ದೇವರು

ಜೀವನದಲ್ಲಿ ತುಂಬಾ ಕಷ್ಟಗಳನ್ನೂ ಅನುಭವಿಸುತ್ತಿದ್ದರೆ ಮಲೆಮಹದೇಶ್ವರ ಬೆಟ್ಟಕ್ಕೆ ಹೋದಾಗ ತಪ್ಪದೇ ಈ ಕೆಲಸ ಮಾಡಿದ್ರೆ ಜೀವನದಲ್ಲಿರುವ ಸಕಲ ಸಂಕಷ್ಟಗಳೂ ದೂರವಾಗುತ್ತಂತೆ

ಮಲೆ ಮಹದೇಶ್ವರ ಸ್ವಾಮಿಯು ಭಕ್ತರ ಸಂಕಷ್ಟಗಳನ್ನು ಪರಿಹರಿಸಲು ಮತ್ತು ದುಷ್ಟ ಜನರಿಂದ ಮುಕ್ತಿಗೊಳಿಸಲು, ಶಿಷ್ಟರ ರಕ್ಷಣೆಗಾಗಿ ಧರೆಗಿಳಿದ ಸಾಕ್ಷಾತ್ ಶಿವನ ಇನ್ನೊಂದು ರೂಪವೇ ಶ್ರೀ ಮಲೆ ಮಹದೇಶ್ವರ ಸ್ವಾಮಿ. ಮಲೆ ಎಂದರೆ ಬೆಟ್ಟ, ಮಲೆಗಳಲ್ಲಿ ನೆಲೆಸಿರುವ ಈಶ್ವರ ಸ್ವಾಮಿಯೇ ಶ್ರೀ ಮಲೆ ಮಹದೇಶ್ವರ ಸ್ವಾಮಿ. ಶ್ರೀ ಮಹದೇಶ್ವರ 77 ಬೆಟ್ಟಗಳ ಮೇಲೆ ಸಕಲ ಜೀವ ರಾಶಿಗಳನ್ನು ರಕ್ಷಿಸುತ್ತಾ ನೆಲೆಸಿದ್ದಾನೆ. ಮಲೆ ಮಹದೇಶ್ವರನು ಕೇಳಿದ ವರವನ್ನು ನೀಡುವ ಕರುಣಾಮಯಿ. ಯಾವುದೇ ತೊಂದರೆಗಳಿಲ್ಲದೆ ಇದ್ದರೂ, ಅದನ್ನು ತನ್ನ ಭಕ್ತರಿಗೆ ಪರಿಹರಿಸಿ ಕೊಡುವ, ಅವರ ಬಾಳಿನ ಸಕಲ ಸಂಕಷ್ಟಗಳನ್ನು ದೂರ ಮಾಡುವ ಮಹಾ ಮಹಿಮ. ಒಂದು ವೃತ್ತಿಯಂತೆ ಮಹದೇಶ್ವರ ಕೊಟ್ಟರೆ ಮನೆ ತುಂಬಾ ಕೊಡುವನು, ಎನ್ನುವ ಅರ್ಥಗರ್ಭಿತವಾದ ಮಾತು ನಿಜ.

ಜೀವನದಲ್ಲಿ ಹಲವಾರು ಜನರ ಬಾಳಿನಲ್ಲಿ ಈ ಮಾತು ನಿಜವಾಗಿದೆ,ಮಲೆ ಮಹದೇಶ್ವರ ಸ್ವಾಮಿಗೆ ಬೇಕಾಗಿರುವುದು ಯಾವುದೇ ತರಹದ ಆಡಂಬರದ ಭಕ್ತಿಯಲ್ಲ, ನೀವು ಮನೆಯಲ್ಲಿ ಕುಳಿತು ಪ್ರಾರ್ಥನೆ ಮಾಡಿದರೂ ಸಾಕು. ತಂದೆ ನಿನ್ನ ಸನ್ನಿಧಿಗೆ ಐದು ತಿಂಗಳ ಸೇವೆ , ವರ್ಷ ತಿಂಗಳ ಸೇವೆ ಅಥವಾ ಜೀವನ ಪರ್ಯಂತ ತಿಂಗಳ ಸೇವೆ ಮಾಡುತ್ತೇನೆ ಎಂದು ಭಕ್ತಿಯಿಂದ ಬೇಡಿಕೊಂಡರೆ ಸಾಕು, ನಿಮ್ಮ ಜೀವನದಲ್ಲಿರುವ ಯಾವುದೇ ತೊಂದರೆಯಾದರೂ ಈಡೇರುವುದು ಖಚಿತ. ಇದಕ್ಕೆ ಹಲವಾರು ಜೀವಂತ ಸಾಕ್ಷಿಗಳು ನಮ್ಮ ನಡುವೆ ಸಿಗುತ್ತವೆ, ಅದರಲ್ಲೂ ನಮ್ಮ ನಡುವೆ ಇರುವ ಕೆಲವು ಸಾಕ್ಷಿಗಳು ಬಗ್ಗೆ ಈಗ ನಾವು ತಿಳಿದುಕೊಳ್ಳೋಣ ಬನ್ನಿ.

