fbpx
ಹೆಚ್ಚಿನ

ನಿಮ್ಮ ತೂಕ ಇಳಿಸಿಕೊಳ್ಳಲು ಈ ಬಣ್ಣ ನಿಮಗೆ ಸಹಾಯ ಮಾಡುತ್ತದೆ.

ಯಾವ ಬಣ್ಣದಿಂದ ಏನು ಉಪಯೋಗ ? ಮತ್ತು ಏನು ಲಾಭ ? ಎಂದು ನಿಮಗೆ ಗೊತ್ತೇ ?ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಯಾವ ಬಣ್ಣ ಸಹಾಯ ಮಾಡುತ್ತೆ ಎಂದು ತಿಳಿಯಿರಿ.ಬಣ್ಣಗಳಿಲ್ಲದೆ ಈ ಜಗತ್ತನ್ನು ಊಹಿಸಲು ಸಾಧ್ಯವೇ ಇಲ್ಲ.ಒಮ್ಮೆ ಊಹಿಸಿಕೊಂಡು ನೋಡಿ, ಊಹಿಸಿಕೊಳ್ಳಲು ಸಾಧ್ಯವಿಲ್ಲ ತುಂಬಾ ಕಷ್ಟ ಅಲ್ಲವೇ ಅಷ್ಟೇ ಆಲ್ಲಾ ನಮ್ಮ ಜೀವನದಲ್ಲಿ ಬಣ್ಣಗಳು ಬೆರೆತುಬಿಟ್ಟಿವೆ.

 

 

 

ವ್ಯಕ್ತಿಯೊಬ್ಬರ ಮನೋಭಾವನೆಗಳು ಮತ್ತು ನೆಡವಳಿಕೆಯ ಮೇಲೆ ಪ್ರಭಾವ ಬೀರುವುದಷ್ಟೇ ಅಲ್ಲ.ನಮ್ಮ ನಿತ್ಯ ಕೆಲಸಗಳನ್ನು ಮತ್ತು ಪ್ರತಿಕ್ರಿಯೆಯನ್ನು ಸಹ ಬಣ್ಣಗಳು ಪ್ರಭಾವಿಸುತ್ತವೆ.ಹಳದಿ ಬಣ್ಣದಿಂದ ಮನಸ್ಸಿಗೆ ಸಂತೋಷವಾದರೆ ಕೆಂಪು ಬಣ್ಣವು ಹೃದಯದ ಸ್ಪಂದನೆ ಮತ್ತು ಶ್ವಾಸವನ್ನು ಪೂರೈಸುತ್ತದೆ.ಅದೇ ರೀತಿ ಇತರೆ ಬಣ್ಣಗಳು ಯಾವ ಯಾವ ರೀತಿ ಪ್ರಭಾವ ಬೀರುತ್ತವೆಂದು ತಿಳಿಯೋಣ ಬನ್ನಿ.

ಪಿಂಕ್ ಅಥವಾ ತಿಳಿ ಗುಲಾಭಿ ಬಣ್ಣ:ಪಿಂಕ್ ಬಣ್ಣ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟವಾದ ಬಣ್ಣ ಪಿಂಕ್ ಬಣ್ಣಕ್ಕೆ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಇದೆ.ಯಾರ ಮೇಲೆ ಆಗಲಿ ಕೋಪ ಇದ್ದರೆ ಅಥವಾ ಕೋಪವನ್ನು ತಡೆದುಕೊಳ್ಳುವ ಹಂತಕ್ಕೆ ಹೋದಾಗ ಪಿಂಕ್ ಬಣ್ಣವನ್ನು ಧರಿಸಿ ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬಹುದು.ಪಿಂಕ್ ಬಣ್ಣ ಕೋಪವನ್ನು ಕಡಿಮೆ ಮಾಡುತ್ತದೆ.

