ಎಂದರೆ ಈಕೆ ನರಿ, ಹುಲಿ, ಗೂಬೆ ಸಿಂಹ, ನವಿಲು ಹೀಗೆ ಐದು ವಾಹನಗಳ ಮೇಲೆ ಕುಳಿತಿದ್ದಾಳೆ. ಹೀಗೆ ಹಲವು ದಶಾವತಾರಗಳು ಹಾಗೂ 5 ವಾಹನಗಳ ಮೇಲೆ ಕುಳಿತಿರುವ ಮಹಾಲಕ್ಷ್ಮಿಯ ಮತ್ತೊಂದು ಮೂರ್ತಿ ಬೇರೆಲ್ಲೂ ಕಾಣಸಿಗುವುದಿಲ್ಲ.

ಪುಷ್ಪ ಪ್ರಶ್ನೆಯ ಮೂಲಕ ಕೆಲಸ ಆಗುವ ಸುಳಿವು ನೀಡುತ್ತಾಳೆ ದೇವಿ ನಾಣ್ಯ ಹೊಡೆಯುವ ಹರಕೆ ಹೊತ್ತರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಸೂಳೆಬಾವಿ ಮಹಾಲಕ್ಷ್ಮಿಯ ದೇಗುಲವು ಪ್ರತಿನಿತ್ಯ ಮುಂಜಾನೆಯಲ್ಲಿ ಸೂರ್ಯ ರಶ್ಮಿಗಳು ಚುಂಬಿಸುತ್ತವೆ. ಇನ್ನು ಸಂಜೆಯಾಗುತ್ತಿದ್ದಂತೆ ಸೂರ್ಯದೇವ ದೇವಿಯ ಪಾದಗಳಲ್ಲಿ ಅಂತರ್ದಾನನಾಗುತ್ತಾನೆ. ಇಂತಹ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ವಿಶೇಷ ಅನುಭವ. ಸುಳೇಭಾವಿ ಮಹಾಲಕ್ಷ್ಮಿಗೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮಾವಾಸ್ಯೆ ಮತ್ತು ಪೌರ್ಣಮಿಯ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಮಹಿಳೆಯರು ಉಡಿ ತುಂಬಿ ಕುಂಕುಮಾರ್ಚನೆ ಮಾಡಿಸುತ್ತಾರೆ. ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಕರುಣಿಸುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಈ ದೇವಾಲಯದ ಮತ್ತೊಂದು ವಿಶೇಷ ಏನೆಂದರೆ ಇಲ್ಲಿ ಪುಷ್ಪ ಪ್ರಶ್ನೆ ಕೇಳುವ ಸಂಪ್ರದಾಯವಿದೆ. ಭಕ್ತರು ಮಹಾಲಕ್ಷ್ಮಿ ದೇವಿಯ ಬಳಿ ತಮ್ಮ ಸಂಕಷ್ಟಗಳನ್ನು ಪರಿಹರಿಸುವಂತೆ ಮನದ ಆಸೆಗಳು ಈಡೇರಿಸುವಂತೆ ಭಕ್ತರು ಇಲ್ಲಿ ಬಂದು ಬೇಡಿಕೊಳ್ಳುತ್ತಾರೆ. ಪುಷ್ಪ ಪ್ರಶ್ನೆ ಕೇಳುವವರು ತಮ್ಮ ಬೇಡಿಕೆಗಳನ್ನು ಮನಸ್ಸಿನಲ್ಲಿ ಕೋರಿಕೊಂಡು ದೇವಿಗೆ ಕೈ ಮುಗಿಯುತ್ತಾರೆ. ಆಗ ದೇವಿಯ ಬಲ ಭಾಗದಲ್ಲಿ ಇರುವ ಪುಷ್ಪ ಬಿದ್ದರೆ ಮನಸ್ಸಿನ ಇಚ್ಛೆ ಈಡೇರುತ್ತದೆ ಎಂದರ್ಥ. ಅದೇ ಎಡಭಾಗಕ್ಕೆ ಬಿದ್ದರೆ ಇನ್ನೂ ನಿಮ್ಮ ಕಾರ್ಯಗಳು ನಿಧಾನವಾಗುತ್ತದೆ, ಕಾಲ ಕೂಡಿ ಬಂದಿಲ್ಲ ಎಂದು ಅರ್ಥವಂತೆ.

 

 

 

ಇಲ್ಲಿ ದೇವಿಯ ಬಳಿ ಸಂತಾನ ಭಾಗ್ಯ,ನೌಕರಿ ಭಾಗ್ಯ,ವಿವಾಹ ಭಾಗ್ಯಕ್ಕಾಗಿ ಹರಕೆ ಹೊರಲಾಗುತ್ತದೆ.ಹೇಗೆ ಹರಕೆ ಹೊರುವ ಭಕ್ತರು ಇಷ್ಟಾರ್ಥ ಸಿದ್ದಿಯಾದರೆ ದೇವಿಯ ದೇವಸ್ಥಾನಕ್ಕೆ ಬಂದು ದೇವಿಗೆ ನಾಣ್ಯಗಳನ್ನು ಬಡಿಯುತ್ತೇವೆ ಎಂದು ಅಂದುಕೊಂಡಿರುತ್ತಾರೆ. ಹೀಗಾಗಿಯೇ ಈ ದೇವಾಲಯದಲ್ಲಿ ಎಲ್ಲಿ ನೋಡಿದರೂ ನಿಮಗೆ ನಾಣ್ಯಗಳನ್ನು ಹೊಡೆದಿರುವುದು ಕಂಡು ಬರುತ್ತದೆ.ಈ ಸಂಪ್ರದಾಯ ರಾಜ ಮಹಾರಾಜರ ಕಾಲದಿಂದಲೂ ನೆಡೆದುಕೊಂಡು ಬಂದಿದೆ.ಇದಕ್ಕೆ ಕುರುಹುಗಳು ಎಂಬಂತೆ ದೇವಸ್ಥಾನದ ಕಂಬದ ಮೇಲೆ ಹಳೆಯ ಕಾಲದ ನಾಣ್ಯಗಳು ಇಂದಿಗೂ ಕಾಣ ಸಿಗುತ್ತವೆ. ಗಣ್ಯಾತಿಗಣ್ಯರು ಈ ದೇವಿಯ ಬಳಿ ಬರುತ್ತಾರೆ. ನಂಬಿ ಬಂದವರನ್ನು ಈ ದೇವಿ ಕೈ ಬಿಡುವುದಿಲ್ಲ.ಆದ್ದರಿಂದಲೇ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top