fbpx
ದೇವರು

ನವೆಂಬರ್ 7 ನೇ ತಾರೀಖು ದೀಪಾವಳಿಯ ಅಮಾವಾಸ್ಯೆ ಈ ದಿನದಂದು ನೀವು ತಪ್ಪದೆ ಈ ಸಣ್ಣ ಕೆಲಸ ಮಾಡಿದ್ರೆ ಸಾಕಂತೆ ಎಂತಹ ಬಡವನಾದರೂ ಕೂಡ ಉನ್ನತ ಮಟ್ಟಕ್ಕೆ ತಲುಪುತ್ತಾನಂತೆ

ಒಂದು ವರ್ಷದಲ್ಲಿ ಹನ್ನೆರಡು ಅಮಾವಾಸ್ಯೆಗಳು ಬರುತ್ತವೆ, ಅಧಿಕ ಮಾಸ ಬಂತೆಂದರೆ ಇನ್ನೂ ಒಂದು ಅಮಾವಾಸ್ಯೆ ಹೆಚ್ಚುವರಿಯಾಗಿ ಬರುತ್ತದೆ. ಈಗ ಬರುತ್ತಿರುವ ಅಮಾವಾಸ್ಯೆಗೆ ದೀಪಾವಳಿ ಅಮಾವಾಸ್ಯೆ ಎಂದು ಹೇಳಲಾಗುತ್ತದೆ. ಅಮಾವಾಸ್ಯೆ ಶ್ರೀ ಮಹಾಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಯಾಕೆಂದರೆ ಆಕೆ ಆ ದಿನ ವೈಕುಂಠದಿಂದ ಭೂಲೋಕಕ್ಕೆ ಪ್ರಯಾಣ ಮಾಡಿ ತನ್ನ ಭಕ್ತಾದಿಗಳನ್ನು ಅನುಗ್ರಹಿಸುತ್ತಾಳೆ ಎಂದು ಪುರಾಣಗಳು ಹೇಳುತ್ತವೆ .
ಲಕ್ಷ್ಮಿ ದೇವಿಯು ಆ ದಿನ ವೈಕುಂಠದಿಂದ ಭೂಲೋಕಕ್ಕೆ ಪಯಣಿಸಿ,ತನ್ನ ಭಕ್ತಾದಿಗಳನ್ನು ಅನುಗ್ರಹಿಸುತ್ತಾಳೆ ಎಂದು ಪುರಾಣಗಳು ಸಾರುತ್ತವೆ. ದೀಪಾವಳಿಯ ಅಮಾವಾಸ್ಯೆಯನ್ನು ಯಾರು ? ಭಕ್ತಿ, ಶ್ರದ್ಧೆಯಿಂದ, ನಿರ್ಮಲ ಮನಸ್ಸಿನಿಂದ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ, ಆಗ ಲಕ್ಷ್ಮಿ ದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆ ನಿಂತು ಅವರಿಗೆ ಧನ ಕನಕಗಳನ್ನು ಸಮೃದ್ಧವಾಗಿ ನೀಡುತ್ತಾಳೆ ಎಂದು ಹೇಳುತ್ತಾರೆ.

ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಹಣ ಬರುವುದು, ಹೋಗುವುದು ಜರುಗುತ್ತಲೇ ಇರುತ್ತದೆ. ಖರ್ಚು ವೆಚ್ಚಗಳು ಮತ್ತು ಧನಾಗಮನ ಇವೆರಡು ಸರಿಸಮನಾಗಿ ಕೆಲವು ಜನರಿಗೆ ಇದ್ದರೆ , ಇನ್ನೂ ಕೆಲವರಿಗೆ ಖರ್ಚು ಕಡಿಮೆಯಾಗಿ ಧನಾಗಮನ ಜಾಸ್ತಿ ಇರುತ್ತದೆ. ಆದರೆ ದೀಪಾವಳಿಯ ದಿನ ನಾವು ಶ್ರೀ ಮಹಾಲಕ್ಷ್ಮಿಯನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸಿದರೆ ಮನೆಯಲ್ಲಿ ದನದ ಆಗಮನವಾಗಿ,ಧನಾಕರ್ಷಣೆ ಹೆಚ್ಚಾಗಿ ಆಗುತ್ತದೆ. ಆದ್ದರಿಂದ ದೀಪಾವಳಿಯ ದಿನ ಮಹಾಲಕ್ಷ್ಮಿ ಪೂಜೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ.ಅಮಾವಾಸ್ಯೆಯ ದಿನ ಮಹಾಲಕ್ಷ್ಮೀಯನ್ನು ಪೂಜಿಸಿ, ಪ್ರಾರ್ಥಿಸಿ ಆಕೆಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸಿದರೆ ಸಾಕು ನಮಗೆ ಆಕೆಯ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುತ್ತದೆ.

