ಭವಿಷ್ಯ

ನಾವು ಮಾಡುವ ಈ ತಪ್ಪುಗಳಿಂದ ಹಣಕಾಸಿನ ತೊಂದರೆ ಬಂದು ಮನೆಗೆ ದರಿದ್ರ ಬರುತ್ತಂತೆ

ನಾವು ದಿನನಿತ್ಯ ನಮ್ಮ ಜೀವನದಲ್ಲಿ ಮಾಡುವ ಈ ಕೆಲವು ಕೆಲಸಗಳು ನಮ್ಮ ಹಣಕಾಸಿನಲ್ಲಿ ನಷ್ಟವನ್ನು ಉಂಟು ಮಾಡುತ್ತವೆ.
ಸಾಮಾನ್ಯವಾಗಿ ನಾವು ಎಷ್ಟೇ ಕಷ್ಟಪಟ್ಟು ದುಡಿದರೂ, ಎಷ್ಟೇ ಹಣ ಕೈಯಲ್ಲಿ ಇದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಹೇಳುತ್ತಿರುತ್ತಾರೆ. ಇದಕ್ಕೆ ನಾವು ಮಾಡುವ ಕೆಲವು ಕಾರ್ಯಗಳು ಸಹ ಅದಕ್ಕೆ ಕಾರಣವಾಗುತ್ತವೆ.ಸಾಮಾನ್ಯವಾಗಿ ಯಾವ ಮನೆಯಲ್ಲಿ ಸ್ತ್ರೀಯರು ಸೂರ್ಯೋದಯದ ನಂತರವೂ ಮಲಗುತ್ತಾರೋ ಅಂಥವರ ಮನೆಯಲ್ಲಿ ಲಕ್ಷ್ಮಿ ದೇವಿ ಇರುವುದಿಲ್ಲ.ಪ್ರತಿಯೊಬ್ಬ ಸ್ತ್ರೀಯರೂ ಕೂಡ ಸೂರ್ಯೋದಯಕ್ಕಿಂತ ಮುಂಚೆ ಬೇಗ ಎದ್ದು , ಮನೆಯ ಮುಂದೆ ಸ್ವಚ್ಛಗೊಳಿಸಿ, ಮನೆಯ ಮುಂದೆ ರಂಗೋಲಿಯನ್ನು ಹಾಕಬೇಕು. ಈ ರೀತಿ ಮಾಡುವವರ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ.

 

 

 

ಅಷ್ಟೇ ಅಲ್ಲದೆ ಯಾವ ಮಹಿಳೆಯರು ಮುಖ ತೊಳೆಯದೆ, ಹಲ್ಲು ಉಜ್ಜದೆ, ಅಡುಗೆ ಮನೆಗೆ ಹೋಗುತ್ತಾರೆ ಅಂಥವರ ಮನೆಯಲ್ಲಿ ದಟ್ಟ ದರಿದ್ರ ಆವರಿಸುತ್ತದೆ ಎಂದು ಹೇಳಲಾಗುತ್ತದೆ. ಇನ್ನೂ ಮನೆಯಲ್ಲಿ ಯಾವಾಗಲೂ ಹಾಲು ಉಕ್ಕುತ್ತಾ ಇರಬಾರದು. ರಥಸಪ್ತಮಿ ಮತ್ತು ಗೃಹಪ್ರವೇಶದ ಸಮಯದಲ್ಲಿ ಮಾತ್ರ ಹಾಲು ಉಕ್ಕಬೇಕು. ಒಂದು ವೇಳೆ ಸರ್ವೇಸಾಮಾನ್ಯವಾಗಿ ನಿರಂತರವಾಗಿ ಮನೆಯಲ್ಲಿ ಹಾಲು ಉಕ್ಕುತ್ತಾ ಇದ್ದರೆ ಅದು ಹಣದ ವ್ಯಯ ಎಂದುರ್ಥ ಮಾಡಿಕೊಳ್ಳಬೇಕಾಗುತ್ತದೆ.ಇನ್ನು ಕಾಲಿ ಇರುವ ಪಾತ್ರೆಗಳನ್ನು ನಾವು ಸ್ಟವ್ ಮೇಲೆ ಇಡಬಾರದು. ಈ ರೀತಿ ಇಟ್ಟಿದ್ದೇ ಅದರೆ ಅದು ಹಣ ಖರ್ಚಾಗುವುದು ಎಂದರ್ಥ ಅದರಲ್ಲೂ ಬಹಳಷ್ಟು ಹೆಚ್ಚು ಎಂತಲೇ ಹೇಳಬಹುದು.
ಅಷ್ಟೇ ಅಲ್ಲದೆ ನಮ್ಮ ಆರ್ಥಿಕ ಸದೃಢತೆಯನ್ನು ಹೆಚ್ಚಿಸಿಕೊಳ್ಳಲು ಅನೇಕ ಗಿಡಗಳನ್ನು ಬೆಳೆಸಬೇಕು. ಆಯಾ ರಾಶಿಗೆ ತಕ್ಕಂತೆ ನಾವು ಪುರೋಹಿತರನ್ನು ಕೇಳಿ ಹೆಚ್ಚು ಗಿಡಗಳನ್ನು ಬೆಳೆಸುವುದು ಮತ್ತು ಹೂವುಗಳನ್ನು ಬೆಳೆಸಿ ಅವುಗಳನ್ನು ನಾವು ದೇವರಿಗೆ ಅರ್ಪಿಸುವುದರಿಂದ ನಮ್ಮ ಮನೆಯಲ್ಲಿ ಲಕ್ಷ್ಮಿಯು ನೆಲೆಸುತ್ತಾಳೆ ಎಂದು ಹೇಳಬಹುದು.

ಇಷ್ಟು ದಿನ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಾಮಾನ್ಯವಾಗಿ ಅಡುಗೆ ಮಾಡುವಾಗ ಮಾತ್ರ ಒಲೆಯ ಮೇಲೆ ಪಾತ್ರೆಯನ್ನು ಇಡಬೇಕು. ನಂತರ ಪಾತ್ರೆಯನ್ನು ಇಡಬಾರದು. ಅದರಲ್ಲೂ ಕಾಲಿ ಇರುವ ಪಾತ್ರೆಯನ್ನು ಇಟ್ಟರೆ ನಿಮ್ಮ ಜೀವನವು ಖಾಲಿ ಖಾಲಿಯಾಗಿ ಬಿಡುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top