ಮನೋರಂಜನೆ

ಗುಜರಾತಿನ ವಜ್ರದ ವ್ಯಾಪಾರಿಯಿಂದ 600 ನೌಕರರಿಗೆ ಕಾರು ದೀಪಾವಳಿ ಗಿಫ್ಟ್- ಕೀ ಹಸ್ತಾಂತರ ಮಾಡಲಿರುವ ಮೋದಿ.

ತಮ್ಮ ಕಂಪನಿಯ ನೌಕರರಿಗೆ ದುಬಾರಿ ಉಡುಗೊರೆಗಳನ್ನು ನೀಡುವಲ್ಲಿ ಫೇಮಸ್ ಆಗಿರುವ ಗುಜರಾತ್ ಮೂಲದ ವಜ್ರದ ವ್ಯಾಪಾರೀ ಸಾವಜಿ ಧೋಲಕಿಯಾ ಅವರು ಈ ಬಾರಿ ದೀಪಾವಳಿಗೆ 600 ನೌಕರರಿಗೆ ಕಾರು ಉಡುಗೊರೆ ನೀಡಲಿದ್ದಾರೆ. 2017ರಲ್ಲಿ ತನ್ನ ನೌಕರರಿಗೆ ವಿಶೇಷ ಗಿಫ್ಟ್ ನೀಡುವ ಮೂಲಕ ಸುದ್ದಿಯಾಗಿದ್ದ ವಜ್ರ ವ್ಯಾಪಾರಿ ಮತ್ತೊಮ್ಮೆ ಭಾರೀ ಬೆಲೆಯ ಗಿಫ್ಟ್ ನೀಡಲು ನಿರ್ಧರಿಸುವ ಮೂಲಕ ಚಾಲ್ತಿಗೆ ಬಂದಿದ್ದಾರೆ.

ಹರೇ ಕೃಷ್ಣ ಎಕ್ಸ್‌ಪೋರ್ಟರ್ಸ್ ಕಂಪೆನಿಯ ಮಾಲೀಕರಾಗಿರುವ ಧೋಲಕಿಯಾ ಅವರು ಈ ಹಿಂದೆ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಫ್ಲಾಟ್ ಹಾಗೂ ದುಬಾರಿ ಕಾರು ಗಿಫ್ಟ್ ನೀಡಿ ಸುದ್ದಿಯಾಗಿದ್ದರು. ಅಲ್ಲದೆ ಇತ್ತೀಚಿಗೆ ತಮ್ಮ ಕಂಪನಿಯಲ್ಲಿ 25 ವರ್ಷ ಪೂರೈಸಿದ ಮೂವರು ನೌಕರರಿಗೆ ಸುಮಾರು 3 ಕೋಟಿ ರು. ಮೌಲ್ಯದ ಮರ್ಸೆಡಿಸ್‌ ಬೆಂಜ್‌ ಜಿಎಲ್‌ಎಸ್‌ 350 ಡಿ ಎಸ್‌ಯುವಿ ವಾಹನವನ್ನು ಉಡುಗೊರೆಯಾಗಿ ನೀಡಿದ್ದರು.

ನೌಕರರನ್ನು ಪ್ರೋತ್ಸಾಹಿಸಲು ಕಾರುಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ವಿಶೇಷ ಬೋನಸ್ ಪಡೆಯಲು 1500 ಜನರನ್ನು ಆಯ್ಕೆ ಮಾಡಲಾಗಿತ್ತು. 600 ಜನರು ತಮಗೆ ಕಾರು ಬೇಕೆಂದು ಮನವಿ ಮಾಡಿದ್ರೆ, ಉಳಿದ 900 ನೌಕರರು ಅದೇ ಹಣವನ್ನು ಎಫ್‍ಡಿ ಮಾಡಬೇಕೆಂದು ಕೇಳಿಕೊಂಡರು. ಕಂಪನಿಯ ನೌಕರರ ಇಚ್ಚೆಯನುಸಾರವಾಗಿ ಬೋನಸ್ ನೀಡಲಾಗುತ್ತಿದೆ..

ಅಂದಹಾಗೆ 600 ನೌಕರರಿಗೆ ಮಾರುತಿ ಸುಜುಕಿ ಸೆಲೆರಿಯೋ ಕಾರ್ ಸಿಗಲಿದ್ದು ಕಂಪನಿಯ ನಾಲ್ಕು ಜನ ನೌಕರರು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಕಾರಿನ ಕೀಯನ್ನು ಪಡೆಯಲಿದ್ದಾರೆ ಎಂದು ಉದ್ಯಮಿ ಸಾವಜಿ ಡೊಲಕಿಯಾ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top