 

 

 

ಮಲೆ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಒಂದು ಪುಟ್ಟ ಬಾಲಕ ಕಳೆದು ಹೋಗುತ್ತಾನೆ, ಅವನು ಎಲ್ಲಿ ಹೋದನೆಂದು ಯಾರಿಗೂ ತಿಳಿಯುವುದಿಲ್ಲ , ಇಂತಹ ಸಂದರ್ಭದಲ್ಲಿ ಅವರ ಮನೆಯವರು ಮಲೆಮಹದೇಶ್ವರ ಸ್ವಾಮಿಗೆ ಹರಕೆಯನ್ನು ಹೊತ್ತಿಕೊಂಡು ತಿಂಗಳ ಸೇವೆಯನ್ನು ಮಾಡಲು ಆರಂಭಿಸುತ್ತಾರೆ. ಅದಾದ ನಂತರ ಒಂದು ಆಶ್ಚರ್ಯಕರ ರೀತಿಯಲ್ಲಿ ಬಾಲಕ ಮತ್ತೆ ಮನೆಗೆ ಮರಳುತ್ತಾನೆ. ಇದಕ್ಕೆಲ್ಲ ಕಾರಣ ಮಲೆಯ ಮಹದೇಶ್ವರ ಸ್ವಾಮಿ ಎಂದು ಆ ಮನೆಯವರು ತಿಂಗಳ ಸೇವೆಯನ್ನು ಈಗಲೂ ಸಹ ಮಾಡುತ್ತಿದ್ದಾರೆ. ಇದೆಲ್ಲಾ ದೇವರ ದಯೆ ಎಂದು ಈಗಲೂ ದೇವರ ಸನ್ನಿಧಿಗೆ ಬರುತ್ತಿದ್ದಾರೆ. ಹಲವರು ಸಂತಾನ ಇಲ್ಲದ ದಂಪತಿಗಳಿಗೆ, ಸಂತಾನ ಇಲ್ಲದವರು ಬಂದರೆ ಸಂತಾನವನ್ನು ನೀಡುವ ಪವಾಡವನ್ನು ಮಲೆ ಮಹದೇಶ್ವರ ನೀಡುತ್ತಾನೆ. ಕಂಕಣ ಭಾಗ್ಯ, ವ್ಯಾಪಾರ, ವ್ಯವಹಾರ, ಅಭಿವೃದ್ಧಿಗೋಸ್ಕರ ಭೂಮಿಯ ಫಲಕ್ಕಾಗಿ ಈ ಕ್ಷೇತ್ರಕ್ಕೆ ಬಂದು ಮಲೆ ಮಹದೇಶ್ವರ ಸ್ವಾಮಿಯನ್ನು ಭಕ್ತಿಯಿಂದ ನೆನೆದು ತಿಂಗಳ ಸೇವೆ ಮಾಡುತ್ತೇನೆ ಎಂದು ಹರಕೆ ಮಾಡಿಕೊಂಡರೆ ಸಾಕು, ಮಲೆ ಮಹದೇಶ್ವರ ನಮ್ಮನ್ನು ಕಾಪಾಡುತ್ತಾನೆ, ಇದಕ್ಕೆ ಸಾಕ್ಷಿ ನಮ್ಮ ಕಣ್ಣಮುಂದೆಯೇ ಇದೆ.ಈಗಲೂ ಸಹ ಮಲೆ ಮಹದೇಶ್ವರ ಬೆಟ್ಟಕ್ಕೆ ತಿಂಗಳ ಸೇವೆ ಸಲ್ಲಿಸಲು ಲಕ್ಷಾಂತರ ಭಕ್ತರು ಬರುತ್ತಾರೆ.

ಏನಿದು ತಿಂಗಳ ಸೇವೆ ? ಎಂದರೇನು ?
ಪ್ರತಿ ತಿಂಗಳ ಅಮಾವಾಸ್ಯೆಯ ದಿನದಂದು ತಪ್ಪದೆ ಅದರ ಹಿಂದಿನ ದಿನ ಬೆಟ್ಟಕ್ಕೆ ಬಂದು ಉಳಿದುಕೊಂಡು ಸ್ವಾಮಿಯ ದರ್ಶನ ಮಾಡಿ ಬರಬೇಕು, ಹೀಗೆ ಮಾಡಿದರೆ ಸ್ವಾಮಿ ನೀವು ಏನೇ ಅಂದುಕೊಂಡರೂ ನೆರವೇರಿಸುತ್ತಾರೆ. ಈಗಲೂ ಕೂಡ ಮಂಡ್ಯ, ಮೈಸೂರು, ಚಾಮರಾಜನಗರ, ಟೀ. ನರಸೀಪುರ ಅಷ್ಟೇ ಅಲ್ಲದೆ ಪಕ್ಕದ ರಾಜ್ಯ ತಮಿಳುನಾಡಿನಿಂದಲೂ ಜನ ಬರುತ್ತಾರೆ. ನೀವು ಕೂಡ ಈ ದೇವರಿಗೆ ತಿಂಗಳ ಸೇವೆಯನ್ನು ಭಕ್ತಿಯಿಂದ ಮಾಡಿದರೆ ಕಷ್ಟಗಳು ಕಳೆದಂತೆ, ತಪ್ಪದೆ ಈ ಕ್ಷೇತ್ರಕ್ಕೆ ಬಂದು ನಿಮ್ಮ ಜೀವನದಲ್ಲಾಗುವ ಬದಲಾವಣೆಯನ್ನು ನೀವೇ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top