 

 

 

ದೀಪಾವಳಿಯ ಅಮವಾಸ್ಯೆಯ ದಿನ ಏನೆಲ್ಲಾ ಮಾಡಬೇಕು ? ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ:
ಮುಖ್ಯವಾಗಿ ಅಮಾವಾಸ್ಯೆಯ ದಿನ ಅಭ್ಯಂಜನ ಸ್ನಾನ ಮಾಡಬೇಕು, ತಲೆಗೆ ಎಣ್ಣೆಯನ್ನು ಹಿರಿಯರಿಂದ ಹಚ್ಚಿಸಿಕೊಂಡು ಸ್ನಾನ ಮಾಡಬೇಕು, ಇದು ಅನಾದಿಕಾಲದಿಂದಲೂ ಬಂದಿರುವ ಪದ್ಧತಿಯಾಗಿದೆ.ಈ ದಿನ ಬೆಳಗ್ಗೆ ಪ್ರಾತಃ ಕಾಲದಲ್ಲಿ ಎದ್ದು, ಆರತಿ ಮಾಡಿಸಿಕೊಂಡು ಬಲವನ್ನು ಹೆಚ್ಚಿಸಿಕೊಂಡು, ಹಿರಿಯರ ಆಶೀರ್ವಾದವನ್ನು ಪಡೆದುಕೊಂಡು, ಅಭ್ಯಂಜನ ಸ್ನಾನವನ್ನು ಮಾಡಬೇಕು. ಇನ್ನೂ ಈ ಅಭ್ಯಂಜನವನ್ನು ಮಾಡಿಕೊಳ್ಳುವಾಗ ಪಾಲಿಸಬೇಕಾದ ಎಚ್ಚರಿಕೆ ಏನು ? ಎಂದರೆ ಉತ್ತರಾಣಿ ಗಿಡದ ಎಲೆಗಳನ್ನು, ಮನೆಗೆ ತಂದು ಉತ್ತರಾಣಿ ಗಿಡದ ಎಲೆಗಳನ್ನು ನೀರಿಗೆ ಹಾಕಿಕೊಂಡು ಒಂದೆರಡು ಮೂರು ಬಾರಿ ನೀರನ್ನು ತಲೆಯ ಮೇಲೆ ಸುರಿದುಕೊಂಡು ಸ್ನಾನ ಮಾಡುವುದರಿಂದ ರೋಗರುಜಿನಗಳು ದೂರವಾಗಿ ರೋಗಗಳು ಏನಾದರು ಇದ್ದರೆ ಅವು ಕೂಡ ದೂರವಾಗುತ್ತವೆ. ಮತ್ತು ಲಕ್ಷ್ಮಿ ಕಟಾಕ್ಷ ಕೂಡ ಉಂಟಾಗುತ್ತದೆ.