ಕಿತ್ತಳೆ ಬಣ್ಣ:ನೀವು ಯಾವುದಾದರೂ ಪರೀಕ್ಷೆ ಅಥವಾ ಸಂದರ್ಶನಕ್ಕೆ ಹೋಗುತ್ತಿದ್ದೀರಾ ಎಂದರೆ ಒತ್ತಡಕ್ಕೆ ಒಳಗಾಗುತ್ತಿದ್ದರೆ ಖಂಡಿತವಾಗಿಯೂ ನಿಮಗೆ ಕಿತ್ತಳೆ ಬಣ್ಣ ಸಹಾಯಕ್ಕೆ ಬರುತ್ತದೆ.ಕಿತ್ತಳೆ ಬಣ್ಣ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಅದೇ ರೀತಿ ನಮ್ಮ ಮನಸ್ಸು ತುಂಬಾ ತೀಕ್ಷ್ಣವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಗೊಂದಲಕ್ಕೆ ಈಡಾದವರ ಮನಸ್ಸನ್ನು ಸಹ ಬದಲಾಯಿಸುತ್ತದೆ.

ಹಸಿರು ಬಣ್ಣ:ಕಚೇರಿಯಲ್ಲಿ ಕೆಲಸದ ಒತ್ತಡ ಇದೆಯಾ ? ಯಾವ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯ ವಾಗುತ್ತಿಲ್ಲವೇ ?ಹಾಗಾದರೆ ನಿಮ್ಮ ಸುತ್ತ ಮುತ್ತಲು ಹಸಿರು ಬಣ್ಣ ಇರುವಂತೆ ನೋಡಿಕೊಳ್ಳಿ.ಎಂದಾದರೂ ನೀವು ಗಮನಿಸಿದ್ದೀರಾ ?ಹಚ್ಚ ಹಸಿರಿನ ಪ್ರಕೃತಿಯನ್ನು ನೋಡಿದ ಕೂಡಲೇ ನಮಗೆ ಖುಷಿಯಾಗಿ ನಮ್ಮ ಮನಸ್ಸು ಭಾವ ಪರವಶದಿಂದ ತುಂಬಿ ಹೋಗುತ್ತದೆ.ಮನಸ್ಸಿನಲ್ಲಿರುವ ಒತ್ತಡವೆಲ್ಲ ಕರಗಿ ಹೋಗುವ ಭಾವನೆಗಳು ಉತ್ಪತ್ತಿಯಾಗುತ್ತವೆ.ಒಂದು ರೀತಿಯ ಶಕ್ತಿ,ನವೋಲ್ಲಾಸ,ಚೈತನ್ಯವನ್ನು ನಮ್ಮ ಮನಸ್ಸಿನಲ್ಲಿ ತುಂಬುತ್ತದೆ ಈ ಹಸಿರು ಬಣ್ಣ.

 

 

 

ಬಿಳಿ ಬಣ್ಣ:ಬಿಳಿ ಬಣ್ಣ ಶಾಂತಿ,ನೆಮ್ಮದಿಯ ಸಂಕೇತವಾಗಿದ್ದು.ಬೇಸಿಗೆಯಲ್ಲಿ ಹೆಚ್ಚಾಗಿ ಈ ಬಣ್ಣವನ್ನು ಉಪಯೋಗಿಸುತ್ತಾರೆ.ಬಿಸಿಲ ಬೇಗೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಬಿಳಿ ಬಣ್ಣದ ವಸ್ತುಗಳು ನಮಗೆ ಸಹಾಯ ಮಾಡುತ್ತವೆ.ಅಷ್ಟೇ ಅಲ್ಲ ನಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಸಹ ಬಿಳಿಯ ಬಣ್ಣ ಸಹಾಯ ಮಾಡುತ್ತದೆ.

