fbpx
ದೇವರು

ರಾಮಾಯಣದ ನಿಜವಾದ ನಾಯಕ ಯಾರು,ಇದರ ಹಿಂದಿರುವ ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ಈ ರೋಚಕ ಕಥೆ ಏನ್ ಗೊತ್ತಾ

ರಾಮಾಯಣದ ನಿಜ ನಾಯಕ ಯಾರು ಗೊತ್ತಾ ? ರಾಮಕಥೆಯ ಯಶಸ್ಸಿನ ಹಿಂದಿದೆ ಅವಳಿ ಸಹೋದರರ ಪರಿಶ್ರಮ. ರಾಮಭಕ್ತರೆಲ್ಲರೂ ನೋಡಲೇಬೇಕಾದ ಸ್ಥಳವಿದು ಹಾಗೆಯೇ ತಿಳಿದುಕೊಳ್ಳಲೇ ಬೇಕಾದ ರೋಚಕ ಕಥೆ ಇದು.
ರಾಮಾಯಣ ಎಂದ ಕೂಡಲೇ ನಮಗೆಲ್ಲಾ ಶ್ರೀರಾಮಚಂದ್ರನ ಆದರ್ಶ, ಪಿತೃವಾಕ್ಯ ಪರಿಪಾಲನೆ, ರಾಜ್ಯದ ಧರ್ಮ ಮಾತ್ರ ನೆನಪಾಗುತ್ತದೆ. ಶ್ರೀರಾಮಚಂದ್ರನೇ ರಾಮಾಯಣದ ನಾಯಕ ಎನ್ನಲಾಗುತ್ತದೆ. ಆದರೆ ರಾಮಾಯಣದಲ್ಲಿ ರಾಮ, ಸೀತೆಯಷ್ಟೇ ಮುಖ್ಯವಾದ ಪಾತ್ರಗಳು ಇವೆ.ಅವರೇ ರಾಮ ಸೀತೆಯ ಪುತ್ರರಾದ ಲವ ಕುಶರು . ಸೀತಾಮಾತೆಯ ಗರ್ಭದಲ್ಲಿ ಜನಿಸಿದ ಅವಳಿ ಸಹೋದರರೇ ಲವ ಕುಶರು. ಇವರೇ ರಾಮಾಯಣದ ನಿಜವಾದ ನಾಯಕರು, ಅತ್ಯಂತ ಚಾಣಾಕ್ಷರು, ಬುದ್ಧಿವಂತರು ಮಹಾ ಪರಾಕ್ರಮಿಗಳು ಆಗಿದ್ದ ಈ ಸಹೋದರರು ರಾಮಾಯಣಕ್ಕೆ ಜೀವ ತುಂಬಿದವರು. ರಾಮಾಯಣದ ಕಥೆಯನ್ನು ಹಾಡಿನ ಮೂಲಕ ಮನೆ ಮನೆಗಳಿಗೆ ತಲುಪಿಸುವ ಮೂಲಕ ರಾಮಕಥೆಯ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸಿದರು. ಈ ಅವಳಿ ಸಹೋದರರ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ ಕುತೂಹಲಕಾರಿ ವಿಷಯಗಳನ್ನು ಇಂದು ನಾವು ತಿಳಿದುಕೊಳ್ಳೋಣ ಬನ್ನಿ.

 

