ಮನೋರಂಜನೆ

“ಚೇತನ್​ ಕೂಡ ನನ್ನ ಕೆನ್ನೆ, ಬೆನ್ನ ಸವರಿದ್ದಾರೆ”ಹೊಸ ಬಾಂಬ್ ಎಸೆದ ಐಶ್ವರ್ಯ ಅರ್ಜುನ್

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ.. ಅರ್ಜುನ್ ಸರ್ಜಾ ಅವರನ್ನು ಸಮರ್ಥಿಸುವ ಭರದಲ್ಲಿ ಶೃತಿ ಹರಿಹರನ್ ನಡತೆ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವು ನಿರ್ಮಾಪಕರು, ನಟರು, ಜನಸಾಮಾನ್ಯರು ಮಿತಿಮೀರಿ ವರ್ತಿಸುತ್ತಿದ್ದಾರೆ. ಅಂತೆಯೇ ಶೃತಿಯನ್ನು ಸಮರ್ಥಿಸುವ ಭರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಸ್ರೀಪೀಡಕನ ಪಟ್ಟ ಕಟ್ಟುವ ಕೆಲಸವೂ ಚಾಲ್ತಿಯಲ್ಲಿದೆ.

 

 

 

ಈ ಎಲ್ಲಾ ವಿಚಾರಗಳು ಚಾಲ್ತಿಯಲ್ಲಿರುವಾಗಲೇ ಮೀಟೂ ಅಭಿಯಾನದಲ್ಲಿ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ಕುರಿತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಇಬ್ಬರೂ ಕಾನೂನಿನ ಮೊರೆ ಹೋಗಿದ್ದಾರೆ. ನಿನ್ನೆಯಷ್ಟೇ ಶ್ರುತಿ ಹರಿಹರನ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದರ ಬೆನ್ನಲ್ಲೇ ಶ್ರುತಿ ಹರಿಹರನ್​ ಕೂಡ ಅರ್ಜುನ್ ಸರ್ಜಾ ಮತ್ತು ಅವರ ಆಪ್ತರ ವಿರುದ್ಧ ದೂರು ನೀಡಿದ್ದಾರೆ.ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ,ಶೃತಿ ಹರಿಹರನ್ ಸುಮಾರು 5 ಪುಟಗಳಲ್ಲಿ ದೂರನ್ನು ನೀಡಿದ್ದಾರೆ. ಶೃತಿ ಹರಿಹರನ್ ದೂರು ನೀಡಿದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು) 354(ಅತ್ಯಾಚಾರ ಉದ್ದೇಶದಿಂದ ಹಲ್ಲೆ), 354ಎ(ಲೈಂಗಿಕವಾಗಿ ಸಹಕರಿಸಲು ಒತ್ತಾಯ) ಅಡಿ ಎಫ್‍ಐಆರ್ ದಾಖಲಾಸಿದ್ದಾರೆ.

ಸವಾಲೆಸಿದ ಐಶ್ವರ್ಯ ಅರ್ಜುನ್ :
ಈ ವಿಚಾರದ ಕುರಿತು ಮಾತನಾಡಿದ ಐಶ್ವರ್ಯ ಅರ್ಜುನ್ ಶ್ರುತಿ ಹರಿಹರನ್ಗೆ ಸವಾಲೆಸೆದಿದ್ದಾರೆ,”ನನ್ನ ತಂದೆ ಯಾವ ತಪ್ಪು ಮಾಡಿಲ್ಲ, ಆಕೆ ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾಳೆ. ಇದೊಂದು ಕಾಮಿಡಿ ಘಟನೆ. ದಿನಕ್ಕೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾಳೆ, ಛೀ ಅವರ ಹೆಸರು ಹೇಳೋಕೂ ನಾಚಿಕೆಯಾಗುತ್ತದೆ. ಅಲ್ಲದೇ ರಿಹರ್ಸಲ್​ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆಕೆ ಆಗ ಆರೋಪ ಮಾಡದೇ ಈಗ ಮಾಡುತ್ತಿದ್ದಾರೆ ಎಂದರೇ ಇದೆಲ್ಲಾ ನಿಜ್ಕಕೂ ಪ್ರೀ ಪ್ಲ್ಯಾನ್​ ಎಂದಿದ್ದಾರೆ,ಶೃತಿ ಒಂದು ತಿಂಗಳ ಹಿಂದೆಯಷ್ಟೇ ನನ್ನ ಅಪ್ಪನನ್ನು ಅವರು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ ಯಾಕೆ?. ಹಾಗೆಯೇ ಅವರು ಈ ಹಿಂದೆ ತಮಿಳು ನಿರ್ಮಾಪಕರ ವಿರುದ್ಧವೂ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ಹಾಗಾದ್ರೆ ಅದರ ಬಗ್ಗೆ ಅವರು ಈಗ ಯಾಕೆ ಮಾತನಾಡುತ್ತಿಲ್ಲ,ನಮ್ಮಪ್ಪನ ಜೊತೆ ಕೆಲಸ ಮಾಡಲು ಖುಷಿಯಾಗಿದೆ ಅಂತ ಹೇಳುವ ಮೂಲಕ ನಗು ನಗುತ್ತಾ ನನ್ನ ಜೊತೆ ಮಾತನಾಡಿದ್ದು ಯಾಕೆ? ಇದರ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ. ನಾನು ಈಗ ಅವುಗಳನ್ನು ಬಯಲು ಮಾಡುತ್ತೇನೆ. ಇದರ ಹಿಂದಿನ ಉದ್ದೇಶವೇನು? ಇವೆಲ್ಲದಕ್ಕೂ ಶೃತಿ ಅವರ ಕಡೆಯಿಂದಲೇ ನನಗೆ ಉತ್ತರ ಬೇಕು” ಅಂತ ಐಶ್ವರ್ಯಾ ಖಡಕ್ ಆಗಿ ಶ್ರುತಿ ಗೆ ವಾರ್ನಿಂಗ್ ನೀಡಿದ್ದಾರೆ.

