ಮನೋರಂಜನೆ

ರಾತ್ರಿ ಎಲ್ಲಾ ಸ್ಟೇಷನ್ನಿನಲ್ಲಿ ಶೃತಿ ಹರಿಹರನ್- ದೂರು ನೀಡಿದ್ದರೂ ಎಫ್‍ಐಆರ್ ದಾಖಲಾಗಿಲ್ಲವೇಕೆ?

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ.. ಅರ್ಜುನ್ ಸರ್ಜಾ ಅವರನ್ನು ಸಮರ್ಥಿಸುವ ಭರದಲ್ಲಿ ಶೃತಿ ಹರಿಹರನ್ ನಡತೆ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವು ನಿರ್ಮಾಪಕರು, ನಟರು, ಜನಸಾಮಾನ್ಯರು ಮಿತಿಮೀರಿ ವರ್ತಿಸುತ್ತಿದ್ದಾರೆ. ಅಂತೆಯೇ ಶೃತಿಯನ್ನು ಸಮರ್ಥಿಸುವ ಭರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಸ್ರೀಪೀಡಕನ ಪಟ್ಟ ಕಟ್ಟುವ ಕೆಲಸವೂ ಚಾಲ್ತಿಯಲ್ಲಿದೆ.

ಈ ಎಲ್ಲಾ ವಿಚಾರಗಳು ಚಾಲ್ತಿಯಲ್ಲಿರುವಾಗಲೇ ಮೀಟೂ ಅಭಿಯಾನದಲ್ಲಿ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ಕುರಿತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಇಬ್ಬರೂ ಕಾನೂನಿನ ಮೊರೆ ಹೋಗಿದ್ದಾರೆ. ನಿನ್ನೆಯಷ್ಟೇ ಶ್ರುತಿ ಹರಿಹರನ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದರ ಬೆನ್ನಲ್ಲೇ ಶ್ರುತಿ ಹರಿಹರನ್​ ಕೂಡ ಅರ್ಜುನ್ ಸರ್ಜಾ ಮತ್ತು ಅವರ ಆಪ್ತರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

ರಾತ್ರಿ 11:30ಕ್ಕೆ ನಗರದ ಹೈಗ್ರೌಂಡ್ಸ್​ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದು, ಪ್ರಶಾಂತ್​ ಸಂಬರಗಿ ಜೀವ ಬೆದರಿಕೆ ಒಡ್ಡಿದ್ದಾರೆ ಮತ್ತು ತಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಶೃತಿ ಅವರ ದೂರನ್ನ ತೆಗೆದುಕೊಳ್ಳಲು ಪೊಲೀಸರು ಕೆಲ ಕಾಲ ಸತಾಯಿಸಿದರು ಎಂದು ತಿಳಿದು ಬಂದಿದೆ. ನಂತರ ಎಸಿಪಿ ಹಾಗೂ ಡಿಸಿಪಿಯಿಂದ ಅನುಮತಿ ಪಡೆದು ರಾತ್ರಿ 2 ಗಂಟೆ ಸುಮಾರಿಗೆ ಅರ್ಜುನ್ ಸರ್ಜಾ ಆಪ್ತ ಸಂಬರಗಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ದೂರು ಸ್ವೀಕರಿಸಿರುವ ಪೊಲೀಸರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ. ಅರ್ಜುನ್ ಅವರು ಶೃತಿ ವಿರುದ್ಧ ಎರಡು ದೂರು ದಾಖಲಿಸಿದ್ದಾರೆ. ನಾವು ರಾತ್ರಿ ದೂರು ನೀಡಿದ್ದೆವು. ಆದರೆ ರಾತ್ರಿ ಆಗಿದ್ದರಿಂದ ನಾವು ಪೊಲೀಸರಿಗೆ ಹೆಚ್ಚಿನ ಒತ್ತಡ ಹೇರಲಿಲ್ಲ ಎಂದು ಶೃತಿ ಪರ ವಕೀಲರಾದ ಅನಂತ್‍ನಾಯಕ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top