fbpx
ಮನೋರಂಜನೆ

ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ‘ಒಳ್ಳೆ ಹುಡುಗ’ ಪ್ರಥಮ್- ಕಾರಣ ಏನಂತೆ ಗೊತ್ತಾ?

ಇರೋ ಬರೋ ಎಲ್ಲ ಪಕ್ಷಗಳ ರಾಜಕಾರಣಿಗಳನ್ನು ಮತ್ತು ಚಿತ್ರರಂಗದ ಕಲಾವಿದರನ್ನು ದೊಡ್ಡಪ್ಪ, ಚಿಕ್ಕಪ್ಪ, ತಾತ, ಮಾವ, ಅಣ್ಣ, ಅಕ್ಕ ಅಂತ ಅನ್ಕೊಂಡು ಪ್ರೀತಿಯ ಅಭಿಮಾನ ಮೆರೆಯೋರು ಬಿಗ್ ಬಾಸ್ ಖ್ಯಾತಿಯ ಪ್ರಥಮ್. ಆರಂಭದಲ್ಲಿ ಹುಚ್ಚುತನಗಳಿಂದಲೇ ಗುರುತಿಸಿಕೊಂಡಿದ್ದರೂ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಬುದ್ದಿ ಕಲಿತು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಂಥಾ ಪ್ರಥಮ್ ಈಗ ಚಿತ್ರರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದಾರಂತೆ.

ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಬೆಂಗಳೂರು ಬಿಟ್ಟು ಊರಿಗೆ ಹೋಗ್ತಾರಂತೆ ಒಳ್ಳೇ ಹುಡುಗ ಪ್ರಥಮ್! ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, “ನಟ ಭಯಂಕರ ನನ್ನ ಸಿನಿಮಾ ಕರಿಯರ್‌ನ ಕೊನೆ ಚಿತ್ರವಾಗಲಿದೆ. ಅಲ್ಲಿಂದ ಮುಂದೆ ನಾನು ನಮ್ಮ ಸ್ವಂತ ಊರಿಗೆ ಹೋಗಿ ವ್ಯವಸಾಯ ಮಾಡಿಕೊಂಡಿರುತ್ತೇನೆ.. ಚಿತ್ರರಂಗದ ಹಲವು ವಿಚಾರಗಳು ನನಗೆ ಇಷ್ಟವಾಗ್ತಿಲ್ಲ. ಒಂದಷ್ಟು ಕನಸುಗಳು ನನಸಾಗಿಲ್ಲ ಅನ್ನೋ ಬೇಸರವಿದೆ. ಆದರೂ ಏನು ಇಲ್ಲದವನು ಇಷ್ಟು ಮಾಡಿದ್ದೀನಿ ಅನ್ನೋ ಸಮಾಧಾನವೂ ಇದೆ. ” ಎಂದಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದ ನಂತರ ಪ್ರಥಮನಿಗೆ ಸಾಲು ಸಾಲು ಸಿನಿಮಾಗಳ ಆಫರ್ ಬಂದಿತ್ತು. ಈಗಾಗಲೇ ಒಂದು ಚಿತ್ರ ಬಿಡುಗಡೆಯಾಗಿದ್ದು, ಎಂಎಲ್‌ಎ ರಿಲೀಸ್‌ಗೆ ರೆಡಿ ಇದೆ. ಆದರೆ ಈಗ ದಿಢೀರನೇ ಊರಿನಲ್ಲಿ ವ್ಯವಸಾಯ ಮತ್ತು ಕುರಿ ಸಾಕಣೆ ಮಾಡುತ್ತೇನೆ ಎಂದು ಊರಿಗೆ ಹೊರಡುತ್ತಿದ್ದಾರೆ. ಬೆಂಗಳೂರು ಸ್ಪೀಡ್​ಗೆ ಹೊಂದಿಕೊಳ್ಳೋಕೆ ಆಗುತ್ತಿಲ್ಲವೆಂದು ಹೇಳಿದ್ದಾರೆ. ನಗರ ಜೀವನಕ್ಕೆ ಬೇಸತ್ತು ಒಳ್ಳೇ ಹುಡುಗ ಪ್ರಥಮ್​ ಬೆಂಗಳೂರಿಗೆ ಗುಡ್ ಬೈ ಹೇಳುತ್ತಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top