ವಾಲ್ಮೀಕಿ ರಾಮಾಯಣದ ಪ್ರಕಾರ ಲಂಕಾ ವಿಜಯದ ನಂತರ, ಶ್ರೀ ರಾಮ ,ಸೀತಾ ಮಾತೆ, ಲಕ್ಷ್ಮಣ, ಹನುಮಂತ ಸೇರಿದಂತೆ, ವಾನರ ಸೇನೆ ಅಯೋಧ್ಯೆಗೆ ಹಿಂತಿರುಗುತ್ತದೆ. ಅಯೋಧ್ಯೆಯ ಜನ ಜಾನಕಿ ರಾಮನನ್ನು ಅದ್ದೂರಿಯಾಗಿ ಸ್ವಾಗತಿಸುತ್ತಾರೆ. ಕೆಲವು ಕಾಲ ಶ್ರೀರಾಮ ಸೀತಾ ಮಾತೆ ಸಂತೋಷದ ದಾಂಪತ್ಯ ಜೀವನವನ್ನು ಸಾಗಿಸುತ್ತಾರೆ. ಶ್ರೀರಾಮ ಸೀತಾ ಮಾತೆಯ ದಾಂಪತ್ಯದ ಬದುಕು ಅತ್ಯಂತ ಸುಂದರವಾಗಿರುತ್ತದೆ. ಆದರೆ ಕೆಲವು ಸಮಯದ ನಂತರ ಆಯೋಧ್ಯೆಯ ಅಗಸನೊಬ್ಬ, ಸೀತಾ ಮಾತೆಯ ಚಾರಿತ್ರ್ಯದ ಬಗ್ಗೆ ಲಘುವಾಗಿ ಮಾತನಾಡುತ್ತಾನೆ. ಇದು ಶ್ರೀರಾಮನ ಕಿವಿಗೆ ಬೀಳುತ್ತದೆ. ಪ್ರಜಾ ಪ್ರೇಮಿಯಾಗಿದ್ದ ಶ್ರೀ ರಾಮ ಸೀತೆಯನ್ನು ಪರಿತ್ಯಜಿಸಿದ . ಅಲ್ಲಿಂದ ಪರಮ ಪಾವನೆಯಾದ ಜಾನಕಿಗೆ ಅಗ್ನಿಪರೀಕ್ಷೆ ಎದುರಾಗುತ್ತದೆ.ಶ್ರೀರಾಮನ ಆಜ್ಞೆಯಂತೆ ಲಕ್ಷ್ಮಣ ಸೀತಾ ಮಾತೆಯನ್ನು ದಟ್ಟವಾದ ಅರಣ್ಯಕ್ಕೆ ಬಿಟ್ಟು ಬರುತ್ತಾನೆ. ಆಗಾಗಲೇ ಗರ್ಭಿಣಿಯಾಗಿದ್ದ ಸೀತಾಮಾತೆ ಕಾಡಿನಲ್ಲಿ ಅನಾಥಳಂತೆ ಅಲೆಯುತ್ತಾಳೆ. ಎಲ್ಲವನ್ನೂ ತಮ್ಮ ಮನೋ ಜ್ಞಾನದಿಂದ ಅರಿತ ವಾಲ್ಮೀಕಿ ಮಹರ್ಷಿಗಳು ಸೀತಾಮಾತೆಯ ಎದುರಿಗೆ ಬರುತ್ತಾರೆ. ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಅಯೋಧ್ಯಾಧಿಪತಿಯಾಗಿದ್ದ ಶ್ರೀರಾಮನ ಧರ್ಮಪತ್ನಿ, ಮಹಾರಾಣಿ, ಕಾಡಿನಲ್ಲಿದ್ದ ಸೀತಾ ಮಾತೆ ವಾಲ್ಮೀಕಿ ಆಶ್ರಮವನ್ನು ಸೇರುತ್ತಾಳೆ. ಶ್ರೀರಾಮ ಪರಿತ್ಯಜಿಸಿದ ನಂತರ ಸೀತಾ ಮಾತೆ ಬಂದು ಸೇರಿದ ವಾಲ್ಮೀಕಿ ಆಶ್ರಮ ಇಂದಿಗೂ ಇದೆ.ಅಮೃತಸರ್ ದಿಂದ ಹನ್ನೊಂದು ಕಿಲೋಮೀಟರ್ ದೂರದಲ್ಲಿರುವ ಈ ಪುಣ್ಯ ಭೂಮಿಯನ್ನು ರಾಮತೀರ್ಥ ಎಂದು ಕರೆಯಲಾಗುತ್ತದೆ.

 

 

 