ಹೀಗೆ ತೈಲಾಭ್ಯಂಜನ ಮಾಡಿದ ನಂತರ ಮನೆಯನ್ನು, ದೇವರ ಕೋಣೆಯನ್ನು ಶುಭ್ರಗೊಳಿಸಿ ಕೊಂಡು ಪೂಜಾ ಕಾರ್ಯಕ್ರಮಗಳನ್ನು, ಷೋಡಶೋಪಚಾರ ಪೂಜೆಯನ್ನು ಮಾಡಬೇಕು , ಲಕ್ಷ್ಮಿ ಪೂಜೆಯನ್ನು ಮಾಡುವಾಗ ಕುಲ ದೇವರ ಪೂಜೆಯನ್ನು ಮರೆಯಬಾರದು. ಅರಿಶಿಣ, ಕುಂಕುಮ, ಹೂಗಳಿಂದ ಕುಲ ದೇವರು ಮತ್ತು ಕುಲದೇವತೆಯನ್ನು ಪೂಜಿಸಿಕೊಂಡು ಶ್ರೀ ಮಹಾಲಕ್ಷ್ಮಿಯನ್ನು ಮತ್ತು ಗಣಪತಿಯನ್ನು ಆರಾಧಿಸಿ, ಮುಖ್ಯವಾಗಿ ಜಗನ್ಮಾತೆಗೆ ಇಷ್ಟವಾದ ಕಮಲದ ಹೂವಿನಿಂದ ಪೂಜಿಸಬೇಕು. ಆಕೆಗೆ ಕೆಂಪು ಬಣ್ಣದ ಹೂವು ಎಂದರೆ ಬಲು ಪ್ರೀತಿ ಆದ್ದರಿಂದ ಸಾಧ್ಯವಾದಷ್ಟು ಕೆಂಪು ಬಣ್ಣದ ಪುಷ್ಪಗಳಿಂದ ಪೂಜಿಸಬೇಕು.ಕಮಲದ ಹೂವು ಸಿಕ್ಕಿದರೆ ಮಾತ್ರ ಅತಿ ಉತ್ತಮ. ಆದ್ದರಿಂದಲೇ ಆಕೆಯನ್ನು ಪದ್ಮಪ್ರಿಯೆ, ಕಮಲ ಪ್ರಿಯೆ ಎಂದು ಕರೆಯುತ್ತಾರೆ. ಆದ್ದರಿಂದ ಸಾಧ್ಯವಾದರೆ ಕಮಲದ ಹೂವನ್ನು ತಂದು ಪೂಜೆ ಮಾಡಿ ಅಥವಾ ಕೆಂಪು ಗುಲಾಬಿ ಹೂಗಳಿಂದ ಪೂಜೆ ಮಾಡಬಹುದು ಅಥವಾ ಕೆಂಪು ದಾಸವಾಳ ಹೂವಿನಿಂದ ಕೂಡ ಪೂಜೆ ಮಾಡಬಹುದು. ಹೀಗೆ ಕಮಲದ ಹೂವು ಸಿಕ್ಕಿದರೆ ಒಳ್ಳೆಯದು. ಆ ದಿನ ಲಕ್ಷ್ಮಿ ಹೋಮವನ್ನು ಕೂಡ ಆಚರಿಸಲಾಗುತ್ತದೆ. ಲಕ್ಷ್ಮಿ ದೇವಿಯ ಅಷ್ಟೋತ್ತರ , ಶತ ನಾಮಾವಳಿಗಳು ಇತ್ಯಾದಿ ಲಕ್ಷ್ಮಿಗೆ ಪ್ರೀತಿಕರವಾದ ಮಂತ್ರಗಳಿಂದ ಪೂಜಿಸಲಾಗುತ್ತದೆ. ಹೀಗೆ ಪೂಜಿಸುವುದರಿಂದ ಆಕೆಯ ಸಂಪೂರ್ಣ ಕೃಪಾಕಟಾಕ್ಷ ಉಂಟಾಗುತ್ತದೆ ಎನ್ನುವುದು ಪಂಡಿತೋತ್ತಮರ ಮಾತಾಗಿದೆ. ಮುಖ್ಯವಾಗಿ ಆ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಿ ನಮ್ಮ ಯಥಾನುಶಕ್ತಿ ಫಲ ಪುಷ್ಪಗಳಿಂದ ಅರ್ಪಿಸಿ, ಪೂಜಿಸಿದ ಫಲಗಳನ್ನು ಮುತ್ತೈದೆಯರಿಗೆ ಅಥವಾ ಬ್ರಾಹ್ಮಣರಿಗೆ ದಾನ ಮಾಡಬೇಕು ಅಥವಾ ಹತ್ತಿರದಲ್ಲಿರುವ ದೇವಾಲಯಕ್ಕೆ ತೆರಳಿ ಅಲ್ಲಿ ಬ್ರಾಹ್ಮಣರಿಗೆ ಬಾಳೆಹಣ್ಣು ಮತ್ತು ಇನ್ನಿತರೆ ಹಣ್ಣುಗಳನ್ನು ನೀಡಿ ನಮಸ್ಕರಿಸಿ ಬಂದರೆ ಇನ್ನೂ ಉತ್ತಮವಾದ ಪಲಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ.

 

 

 

ಇಷ್ಟು ಒಳ್ಳೆಯ ಅವಕಾಶ ಈ ದೀಪಾವಳಿ ಅಮಾವಾಸ್ಯೆಯ ದಿನ ನಮಗೆ ಒದಗಿ ಬರುತ್ತದೆ, ಆದ್ದರಿಂದ ಈ ದೀಪಾವಳಿ ಅಮಾವಾಸ್ಯೆಯನ್ನು ಈ ರೀತಿಯಾಗಿ ಆಚರಿಸಿದರೆ ನಮಗೆ ಉತ್ತಮವಾದ ಫಲಗಳು ಲಭಿಸುತ್ತವೆ ಮತ್ತು ಲಕ್ಷ್ಮೀ ದೇವಿಯ ಅನುಗ್ರಹವು ಕೂಡ ಪ್ರಾಪ್ತಿಯಾಗಿ ಮನೆಯಲ್ಲಿ ಅಭಿವೃದ್ಧಿಯಾಗಿ ಸಮೃದ್ಧಿಯಾದ ಸಿರಿ, ಸಂಪತ್ತು ಅಭಿವೃದ್ಧಿಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top