ಭವಿಷ್ಯ

28 ಅಕ್ಟೋಬರ್: ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೨೮ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೩೩
ಸೂರ್ಯಾಸ್ತ : ೧೭:೩೫
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಕೃಷ್ಣ ಪಕ್ಷ
ತಿಥಿ : ಚೌತಿ – ೧೬:೫೪ ವರೆಗೆ
ನಕ್ಷತ್ರ : ರೋಹಿಣಿ – ೦೭:೨೪ ವರೆಗೆ
ಯೋಗ : ಪರಿಘ – ೨೨:೪೨ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ:೧೧:೪೨ – ೧೨:೨೬
ಅಮೃತಕಾಲ : ೨೧:೫೪ – ೨೩:೨೬
ರಾಹು ಕಾಲ:೧೬:೧೨ – ೧೭:೩೫
ಗುಳಿಕ ಕಾಲ:೧೪:೫೦ – ೧೬:೧೨
ಯಮಗಂಡ:೧೨:೦೪ – ೧೩:೨೭

ಒಂದು ಕಡೆ ಮಾಡಿದ ಸಾಲ ತೀರಿಸಲು ಮತ್ತೊಂದು ಕಡೆ ಸಾಲ ಮಾಡಿದಂತೆ ಒಂದು ಸಮಸ್ಯೆಯಿಂದ ಬಿಡುಗಡೆ ಆಯಿತು ಅನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗುವುದು. ಮನೆದೇವರ ಸನ್ನಿಧಾನಕ್ಕೆ ಹೋಗಿ ಬನ್ನಿ, ಒಳಿತಾಗುವುದು.

ಸದ್ಯದ ಪರಿಸ್ಥಿತಿಯು ಏಕಾಂತಮಯವಾದ ಸ್ಥಳವನ್ನು ಬಯಸುತ್ತದೆ. ಅಂತೆಯೆ ಮನಸ್ಸಿನ ನೆಮ್ಮದಿಗಾಗಿ ಅಂತಹ ಸ್ಥಳವನ್ನು ಹುಡುಕಿಕೊಂಡು ಹೋಗುವಿರಿ. ಇದರಿಂದಾಗಿ ಮಾನಸಿಕ ನೆಮ್ಮದಿ ದೊರೆಯುವುದು. ಕಷ್ಟಗಳನ್ನು ಎದುರಿಸುವ ಶಕ್ತಿ ಬರುವುದು.

ಸಕಾರಾತ್ಮಕ ಚಿಂತನೆಯಿಂದ ಮಹತ್ತರವಾದ ಕೆಲಸವನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಇದು ನಿಮ್ಮ ಪ್ರಸಿದ್ಧಿಗೆ ದಾರಿಯಾಗುವುದು. ಇದರ ಜತೆಗೆ ಖರ್ಚಿನ ದಾರಿ ತೆರೆದುಕೊಳ್ಳವುದರಿಂದ ಖರ್ಚು ವೆಚ್ಚದ ಕಡೆ ಬಿಗಿ ಹಿಡಿತ ಮಾಡುವುದು ಒಳ್ಳೆಯದು.

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಈಗ ನಿಮಗೆ ಒಳ್ಳೆಯ ಕಾಲವಿದೆ. ಉದಾಸೀನ ಮಾಡದೆ ಬಂದ ಉತ್ತಮ ಅವಕಾಶವನ್ನು ಉಪಯೋಗಿಸಿಕೊಂಡು ಮುಂದುವರೆಯಿರಿ.

 

ಎಲ್ಲಾ ಸಂದರ್ಭದಲ್ಲೂ ಕೇವಲ ಮಾತಿನಿಂದ ಕೆಲಸವಾಗಲಾರದು. ಶ್ರಮ ವಹಿಸಿ ದುಡಿದಾಗಲಷ್ಟೆ ಪ್ರತಿಫಲ ಸಿಗುತ್ತದೆ. ನಿಮ್ಮ ಪರವಾಗಿ ಇತರರು ಕೆಲಸ ಮಾಡುತ್ತಾರೆಂಬ ಆಶಾವಾದ ಹುಸಿಯಾಗಲಿದೆ.