ಜಾನಕಿಯ ಕಣ್ಣೀರಿನ ಕಥೆ ಹೇಳುತ್ತದೆ ಈ ಆಶ್ರಮ. ವಾಲ್ಮೀಕಿ ಮಹರ್ಷಿಗಳು ರಾಮಾಯಣ ರಚಿಸಿದ ಪವಿತ್ರ ಜಾಗವಿದು. ಇಟ್ಟಿಗೆಯಲ್ಲಿ ಮನೆ ಕಟ್ಟಿದರೆ ನೀವು ಸ್ವಂತ ಮನೆ ಕಟ್ಟುವುದು ಗ್ಯಾರಂಟಿ.ರಾಮ ತೀರ್ಥದಲ್ಲಿ ವಾಲ್ಮೀಕಿ ಮಹರ್ಷಿಗಳ ಆಶ್ರಮವಿದೆ. ಸುಂದರವಾದ ಮತ್ತು ವಿಶಾಲವಾದ ಸರೋವರದ ಮಧ್ಯೆ ಇರುವ ಸುಂದರವಾದ ತಾಣವನ್ನು ಜೀವನದಲ್ಲಿ ಒಮ್ಮೆ ನೋಡಲೇಬೇಕು. ಯಾಕೆಂದರೆ ಇದು ರಾಮಾಯಣದ ಘಟನಾವಳಿಗಳನ್ನು ದೃಶ್ಯ ರೂಪದಲ್ಲಿ ನಿಮ್ಮ ಕಣ್ಣಿಗೆ ಕಟ್ಟಿ ಕೊಡುತ್ತದೆ. ಶ್ರೀ ರಾಮನಿಂದ ತ್ಯಜಿಸಲ್ಪಟ್ಟ ಜಾನಕಿ ಅನುಭವಿಸಿದ ನೋವು ಚಿಕ್ಕದಲ್ಲ, ಆದರೆ ಆ ನೋವನ್ನು ಸಹಿಸದೆ ಸೀತೆಗೆ ಬೇರೆ ಮಾರ್ಗ ಇರಲಿಲ್ಲ. ಹೀಗಾಗಿ ಶ್ರೀರಾಮನನ್ನು ಪರಿತ್ಯಜಿಸಿದ ನಂತರ ಸೀತಾ ಮಾತೆ ವಾಲ್ಮೀಕಿಯ ಆಶ್ರಮವನ್ನು ಸೇರುತ್ತಾಳೆ. ಆಶ್ರಮದ ಪ್ರತಿ ಅಣು ಅಣುವಿನಲ್ಲೂ ಜಾನಕಿಯ ಕಣ್ಣೀರಿನ ಕಥೆ ಹೇಳುತ್ತದೆ. ಸೀತಾ ಮಾತೆಯ ಆದರ್ಶ ಬದುಕನ್ನು ಈ ಆಶ್ರಮ ಎಳೆಎಳೆಯಾಗಿ ಬಿಚ್ಚಿಡುತ್ತದೆ. ಇಲ್ಲಿ ಸೀತಾ ಮಾತೆ ಲವ ಕುಶರಿಗೆ ಜನ್ಮ ನೀಡುತ್ತಾಳೆ. ಲವ ಕುಶರು ಕಲಿತು ಆಡಿ ಬೆಳೆದ ಹಲವು ಕುರುಹುಗಳು ಇಲ್ಲಿ ಕಾಣ ಸಿಗುತ್ತವೆ. ಲವ ಕುಶರ ಪಾಠ ಶಾಲೆ ಸೇರಿದಂತೆ, ರಾಮಾಯಣ ನಡೆದಿರುವುದು ಸತ್ಯ ಎನ್ನುವುದಕ್ಕೆ ಇಲ್ಲಿ ಸಾವಿರ ಸಾವಿರ ಸಾಕ್ಷಿಗಳು ನಮಗೆ ದೊರೆಯುತ್ತವೆ. ಈ ಆಶ್ರಮದಲ್ಲಿ ಸೀತಾಮಾತೆಯು ಲವ ಕುಶರನ್ನು ವಾಲ್ಮೀಕಿ ಮಹರ್ಷಿಗಳ ಮೂಲಕ ವಿದ್ಯಾವಂತರನ್ನಾಗಿಸುತ್ತಾಳೆ. ಶ್ರೀರಾಮನ ಮಕ್ಕಳಿಗೆ ಇರಬೇಕಾದ ಗುಣಗಳು ಸಿದ್ಧಿಸಿದ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಾಳೆ. ಗಂಡನಿಂದ ದೂರವಾದ ಸೀತೆಗೆ ಜೀವನದಲ್ಲಿ ಸಂತೋಷ ನೀಡಿದ್ದು ಮಕ್ಕಳಾದ ಲವಕುಶರು. ಅಯೋಧ್ಯಾಧಿಪತಿಯಾದ ಶ್ರೀರಾಮನ ಮಕ್ಕಳನ್ನು ಒಡಲಲ್ಲಿ ಹೊತ್ತ ಕಾರಣಕ್ಕಾಗಿ ಸೀತೆ ತನಗೆ ಎದುರಾದ ಘೋರ ನೋವುಗಳನ್ನು ಸಹಿಸಿಕೊಂಡು ಬರುತ್ತಾಳೆ. ಮಕ್ಕಳನ್ನು ಶ್ರೀರಾಮನಿಗೆ ಒಪ್ಪಿಸುವುದೇ ತನ್ನ ಧರ್ಮವೆಂದು ತಿಳಿದಿದ್ದ ಮಹಾನ್ ಪತಿವ್ರತೆ ಸೀತೆ.

