ಭವಿಷ್ಯ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸುರಕ್ಷತೆಯ ಜೊತೆ ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳಬೇಕು ಅಂದ್ರೆ ಹೀಗೆ ಮಾಡಿ

ಮನೆಯ ಸುರಕ್ಷತೆಗಾಗಿ ಮುಖ್ಯದ್ವಾರಕ್ಕೆ ಬರಿ ಬೀಗ ಹಾಕಿದರೆ ಅದು ಸಾಕಾಗುವುದಿಲ್ಲ ಈ ವಾಸ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.
ಕಳ್ಳರಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರ ಮನೆಯಲ್ಲಿಯೂ ಬೀಗ ಅತ್ಯವಶ್ಯಕ . ಅಷ್ಟೇ ಅಲ್ಲದೆ ಅಂಗಡಿ ಮತ್ತು ದೇವಸ್ಥಾನದಲ್ಲಿಯೂ ಸಹ ದೊಡ್ಡ ದೊಡ್ಡ ಬೀಗಗಳನ್ನು ನಾವು ಕಾಣುತ್ತೇವೆ. ವಾಸ್ತು ಶಾಸ್ತ್ರದಲ್ಲಿಯೂ ಬೀಗಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಬೀಗದ ನಿಯಮವನ್ನು ಪಾಲಿಸಿದರೆ ಮನೆ ಮತ್ತಷ್ಟು ಸುರಕ್ಷಿತವಾಗುವ ಜೊತೆಗೆ ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳಬಹುದು ಅದರ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ.

 

 

 

ಪೂರ್ವದಿಕ್ಕು ಸೂರ್ಯನ ದಿಕ್ಕಾಗಿದ್ದು, ಈ ದಿಕ್ಕಿನಲ್ಲಿ ಮನೆ ಇದ್ದರೆ ಈ ದಿಕ್ಕಿಗೆ ಸದಾ ತಾಮ್ರದ ಬೇಗ ಹಾಕಿದರೆ ಒಳ್ಳೆಯದು.ಪಶ್ಚಿಮ ದಿಕ್ಕು ಶನಿಯ ದಿಕ್ಕಾಗಿದ್ದು, ಆ ದಿಕ್ಕಿನಲ್ಲಿ ಮನೆ ಇದ್ದರೆ ಈ ದಿಕ್ಕಿಗೆ ಕಬ್ಬಿಣದ ಬೀಗ ಮತ್ತು ಗಟ್ಟಿಯಾದ ಬೀಗ ಹಾಕಬೇಕು. ಬೀಗದ ಬಣ್ಣ ಕಪ್ಪಾಗಿದ್ದರೆ ಒಳ್ಳೆಯದು ಎಂದು ವಾಸ್ತುಶಾಸ್ತ್ರ ಹೇಳುತ್ತಿದೆ.ಪಶ್ಚಿಮ ದಿಕ್ಕಿಗೆ ತಾಮ್ರದ ಬೀಗವನ್ನು ಅಪ್ಪಿತಪ್ಪಿಯೂ ಹಾಕಬಾರದು.ದಕ್ಷಿಣ ದಿಕ್ಕಿಗೆ ಪಂಚಲೋಹದ ಮತ್ತು ಗಟ್ಟಿಯಾದ ಬೀಗವನ್ನು ಹಾಕಬೇಕು.ಉತ್ತರ ದಿಕ್ಕಿನಲ್ಲಿ ಮನೆ ಇದ್ದರೆ ಹಿತ್ತಾಳೆ ಬೀಗವನ್ನು ಹಾಕುವುದು ಒಳ್ಳೆಯದು. ಬೀಗದ ಬಣ್ಣ ಬಂಗಾರದ ಬಣ್ಣದ್ದಾಗಿದ್ದರೆ ಉತ್ತಮ. ಮನೆಯಲ್ಲಿ ಬೀಗ ಮತ್ತು ಬಾಗಿಲುಗಳು ಕರ್ಕಶವಾದ ಶಬ್ದ ಬರದಂತೆ ನೋಡಿಕೊಳ್ಳಬೇಕು. ಶಬ್ದ ಮಾಡುವ ಕಿಟಕಿ ಅಥವಾ ಬಾಗಿಲನ್ನು ಮನೆಯಿಂದ ಹೊರಗಡೆ ಹಾಕಬೇಕು. ಮುರಿದಿರುವ ಬೀಗ ಹೊರಗಡೆ ಹಾಕುವಾಗ ಬೀಗ ಮುಚ್ಚಿರಬಾರದು.ಮತ್ತು ದೇವರ ಮನೆಗೆ ಯಾವ ಪರಿಸ್ಥಿತಿಯಲ್ಲಿಯೂ ಬೀಗ ಹಾಕಬಾರದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top