fbpx
ಹೆಚ್ಚಿನ

ಇಲ್ಲಿ ನೋಡಿ ಆಶ್ಚರ್ಯ ಈ ನದಿಯಲ್ಲಿ ಮರಳಿನ ಜೊತೆ ಬಂಗಾರ ಸಿಗುತ್ತಂತೆ,ಇದರಿಂದ ಎಷ್ಟೋ ಮೀನುಗಾರರು ಕೋಟ್ಯಧಿಪತಿಗಳಾಗಿದ್ದರಂತೆ .ಯಾವುದು ಆ ನದಿ ಎಲ್ಲಿ ಇದೆ ಅಂತ ತಿಳ್ಕೊಳ್ಳಿ .

ಸೋನೆ ಕೀ ಚಿಡಿಯಾ” ಎಂದು ನಮ್ಮ ಭಾರತವನ್ನು ಯಾಕೆ ಕರೆಯುತ್ತಿದ್ದರು. ಯಾರಿಗೂ ಕಾಣಿಸದಂತಹ ರಹಸ್ಯ ಈ ನದಿಯಲ್ಲಿ ಅಡಗಿದೆ. ಈ ನದಿಯಲ್ಲಿ ಬಂಗಾರ ಇದೆ ಎಂದು ಹೇಳಲಾಗುತ್ತದೆ.ಈ ನದಿಯಲ್ಲಿ ಮಾತ್ರ ಮರಳಿನ ಜೊತೆ ಜೊತೆಗೆ ಬಂಗಾರದ ಚೂರುಗಳು ಅಂದರೆ ಬಂಗಾರದ ಕಣಗಳು, ರೇಣುಗಳು ಕೂಡ ನೋಡಲು ಸಿಗುತ್ತವಂತೆ. ನಾವು ತಮಾಷೆ ಮಾಡುತ್ತಿದ್ದೀರಿ ಎಂದು ಕೊಳ್ಳುತ್ತಿದ್ದೀರಾ ? ಇಲ್ಲ, ಈ ವಿಷಯ ತುಂಬಾ ಸತ್ಯವಾದದ್ದು, ನಿಜವಾದ ಮಾತು. ಸಾವಿರಾರು ವರ್ಷಗಳಿಂದ ಇಲ್ಲಿ ಬಂಗಾರ ಎಂಬುದು ಸಿಗುತ್ತಲೇ ಇದೆಯಂತೆ.ಆದರೆ ಮರಳಿನ ಜೊತೆ ಜೊತೆಗೆ ಬಂಗಾರವೂ ಲಭಿಸುತ್ತದೆ ಎಂಬುದಕ್ಕೆ ಖಚಿತವಾದ ಯಾವುದೇ ಆಧಾರಗಳು ಇಲ್ಲ. ವೈಜ್ಞಾನಿಕವಾಗಿ ಕಾರಣಗಳನ್ನು ಪರಿಶೀಲನೆ ಮಾಡಿದಾಗ ಈ ನದಿ ಅನೇಕ ಅನೇಕ ಬೆಟ್ಟ ಗುಡ್ಡ, ಪರ್ವತಗಳನ್ನು, ಜರಿಗಳನ್ನು ನದಿಗಳನ್ನು ದಾಟುತ್ತಾ ಬರುತ್ತಿರುವುದರಿಂದ ಬಂಗಾರದ ಚೂರುಗಳು ಉತ್ಪತ್ತಿ ಆಗಿರಬಹುದು ಎಂದು ಭಾವಿಸುತ್ತಿದ್ದಾರೆ.

ಆದರೆ ವೈಜ್ಞಾನಿಕವಾಗಿ ಈ ರಹಸ್ಯ ಅವರಿಗೆ ಇನ್ನೂ ಪರಿಷ್ಕರಿಸಲು ಸಾಧ್ಯವಾಗಿಲ್ಲ. ಹಾಗಾದರೆ ಈ ನದಿ ಎಲ್ಲಿ ಬಂಗಾರದ ಚೂರುಗಳನ್ನು ಹೊಂದಿದೆ ಎಂದರೆ ನಂಬಲು ಕೂಡ ಅಸಾಧ್ಯವಾದದ್ದು ಅಲ್ಲವೇ ? ಜಾರ್ಖಂಡ್ ರಾಜ್ಯದಲ್ಲಿನ, ಪಶ್ಚಿಮ ಬಂಗಾಳದಲ್ಲಿನ , ಒರಿಸ್ಸಾದಲ್ಲಿನ ಕೆಲವು ಪ್ರದೇಶಗಳಲ್ಲಿ ಮಾತ್ರವೇ ಈ ನದಿ ಪ್ರವಹಿಸುತ್ತದೆ. ಕೇವಲ ಈ ನದಿಯಲ್ಲಿ ಮಾತ್ರ ಇಂತಹ ಬಂಗಾರದ ಚೂರುಗಳು ಲಭಿಸುತ್ತಿವೆಯಂತೆ.