 

ಲವ ಕುಶರಿಗಾಗಿ ತಮ್ಮ ಉಸಿರು ಬಿಗಿಹಿಡಿದು ಇಲ್ಲಿ ಬದುಕುತ್ತಾಳೆ ಸೀತೆ.ತ್ರಿಕಾಲ ಜ್ಞಾನಿಗಳಾಗಿದ್ದ ವಾಲ್ಮೀಕಿ ಮಹರ್ಷಿಗಳಿಗೆ ರಾಮಾಯಣ ರಚಿಸಲು ಸ್ಫೂರ್ತಿಯಾಗಿದ್ದು ಇದೇ ರಾಮತೀರ್ಥ. ಇಲ್ಲೇ ಕುಳಿತು ವಾಲ್ಮೀಕಿ ಮಹರ್ಷಿಗಳು ಇಂದೂಗಳ ಪವಿತ್ರ ಗ್ರಂಥ ರಾಮಾಯಣವನ್ನು ರಚಿಸಿದರು. ಇಲ್ಲಿ ಭಕ್ತರು ಇಟ್ಟಿಗೆಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ ಮನೆಯನ್ನು ಕಟ್ಟುತ್ತಾರೆ. ಹೀಗೆ ಮಾಡುವುದರಿಂದ ಮನೆ ಕಟ್ಟುವ ಕನಸು ಸಾಕಾರಗೊಳ್ಳುತ್ತದೆ ಎನ್ನುವ ನಂಬಿಕೆ ಇದೆ. ಜೊತೆಗೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇಲ್ಲಿಗೆ ಬರುವ ಭಕ್ತರದ್ದು.ಮಹಾಬಲಿ ಆಂಜನೇಯನನ್ನು ಬಂಧಿಸಿದ್ದು ಇದೇ ಸ್ಥಳದಲ್ಲಿ.ಅಮೃತ್ಸರ್ ಎನ್ನುವುದು ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಅಮೃತ್ಸರ್ ಎಂದರೆ ಮೊದಲಿಗೆ ನಮಗೆ ನೆನಪಾಗುವುದು ಗೋಲ್ಡನ್ ಟೆಂಪಲ್ ಅದೇ ಪಂಜಾಬ್ ನ ಸ್ವರ್ಣಮಂದಿರ. ಆದರೆ ಪಂಜಾಬ್ ನಲ್ಲಿರುವ ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಗ್ಗೆ ಹಲವರಿಗೆ ಗೊತ್ತಿಲ್ಲ. ರಾಮಾಯಣದ ಹಲವು ಕುರುಹುಗಳನ್ನು ನೀಡುವ ಈ ಆಶ್ರಮವನ್ನು ರಾಮ ಭಕ್ತರೆಲ್ಲರೂ ಜೀವನದಲ್ಲಿ ಒಮ್ಮೆ ನೋಡಲೇಬೇಕು. ರಾಮತೀರ್ಥ ಎಂದೇ ಹೆಸರುವಾಸಿಯಾಗಿರುವ ಈ ರಾಮತೀರ್ಥ ಸ್ಥಳ , ವಾಲ್ಮೀಕಿ ಆಶ್ರಮ ರಾಮಾಯಣದ ಹಲವು ಕುತೂಹಲಕಾರಿ ವಿಷಯಗಳನ್ನು ತನ್ನಲ್ಲಿ ಹುದುಗಿಸಿ ಕೊಂಡಿದೆ. ಇದೇ ಆಶ್ರಮದಲ್ಲಿ ಸೀತೆ ತನ್ನ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅವಳಿ ಸಹೋದರರಾದ ಲವ, ಕುಶರು ಮಹಾ ಪರಾಕ್ರಮಿಗಳಾಗುತ್ತಾರೆ.