ಕಪ್ಪು ಬಣ್ಣ:ಕಪ್ಪು ಬಣ್ಣವನ್ನು ಅಶುಭ ಎಂದು ಭಾವಿಸುತ್ತಾರೆ, ಹಬ್ಬಗಳು, ಸಂಭ್ರಮಗಳು, ದೈವಿಕ ಮತ್ತು ಮಂಗಳಕರ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣವನ್ನು ಬಳಸುವುದಿಲ್ಲ.ಆದರೆ ಕಪ್ಪು ಬಣ್ಣವು ನಿಮ್ಮಲ್ಲಿನ ಹುಮ್ಮಸ್ಸನ್ನು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.ನಾವು ಅಶುಭವೆಂದು ಭಾವಿಸುವ ಈ ಕಪ್ಪು ಬಣ್ಣ ಫ್ಯಾಷನ್ ಜಗತ್ತಿನಲ್ಲಿ ರಾಜನಿದ್ದಂತೆ.

ನೀಲಿ ಬಣ್ಣ:ನೀಲಿ ಬಣ್ಣಕ್ಕೆ ಹಸಿವನ್ನು ಕಡಿಮೆ ಮಾಡುವ ಶಕ್ತಿ ಇದೆ.ಇದಕ್ಕೆ ಕಾರಣ ನೀಲಿ ಬಣ್ಣವನ್ನು ನೋಡಿದ ಕೂಡಲೇ ನಮ್ಮ ಮೆದುಳು ಬಿಡುಗಡೆ ಮಾಡುವ ರಾಸಾಯನಿಕಗಳು.ಆದ ಕಾರಣ ತೂಕ ಹೆಚ್ಚಾಗುತ್ತಿದೆ,ದಪ್ಪಗಾಗಿದ್ದೇವೆ ಎಂದು ಕೊರಗುವವರು ಆ ರೀತಿ ಕೊರಗುವುದರ ಬದಲು ನೀವು ಊಟ ಮಾಡುವ ಕೋಣೆಯನ್ನು ನೀಲಿ ಬಣ್ಣಕ್ಕೆ ಬದಲಾಯಿಸಿಕೊಳ್ಳಿ.ಇದರಿಂದ ತೂಕ ಇಳಿಸಿಕೊಂಡು ಸಣ್ಣಗಾಗಬಹುದು.

ಹಳದಿ ಬಣ್ಣ:ಹಳದಿ ಬಣ್ಣ ಸೆರಟೋನಿನ್ ಎಂಬ ರಾಸಾಯನಿಕವನ್ನು ನಮ್ಮ ಮೆದುಳಿನಿಂದ ಬಿಡುಗಡೆ ಮಾಡುವಲ್ಲಿ ಸಹಾಯ ಮಾಡುತ್ತದೆ.ಈ ಹಳದಿ ಬಣ್ಣ ಮನಸ್ಸಿಗೆ ಸಂತೋಷ ಕೊಡುವುದು ಅಷ್ಟೇ ಅಲ್ಲದೆ ನಾಡಿ ವ್ಯವಸ್ಥೆಯನ್ನು ಸಹ ಚುರುಕು ಗೊಳಿಸುವುದು.ಅನೇಕ ಆಹಾರ ಉತ್ಪಾದನಾ ಸಂಸ್ಥೆಗಳು ಬಳಕೆದಾರರನ್ನು ಆಕರ್ಷಿಸಲು ಹಳದಿ ಬಣ್ಣವನ್ನು ಉಪಯೋಗಿಸುತ್ತೇವೆ.

ಕೆಂಪು ಬಣ್ಣ:ಕೆಂಪು ಬಣ್ಣ ಅತ್ಯಂತ ಶಕ್ತಿಯುತ ಬಣ್ಣವಾಗಿದೆ.ದೇಹದಲ್ಲಿರುವ ಅಡ್ರಿನಲ್ ಗ್ರಂಥಿಗಳು ಮತ್ತು ನರಗಳನ್ನು ಪ್ರೇರೇಪಿಸುತ್ತದೆ. ನಿಮ್ಮ ದೈನಂದಿನ ಕಾರ್ಯಗಳನ್ನು ಪ್ರಭಾವಿಸುತ್ತವೆ.ನೀವು ಯಾವುದನ್ನೇ ಆಗಲಿ ಸಮರ್ಥವಾಗಿ,ದೈರ್ಯವಾಗಿ ಎದುರಿಸುವಂತೆ ಮನಸ್ಸನ್ನು ಪರಿವರ್ತಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top