fbpx
ದೇವರು

ನೀವು ಮಾಡೋ ಎಲ್ಲ ಕೆಲಸಗಳು ಯಾವ ಅಡ್ಡಿ ಇಲ್ಲದೆ ಆಗ್ಬೇಕು ಅಂದ್ರೆ ತಾಮ್ರದ ನಾಣ್ಯದಿಂದ ಅಶ್ವತ ಮರದ ಕೆಳಗೆ ಹೀಗೆ ಮಾಡಿ

ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ವಿಜಯವನ್ನು ಸಾಧಿಸಬೇಕಾದರೆ ಒಂದು ತಾಮ್ರದ ನಾಣ್ಯದಿಂದ ಅಶ್ವತ ಮರದ ಕೆಳಗಡೆ ಹೀಗೆ ಈ ರೀತಿಯಾಗಿ ದೀಪಾರಾಧನೆಯನ್ನು ಮಾಡಬೇಕು.
ಕೆಲವರು ಹಿಂದಿನಿಂದ ತುಂಬಾ ಚೆನ್ನಾಗಿ ಮುಂಚೆ ಶ್ರೀಮಂತರಾಗಿ, ಸಿರಿವಂತರಾಗಿ, ಅಷ್ಟ ಐಶ್ವರ್ಯದಿಂದ ಬಾಳಿ ಕೊನೆಯಲ್ಲಿ ವ್ಯಾಪಾರದಲ್ಲಿ ನಷ್ಟ ಬಂದು, ಸಾಲದ ಬಾಧೆ ಹೆಚ್ಚಾಗಿ ಬಡತನವನ್ನು ಅನುಭವಿಸುತ್ತಾರೆ ಇರುತ್ತಾರೆ .ಇವರಿಗೆ ಖರ್ಚುಗಳು ಹೆಚ್ಚಾಗುವವು, ಆದಾಯ ಕಡಿಮೆಯಾಗುವುದು, ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಾ ಇರುತ್ತಾರೆ. ಇಂಥವರು ಮತ್ತೆ ಶ್ರೀಮಂತರಾಗಬೇಕು ಎಂದರೆ ಏನು ಮಾಡಬೇಕು ? ಎಂದು ಈಗ ನಾವು ತಿಳಿದುಕೊಳ್ಳೋಣ ಬನ್ನಿ.

 

 

 

ಈ ಪರಿಹಾರವನ್ನು ಶುಕ್ಲ ಪಕ್ಷದ ಶುಕ್ರವಾರದ ದಿನದಂದು ಪ್ರಾರಂಭಿಸಿದರೆ ಒಳ್ಳೆಯದು, ಶುಕ್ರವಾರದ ದಿನದಂದು ಸೂರ್ಯೋದಯಕ್ಕೂ ಮುಂಚೆಯೇ ಎದ್ದು ತಲೆ ಸ್ನಾನವನ್ನು ಮಾಡಬೇಕು.ನಿಮ್ಮ ಮನೆಯಲ್ಲಿ ಪೂಜೆ ಮುಗಿಸಿ, ಹೆಣ್ಣು ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯಬೇಕು, ನಂತರ ದೇವಸ್ಥಾನದಲ್ಲಿರುವ ಅಶ್ವತ ಮರದ ಹತ್ತಿರ ಹೋಗಬೇಕು.ಅಲ್ಲಿ ನೀವು ಒಂದು ತಾಮ್ರದ ನಾಣ್ಯವನ್ನು ಎಡ ಕೈಯಲ್ಲಿ ತೆಗೆದುಕೊಂಡು ವಿರುದ್ಧ ದಿಕ್ಕಿನಲ್ಲಿ ಏಳು ಬಾರಿ ನಿಮ್ಮ ತಲೆಯ ಸುತ್ತ ಸುತ್ತಿ, ಮನಸ್ಸಿನಲ್ಲಿ ಸಾಲದ ಬಾಧೆ ತೀರಿಹೋಗಿ ಧನಪ್ರಾಪ್ತಿ ಯಾಗಬೇಕೆಂದು ಸಂಕಲ್ಪ ಮಾಡಿ ಕೊಳ್ಳಬೇಕು .ನಂತರ ಆ ತಾಮ್ರದ ನಾಣ್ಯವನ್ನು ಮಣ್ಣಿನ ದೀಪದಲ್ಲಿ ಹಾಕಿ, ಎಣ್ಣೆಯಿಂದ ದೀಪಾರಾಧನೆ ಮಾಡಬೇಕು. ಈ ದೀಪ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ನೋಡುವಂತೆ ಇಡಬೇಕು.ನೈವೇದ್ಯವಾಗಿ ಯಾವುದಾದರೂ ಸಿಹಿ ಪದಾರ್ಥವನ್ನು ಅರ್ಪಿಸಬೇಕು.

ಪೂಜೆ ಮುಗಿದ ನಂತರ ಅಲ್ಲಿಂದ ಯಾವ ವಸ್ತುಗಳನ್ನು ಕೂಡ ಮನೆಗೆ ಮರಳಿ ತೆಗೆದುಕೊಂಡು ಬರಬಾರದು, ಮತ್ತೆ ಮನೆಗೆ ಹೋಗುವಾಗ ದಾರಿಯಲ್ಲಿ ಯಾರ ಹತ್ತಿರವೂ ಮಾತನಾಡಬಾರದು.ಈ ಪೂಜೆಯ ಬಗ್ಗೆ ಯಾರ ಹತ್ತಿರವೂ ಹೇಳಿಕೊಳ್ಳಬಾರದು. ಹೀಗೆ ಬೆಳಗ್ಗೆ 6 ಗಂಟೆಯ ಒಳಗೆ ಈ ಪೂಜೆ ಮಾಡಿಸಿದರೆ ತುಂಬಾ ಒಳ್ಳೆಯದು.ಹೀಗೆ ಸತತವಾಗಿ ಮೂರು ವಾರಗಳ ಕಾಲ, ಭಕ್ತಿ, ಶ್ರದ್ಧೆಯಿಂದ ಈ ಪೂಜೆಯನ್ನು ಮಾಡಿದರೆ ನೀವು ಅಂದುಕೊಂಡ ಕೆಲಸಗಳು ಸರಳವಾಗಿ ನೆರವೇರುತ್ತವೆ. ಹಾಗೆಯೇ ಹೀಗೆ ಮಾಡುವುದರಿಂದ ಋಣಬಾಧೆ ತೀರಿಹೋಗಿ ಧನ ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top