 

 

 

ಹಿಂದೆ ರಾಜ ಮಹಾರಾಜರು ಅಶ್ವಮೇಧ ಯಾಗವನ್ನು ನಡೆಸುತ್ತಿದ್ದರು. ಆಗ ಒಂದು ಕುದುರೆಯನ್ನು ದೇಶ ಸುತ್ತಲು ಬಿಡುತ್ತಿದ್ದರು.ಆಗ ಕುದುರೆ ಓಡಾಡಿದ ಪ್ರಾಂತ್ಯದಲ್ಲಿ ರಾಜರ ವಶಕ್ಕೆ ಬರುತ್ತಿದ್ದವು . ಆಗ ಲವಕುಶರು ಕುದುರೆಯನ್ನು ಹಿಡಿದು ಬಂಧಿಸಿದರು. ಅವರ ಜೊತೆ ಯುದ್ಧ ನಡೆಯುತ್ತಿತ್ತು. ಒಮ್ಮೆ ಶ್ರೀ ರಾಮನು ಅಶ್ವಮೇಧ ಯಾಗ ನಡೆಸಲು ನಿರ್ಧರಿಸಿದ್ದ. ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯನ್ನು ಯಾರಿಗೂ ಬಂಧಿಸುವ ಧೈರ್ಯವಿರಲಿಲ್ಲ. ಆದರೆ ಮಹಾ ಪರಾಕ್ರಮಿಗಳಾದ ಲವ ಕುಶರು ಶ್ರೀರಾಮ ತೀರ್ಥದಲ್ಲಿ ಕುದುರೆಯನ್ನು ಬಂಧಿಸಿ ಬಿಟ್ಟರು. ರಾಮನ ಕುದುರೆಯನ್ನು ಕಟ್ಟಿ ಹಾಕಿದ ಲವಕುಶರ ಬಳಿ ಶ್ರೀರಾಮನ ಸೈನ್ಯ ಬಂತು, ತಮ್ಮ ಶೌರ್ಯ, ಪರಾಕ್ರಮದಿಂದ ಲವ ಕುಶರು ರಾಮನ ಸೈನ್ಯವನ್ನು ಎದುರಿಸಿದರು. ಅಷ್ಟೇ ಅಲ್ಲ ಯಾಗದ ಕುದುರೆಯನ್ನು ಬಿಡಿಸಿರುವ ಆಂಜನೇಯನನ್ನು ಲವ ಕುಶರು ಇಲ್ಲಿಯೇ ಬಂದಿಸಿದ್ದರಂತೆ. ಅಂದು ಆಂಜನೇಯನನ್ನು ಕಟ್ಟಿಹಾಕಿದ್ದ ಮರವಿದ್ದ ಜಾಗ ಇಲ್ಲಿ ಇಂದಿಗೂ ಕಾಣಸಿಗುತ್ತದೆ. ಅಲ್ಲಿ ಒಂದು ಮರವಿದ್ದ ಜಾಗದಲ್ಲಿ ಇಂದು ಇಲ್ಲಿ ದುರ್ಗಾ ದೇವಿಯ ದೇವಾಲಯವಿದೆ. ಈ ದೇವಾಲಯ ಲಾಹೋರ್ ಗೇಟ್ ಸಮೀಪ ಇದೆ.

ವಾಲ್ಮೀಕಿ ಆಶ್ರಮದಲ್ಲಿ ರಾಮಾಯಣ ಬರೆಯುವ ರೂಪದಲ್ಲಿ ಕುಳಿತಿರುವ ವಾಲ್ಮೀಕಿ ಮಹರ್ಷಿಗಳ ಸುಂದರ ರೂಪ ಇದೆ. ಅಷ್ಟೇ ಅಲ್ಲ ರಾಮಾಯಣ ಬರೆಯಲು ವಾಲ್ಮೀಕಿ ಮಹರ್ಷಿಗಳು ಕುಳಿತಿದ್ದ ಜಾಗವನ್ನು ನಾವು ಇಂದಿಗೂ ಇಲ್ಲಿ ಕಾಣಬಹುದು. ವಾಲ್ಮೀಕಿ ಆಶ್ರಮದಲ್ಲಿ ವಿಶೇಷವಾಗಿ ದಸರಾ, ಕೃಷ್ಣ ಜನ್ಮಾಷ್ಟಮಿ, ರಾಮನವಮಿ ,ದೀಪಾವಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ದೇಶದ ನಾನಾ ಭಾಗಗಳಿಂದ ಅಸಂಖ್ಯಾತ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top