 

 

 

ಈ ನದಿಯನ್ನು ಸ್ವರ್ಣರೇಖಾ, ಸುವರ್ಣ ರೇಖಾ ಎಂದೂ ಕರೆಯುವುದುಂಟು. ಮೀನುಗಳಿಗೆ ಅಲ್ಲದೆ ಬಂಗಾರಕ್ಕಾಗಿ ಕೂಡ ಬಲೆಯನ್ನು ಹಾಕುತ್ತಾರಂತೆ ಇಲ್ಲಿನ ಮೀನುಗಾರರು. ಇದರ ಮೇಲೆ ಆಧಾರವಾಗಿರುವ ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಅಂತೆಯೇ ಇಲ್ಲಿ ಒಂದು ಮಾತನ್ನು ಕೂಡ ನಾವು ನೆನಪಿಸಿಕೊಳ್ಳಬಹುದು. ಹಿಂದೆ ಭಾರತವನ್ನು “ಸೋನೆ ಕಿ ಚಿಡಿಯಾ” ಎಂದು ಕರೆಯುತ್ತಿದ್ದರು. ಇದಕ್ಕಾಗಿಯೇ ಇರಬಹುದು ನಮ್ಮ ಭಾರತ ದೇಶಕ್ಕೆ ಈ ಹೆಸರು ಬಂದಿರಬಹುದು.
ನದಿಯಲ್ಲಿಯೂ ಕೂಡ ಬಂಗಾರ ಲಭಿಸುತ್ತಿದ್ದರೆ ಎಂದರೆ ಅದು ನಿಜವೇ ? ಎಂದು ಅನುಮಾನ ಬರದೇ ಇರುತ್ತದೆಯೇ . ನಮ್ಮ ದೇಶದಲ್ಲಿ ಅದೆಷ್ಟೋ ಪವಿತ್ರವಾದ ನದಿಗಳು ಹರಿಯುತ್ತಿವೆ. ಜೀವನಾಧಾರಕ್ಕೆ ಪ್ರಾಣವನ್ನು ನೀಡುವ ಈ ನೀರು ಈ ನದಿಗಳ ಮೂಲಕವೇ ಲಭ್ಯವಾಗುತ್ತದೆ. ಈ ಸ್ವರ್ಣ ರೇಖಾ ನದಿಗೆ ಅಲ್ಲಿಯ ನಿವಾಸಿಗಳು ನೊಂದ ಮುಂದಾ ನದಿ ಎಂದು ಕೂಡ ಕರೆಯುತ್ತಾರೆ.

ಇಲ್ಲಿನ ಆದಿವಾಸಿಗಳು ಬಂಗಾರಕ್ಕಾಗಿ ನದಿಯಲ್ಲಿನ ಮರಗಳನ್ನು ಕೂಡ ಆಗಾಗ ಪರಿಶೀಲಿಸುತ್ತಾರೆ. ಹೀಗಾಗಿ ಇಲ್ಲಿಯ ಬಂಗಾರದಿಂದ ಇಲ್ಲಿನ ಮಾರಾಟಗಾರರು ಕೋಟಿಗಟ್ಟಲೇ ಆದಾಯವನ್ನು ಗಳಿಸುತ್ತಿದ್ದಾರೆ ಎಂದರೆ ಸುಳ್ಳಲ್ಲವಂತೆ. ಮುಖ್ಯವಾಗಿ ಜಾರ್ಖಂಡ್ ನಲ್ಲಿ ರಾಜಧಾನಿಯಾದ ರಾಂಚಿಗೆ ಕೇವಲ ಹದಿನೈದು ಕಿಲೋಮೀಟರ್ ದೂರದಲ್ಲಿ ಈ ಸ್ವರ್ಣ ರೇಖಾ ನದಿ ಹರಿಯುತ್ತಿದೆ.

 

 

 

ರತ್ನ ಗರ್ಭ ಎಂಬ ಪ್ರದೇಶದಲ್ಲಿ ಈ ಬಂಗಾರದ ಚೂರುಗಳು ದೊರೆಯುತ್ತಿದೆಯಂತೆ. ಹೀಗೆ ಕೇವಲ ಗಂಗಾ ನದಿ ಪವಿತ್ರ ಗಂಗೆಯಾಗಿ ಉಳಿಯದೆ, ಸಾಕಷ್ಟು ಜನರಿಗೆ ಬಂಗಾರದ ನದಿಯಾಗಿ, ಚಿನ್ನದ ನದಿಯಾಗಿ ಅದರಲ್ಲೂ ವಿಜ್ಞಾನಿಗಳಿಗೆ ಕಂಡು ಹಿಡಿಯಲು ಆಗದೇ ಇರುವಂತಹ ಪ್ರಶ್ನೆಯಾಗಿ ಉಳಿದುಕೊಂಡಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top