fbpx
ಮನೋರಂಜನೆ

ಇಂದಿರಾ ಗಾಂಧಿ ಗೆಟಪ್​ನಲ್ಲಿರೋ ಈ ಫೇಮಸ್​ ನಟಿ ಯಾರು ಎಂದು ಗುರುತಿಸಿ ನೋಡೋಣ

ಈ ಫೋಟೋ ನೋಡಿದ ತಕ್ಷಣ ಎಲ್ಲರಿಗೂ ಥಟ್ ಅಂತ ಸಲೀಸಾಗಿಹೇಳೋದು ಇದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಚಿತ್ರ ಅಂತ,ಅಂದ್ರೆ ಅಸಲಿಗೆ ಈ ಚಿತ್ರ ಅವರದ್ದಲ್ಲಾ, ಹಾಗಾದರೆ, ಯಾರದ್ದಿರಬಹುದು?ಗೆಸ್ ಮಾಡಿ .
ಇತ್ತೀಚಿನ ವರ್ಷಗಳಲ್ಲಿ ಖ್ಯಾತ ನಾಮಧೇಯರ ಜೀವನಾಧಾರಿತ ಸಿನಿಮಾಗಳು ಹೆಚ್ಚಾಗಿ ತೆರೆ ಬರಲು ಶುರು ಆಗಿವೆ. ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮಿಲ್ಕಾ ಸಿಂಗ್ ಹಾಗು ಇತ್ತೀಚಿಗೆ ರಿಲೀಸ್ ಆದ ಸಂಜು ಸಿನಿಮಾ ಸೇರಿ ಅನೇಕ ಸಿನಿಮಾ ಬಿಡುಗಡೆ ಆಗಿವೆ. ಇನ್ನು ತಮಿಳುನಾಡು ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ಕೂಡ ತೆರೆಗೆ ಬರಲಿದೆ ಎನ್ನುವ ಮಾತುಗಳು ಕಾಲಿವುಡ್ ನಲ್ಲಿ ಅನೇಕ ದಿನಗಳಿಂದ ಕೇಳಿ ಬರುತ್ತಿವೆ.

ತಮಿಳು ಚಿತ್ರರಂಗದ ಜನಪ್ರಿಯ ಜೋಡಿಯಾಗಿದ್ದ ಎಂಜಿಆರ್‌ ಮತ್ತು ಜಯಲಲಿತಾ ಅವರನ್ನು ಮತ್ತೆ ತೆರೆಯ ಮೇಲೆ ತರಲಾಗುತ್ತಿದೆ ಎಂಬ ಸುದ್ದಿ ಹಳೆಯದು. ಈಗ ಭಾರತೀಯ ರಾಜಕೀಯ ಇತಿಹಾಸದಲ್ಲಿ ಉತ್ತುಂಗ ಶಿಖರಕ್ಕೇರಿದ್ದ ಧಿಮಂತ ನಾಯಕಿ ಇಂದಿರಾ ಗಾಂಧಿ ಬಯೋಪಿಕ್ ರೆಡಿಯಾಗಲಿದೆ ಎನ್ನಲಾಗುತ್ತಿದೆ.ಹೌದು, ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇಂದಿರಾ ಗಾಂಧಿಯವರ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವುದನ್ನು ಇನ್ನು ಖಚಿತಪಡಿಸಿಲ್ಲ. ಆದರೆ ಸಿಕ್ಕ ಕೆಲ ಮಾಹಿತಿಗಳ ಪ್ರಕಾರ ಈ ಪಾತ್ರವನ್ನು ತ್ರಿಷಾ ಕೃಷ್ಣನ್ ಮಾಡಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಅಷ್ಟೇ ಅಲ್ಲದೆ ಅವರ ಫಸ್ಟ್​ ಲುಕ್ ಕೂಡ ರಿಲೀಸ್​ ಮಾಡಲಾಗಿದೆ. ತ್ರಿಷಾ ಅವರ ಫೋಟೋವನ್ನು ಡಿಜಿಟಲೀಕರಣಗೊಳಿಸಿ ಥೇಟ್ ಇಂದಿರಾ ಗಾಂಧಿ ಅವರನ್ನು ಹೋಲುವಂತೆ ಮಾಡಲಾಗಿದೆ. ತ್ರಿಶಾ ಅವರ ಕೇಶ ವಿನ್ಯಾಸ ಸಹ ಇಂದಿರಾಗಾಂಧಿ ಕೇಶ ವಿನ್ಯಾಸದಂತೆಯೇ ಕಾಣುತ್ತಿದೆ. ನೋಡಿದಾಕ್ಷಣ ಇದು ಇಂದಿರಾ ಗಾಂಧಿ ಎಂದು ಸುಲಭವಾಗಿ ಹೇಳಬಹುದು.

 

 

 

ಇದೊಂದು ಪರಿಪೂರ್ಣವಾದ ಹಾಗೂ ಕ್ರಿಯಾತ್ಮಕ ಚಿತ್ರ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.ಹಿಂದೆ ತ್ರಿಷಾ ನಾನು ಜಯಲಲಲಿತಾ ರವರ ಪಾತ್ರದಲ್ಲಿ ಅಭಿನಯ ಮಾಡುವ ಇಚ್ಛೆ ಹೊಂದಿದ್ದೇನೆ. ಆ ಪಾತ್ರ ಮಾಡುವುದು ನಿಜಕ್ಕೂ ಚಾಲೆಂಜಿಂಗ್ ಎಂದು ಅವರ ಆಸೆ ಹಾಗೂ ಅಭಿಪ್ರಾಯವನ್ನು ಸಂದರ್ಶನ ಒಂದರಲ್ಲಿ ಹಚ್ಚಿಕೊಂಡಿದ್ದರು . ದಿ. ಜಯಲಲಿತಾ ಅವರ ಬಯೋಪಿಕ್​​ನಲ್ಲಿಯೂ ಸಹ ತ್ರಿಶಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top