fbpx
ಮನೋರಂಜನೆ

2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ- ‘ರಾಜಕುಮಾರ’ ಅತ್ಯುತ್ತಮ ಮನರಂಜನಾ ಚಿತ್ರ, ಸಂಪೂರ್ಣ ಪಟ್ಟಿ ಇಲ್ಲಿದೆ.

2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ಅತ್ಯುತ್ತಮ ಮನರಂಜನಾ ಚಿತ್ರವಾಗಿ ಹೊರಹೊಮ್ಮಿದೆ. ‘ಶುದ್ಧಿ’ ಸಿನಿಮಾ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದರೆ, ‘ಮಾರ್ಚ್-22’ ಸಿನಿಮಾ 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ತಾರಾ ಮನೋಜ್ಞವಾಗಿ ಅಭಿನಯಿಸಿರುವ ಹೆಬ್ಬೆಟ್‌ ರಾಮಕ್ಕ ಸಾಮಾಜಿಕ ಕಳಕಳಿಯ ಚಿತ್ರವಾಗಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಮಂಜರಿ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ ವಿಶ್ವತ್‌ ನಾಯ್ಕ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹೆಬ್ಬೆಟ್‌ ರಾಮಕ್ಕ ಚಿತ್ರಕ್ಕಾಗಿ ತಾರಾ ಅನುರಾಧಾ ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಉಳಿದ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ ಇಂತಿದೆ.

ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ – ಅಯನ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ತುಳು ಭಾಷೆಯ ಸೋಫಿಯಾ
ತೀರ್ಪುಗಾರರ ವಿಶೇಷ ಪ್ರಶಸ್ತಿ – ಮಹಾಕಾವ್ಯ ಚಿತ್ರದ ನಟ ಶ್ರೀದರ್ಶನ್‌, ರಾಗಾ ಸಿನಿಮಾದ ನಟ ಮಿತ್ರ
ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ (ಲಕ್ಷ್ಮೀನಾರಾಯಣದ ಪ್ರಪಂಚಾನೇ ಬೇರೆ)
ಅತ್ಯುತ್ತಮ ಪೋಷಕ ನಟಿ- ರೇಖಾ (ಮೂಕ ನಾಯಕ)
ಅತ್ಯುತ್ತಮ ಕತೆ – ಹನುಮಂತ ಬಿ. ಹಾಲಿಗೇರಿ (ಕೆಂಗುಲಾಬಿ)

ಅತ್ಯುತ್ಯಮ ಚಿತ್ರಕಥೆ- ವೆಂಕಟ್ ಭಾರಧ್ವಾಜ್ (ಕೆಂಪಿರ್ವೆ)
ಅತ್ಯುತ್ಯಮ ಸಂಭಾಷಣೆ-ಎಸ್.ಜಿ.ಸಿದ್ದರಾಮಯ್ಯ (ಹೆಬ್ಬೆಟ್ ರಾಮಕ್ಕ)
ಅತ್ಯುತ್ತಮ ಛಾಯಾಗ್ರಹಣ-ಸಂತೋಶ್ ರೈ ಪತಾಜೆ (ಚಮಕ್)
ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ (ರಾಜಕುಮಾರ)

ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಸುರೇಶ್.ಕೆ (ಚಿತ್ರ: ಹೆಬ್ಬುಲಿ)
ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮ (ಮಫ್ತಿ)
ಅತ್ಯುತ್ತಮ ಬಾಲನಟ- ಮಾಸ್ಟರ್ ಕಾರ್ತಿಕ್ (ರಾಮರಾಜ್ಯ)
ಅತ್ಯುತ್ತಮ ಬಾಲನಟಿ- ಶ್ಲಘ ಸಾಲಿಗ್ರಾಮ (ಕಟಕ)
ಅತ್ಯುತ್ತಮ ಕಲಾ ನಿರ್ದೇಶನ: ರವಿ.ಎಸ್.ಎ (ಚಿತ್ರ: ಹೆಬ್ಬುಲಿ)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top