 

 

 

ನಟ ಚೇತನ್ ಮೇಲೆ ವ್ಯಂಗ್ಯವಾಗಿ ವ್ಯಂಗ್ಯವಾಡಿದ ಐಶ್ವರ್ಯ ಅರ್ಜುನ್ :
ಇಂದು ಮಾಧ್ಯಮದ ಮಾತನಾಡಿದ ಐಶ್ವರ್ಯ ಅರ್ಜುನ್ ನಟಿ ಶ್ರುತಿ ಹರಿಹರನ್ನ ಹಾಗೂ ನಟ ಚೇತನ್ ವಿರುದ್ಧ ಫುಲ್ ಗರಂ ಆಗಿದ್ದಾರೆ, ಇದೊಂದು ಕಾಮಿಡಿ ಘಟನೆ. ದಿನಕ್ಕೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾಳೆ, ಛೀ ಅವರ ಹೆಸರು ಹೇಳೋಕೂ ನಾಚಿಕೆಯಾಗುತ್ತದೆ. ಅಲ್ಲದೇ ರಿಹರ್ಸಲ್​ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆಕೆ ಆಗ ಆರೋಪ ಮಾಡದೇ ಈಗ ಮಾಡುತ್ತಿದ್ದಾರೆ ಎಂದರೇ ಇದೆಲ್ಲಾ ನಿಜ್ಕಕೂ ಪ್ರೀ ಪ್ಲ್ಯಾನ್​ ಎಂದಿದ್ದಾರೆ. ಅಲ್ಲದೇ ಇದೇ ಸಮಯದಲ್ಲಿ ಅವರು ನಟ ಚೇತನ್​ ಹೆಸರು ಕೂಡ ಹೇಳಿದ್ದಾರೆ. ನನ್ನ ತಂದೆ ಮೇಲೆ ಆರೋಪ ಮಾಡುತ್ತಿರುವ ಆಯ್ಮಮನ ಪರ ನಿಂತ ಆ ಚೇತನ್​ ಕೂಡ ನನ್ನ ಕೆನ್ನೆ, ಬೆನ್ನೆ ಸವರಿದ್ದಾರೆ. ನನ್ನನ್ನು ಡಿನ್ನರ್​ಗೆ ಇನ್ವೈಟ್​ ಮಾಡಿದ್ದಾರೆ. ಹಾಗಂತಾ ನಾನು ಕೂಡ ಮೀಟೂ ಅಡಿ ಅವರ ಮೇಲೆ ಲೈಂಗಿಕ ಆರೋಪ ಮಾಡಬಹುದಲ್ವಾ. ಫೋಟೋ ಶೂಟ್​ ವೇಳೆ ಆತ ನನ್ನ ಬೆನ್ನು ಮುಟ್ಟಿದ್ದಾನೆ, ನನ್ನ ಕೆನ್ನೆ ಸವರಿದ್ದಾನೆ ಹಾಗಂತಾ ನಾನು ಕೂಡ ಆರೋಪ ಮಾಡಬಹುದಲ್ವಾ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.ಈ ಪ್ರಕರಣ ಗಂಭೀರವಾಗಿ ತಿರುವು ಪಡೆದುಕೊಳ್ಳುತ್ತಿದೆ. ಮೇಲ್ನೋಟಕ್ಕೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದೂ, ನಟ ಅರ್ಜುನ್​ ಮೇಲೆ ಎಫ್​ಐಆರ್​ ದಾಖಲಿನ ಮೇಲೆ ಬಂಧನದ ಭೀತಿಯೂ ಕಾಡುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲಾ, ಶೃತಿ ಹರಿಹರನ್​ ಇಲ್ಲಿಯವರೆಗೂ ರಾಮ್​ ಎಂಬುವವರು ನನ್ನ ಬಾಯ್​ಫ್ರೆಂಡ್​ ಎನ್ನುತ್ತಿದ್ದರು, ಆಕೆ ಈಗ ಪತಿ ಎನ್ನುತ್ತಿದ್ದಾಳೆ. ಮೊದಲು ಆತ ಯಾರೆಂದು ತಿಳಿದುಕೊಳ್ಳಿ ಎಂದು ಐಶ್ವರ್ಯ ಆರೋಪಿಸಿದ್ರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top