 

ಬದುಕಿನ ಎಲ್ಲಾ ಹಾದಿಗಳು ಮುಚ್ಚಿಹೋಗಿವೆ ಎಂಬ ತಲ್ಲಣ ಬೇಡ. ಅದಷ್ಟು ಒಂಟಿಯಾಗಿ ಇರದೆ ನಿಮ್ಮನ್ನು ಇಷ್ಟಪಡುವ ಸ್ನೇಹಿತರೊಂದಿಗೆ ಮಾತನಾಡಿ. ಇದರಿಂದ ನಿಮ್ಮಲ್ಲಿ ನವ ಚೈತನ್ಯ ಮೂಡುತ್ತದೆ.

 

ಆರ್ಥಿಕ ಸ್ಥಿತಿ ದಿನದಿನಕ್ಕೆ ಬಿಗಡಾಯಿಸುತ್ತಿರುವುದರಿಂದ ಕೆಲವು ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಮನೆಯಲ್ಲಿ ಸಂಗಾತಿಯ ಮಾತುಗಳಿಗೂ ಬೆಲೆ ಕೊಟ್ಟರೆ ಒಳ್ಳೆಯದು.

 

ಹೊಸ ಹೊಸ ಸಾಹಸಗಳಿಗೆ ಕೈಹಾಕುವುದರಿಂದ ಅದರಲ್ಲಿ ಯಶಸ್ಸನ್ನು ಕಾಣುವಿರಿ. ಬಂಧು ಬಾಂಧವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಒಳಿತಾಗುವುದು.

 

ಕಷ್ಟದಲ್ಲಿರುವವರಿಗೆ ಪುಕ್ಕಟೆ ಸಲಹೆ ಕೊಡುವವರು ಅನೇಕ ಮಂದಿ. ಆದರೆ ನಿಮ್ಮ ಕಷ್ಟಕ್ಕೆ ಮರುಗಿ ಸಹಕಾರ ನೀಡುವ ಜನ ವಿರಳ. ಆದರೆ ದೈವದ ಅನುಗ್ರಹದಿಂದ ನಿಮಗೆ ಒಳಿತಾಗುವುದು.

ಐಷಾರಾಮಿ ಜೀವನ ಸಾಗಿಸುವ ಕನಸಿರಲಿ. ಆದರೆ ಅದಕ್ಕೆ ಶ್ರಮದ ಬೆವರಿನ ಹನಿ ಹರಿಸಿದಾಗ ಮಾತ್ರ ಸುಖ ದೊರೆಯುವುದು. ಒಂದು ದೃಢ ನಿರ್ಧಾರದಿಂದ ಕಾರ್ಯ ಪ್ರವೃತ್ತರಾಗಿ. ಒಳಿತಾಗುವುದು.

 

ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎಂಬುದು ಜನಜನಿತವಾಗಿದೆ. ಹಾಗಾಗಿ ನೀವು ನಿಮ್ಮ ವಿಚಾರಗಳನ್ನು ಪರರ ಮುಂದೆ ಹೇಳುವಾಗ ಎರಡು ಬಾರಿ ಚಿಂತಿಸಿ ವಿಚಾರಗಳನ್ನು ಮಂಡಿಸಿ. ಇಲ್ಲದೆ ಇದ್ದಲ್ಲಿ ವೃಥಾ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ.

ಪದೇ ಪದೆ ಸೋಲುಗಳು ಎಂಬ ನಿರಾಶಾವಾದದಿಂದ ದಿನ ಆರಂಭಿಸದಿರಿ. ಎಲ್ಲದಕ್ಕೂ ಕಾಲನಾಮಕ ಪರಮಾತ್ಮ ಕಾರಣನಾದ್ದರಿಂದ ಆತನನ್ನು ಅನನ್ಯ ಭಕ್ತಿಯಿಂದ ಭಜಿಸಿ. ಒಳಿತಾಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top