fbpx
ಮನೋರಂಜನೆ

“ಪ್ರಿಯಾಂಕಾಗೆ ಜವಾಬ್ದಾರಿಯುತವಾಗಿ ‘ಫೈರ್’ ಅನ್ನು ಮುನ್ನಡೆಸುವ ಧೈರ್ಯ ಇರಲಿಲ್ಲ” ನಟ ಚೇತನ್

ಫೈರ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ನಟಿ ಪ್ರಿಯಾಂಕಾ ಉಪೇಂದ್ರ ರಾಜೀನಾಮೆ ನೀಡಿರುವ ಬಗ್ಗೆ ನಟ ಚೇತನ್ ಸ್ಪಷ್ಟೀಕರಣ ನೀಡಿದ್ದಾರೆ. ತಮ್ಮ ಫೇಸ್ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿರುವ ಚೇತನ್ “ಪ್ರಿಯಾಂಕಾಗೆ ಜವಾಬ್ದಾರಿಯುತವಾಗಿ ‘ಫೈರ್’ ಅನ್ನು ಮುನ್ನಡೆಸುವ ಧೈರ್ಯ ಇರಲಿಲ್ಲ” ಎಂದು ಹೇಳಿದ್ದಾರೆ. ಚೇತನ್ ಬೆಂಗಳೂರು ಬಿಟ್ಟು ಅಮೆರಿಕಾಕ್ಕೆ ಹೋಗುತ್ತಿದ್ದಾರೆ ಎಂದು ಹರಡುತ್ತಿರುವ ವದಂತಿಯನ್ನು ಅವ್ರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

 

ಚೇತನ್ ಅವರ ಫೇಸ್ಬುಕ್ ಪೋಸ್ಟ್ ಈ ರೀತಿ ಇದೆ.

1. ಕರ್ನಾಟಕ ನನ್ನ ಮನೆ; ನಾನು ಬದುಕಲು ,ಸೇವೆ ಮಾಡಲು ಆಯ್ಕೆ ಮಾಡಿಕೊಂಡಿರುವ ಈ ಬೀಡು ನನ್ನ ಪ್ರೀತಿಯ ನೆಲ. ಕೆಲವು ಮಾಧ್ಯಮಗಳು ನಾನು ಶೀಘ್ರದಲ್ಲೇ ಯು.ಎಸ್ ಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಇದು ಅತಿರೇಕದ ವಿಷಯ . ನಾನು ಯುಎಸ್ಗೆ ಹೋಗುತ್ತಿಲ್ಲ ಮತ್ತು ನಾನು ನಾಲ್ಕು ವರ್ಷಗಳಿಂದ ಅಲ್ಲಿಗೆ ಹೋಗಿಯುಯಿಲ್ಲ.

2. ಶೃತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣದ ವಿಷಯದಲ್ಲಿ ಶೃತಿರವರು FIRE ನ ಆಂತರಿಕ ದೂರು ಸಮೀತಿಯಲ್ಲಿ ದೂರು ದಾಖಲಿಸಿಲ್ಲ. ಮೂರು ತಿಂಗಳ ಒಳಗೆ ನಡೆದ ಲೈಂಗಿಕ ಕಿರುಕುಳದ ಪ್ರಕರಣಗಳನ್ನಷ್ಟೆ ಕಾನೂನಿನ ಪ್ರಕಾರ ಆಂತರಿಕ ದೂರು ಸಮೀತಿಯು ತನಿಖೆ ನಡೆಸಲು ಸಾಧ್ಯ.ಇದು ನಮ್ಮ ಆಂತರಿಕ ದೂರು ಸಮೀತಿಯ ಮಿತಿ.ಎರಡು ವರ್ಷಗಳ ಹಿಂದೆ ಈ ಘಟನೆ ನಡೆದಿರುವುದರಿಂದಾಗಿ ಇದು ನಮ್ಮ ಮಿತಿಯೊಳಗೆ ಬರುವುದಿಲ್ಲ.
ಆದ್ದರಿಂದ, FIRE #ಮೀಟೂ ಚಳುವಳಿಗೆ ಬೆಂಬಲವನ್ನು ಒದಗಿಸಿದೆ ,ಶೃತಿರವರ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತೇವೆ ಎಂದಿಲ್ಲ. ಶೃತಿ FIRE ಮತ್ತು ಆಂತರಿಕ ದೂರು ಸಮೀತಿಯ ಸದಸ್ಯರಾಗಿದ್ದಾರೆ.

3. FIRE ನ ಪ್ರಮುಖ ಸ್ಥಾನಗಳಲ್ಲಿದ್ದ ಕೆಲವು ಸದಸ್ಯರು ಸಂಸ್ಥೆಯನ್ನು ತೊರೆದಿದ್ದಾರೆ. ಅವರಿಗೆ ಸರಿಯಾಗಿ ಕಾಣುವ ಯಾವುದೇ ಕಾರಣಕ್ಕಾದರು ಅವರು ಸಂಸ್ಥೆಯನ್ನು ತೊರೆಯಲು ಮುಕ್ತರಾಗಿದ್ದಾರೆ. FIRE ಸಂಸ್ಥಾಪಕನಾಗಿ ಮಹಿಳೆಯರು ಯಾವಾಗಲೂ ಶಕ್ತಿಯುತ ಸ್ತಾನದಲ್ಲಿರಬೇಕು ಎಂದು ನಾನು ನಂಬಿದ್ದೇನೆ, ಹಾಗಾಗಿ ನಮ್ಮ ಸಂಸ್ಥೆಗೆ ಮಹಿಳೆಯೆ ಅಧ್ಯಕ್ಷರಾಗಬೇಕೆಂಬ ನಿರ್ಧಾರದೊಂದಿಗೆ ನಾನೆ ಅಧ್ಯಕ್ಷನಾಗಿರಲು ನಿರಾಕರಿಸಿದ್ದೇನೆ. ದುರದೃಷ್ಟವಶಾತ್, ನಮ್ಮ ಹಿಂದಿನ ಅಧ್ಯಕ್ಷರಿಗೆ ಕಾರ್ಯದಕ್ಷತೆ,ಸಾಮರ್ಥ್ಯ, ಒಳಗೊಳ್ಳುವಿಕೆ, ಮತ್ತು ಜವಾಬ್ದಾರಿಯುತವಾಗಿ FIREನ್ನು ಮುನ್ನಡೆಸುವ ಧೈರ್ಯ ಇರಲಿಲ್ಲ. ಸೈದ್ಧಾಂತಿಕ ಭಿನ್ನತೆಗಳ ಕಾರಣದಿಂದಾಗಿ,ದಿಲೀಪ್ ರವರನ್ನು ಕೆಲವು ವರ್ಷಗಳಿಂದ ಬಲ್ಲೆ ಎನ್ನುವ ಕಾರಣಕ್ಕಾಗಿ (ಅದು ಅವರ ವೈಯುಕ್ತಿಕ ಇಚ್ಚೆ) AMMAದಲ್ಲಿ ಅಪಹರಣ ಮತ್ತು ಕಿರುಕುಳದ ಪುನರುತ್ಥಾನದ ವಿರುದ್ಧ ಅವರು ವಸ್ತುನಿಷ್ಠವಾಗಿ ನಿಲ್ಲಲು ಸಾಧ್ಯವಿಲ್ಲವಾದ್ದರಿಂದ ಅವರು ರಾಜೀನಾಮೆ ನೀಡಿದರು. ಹಲವಾರು ತಿಂಗಳುಗಳಿಂದ ಅಧ್ಯಕ್ಷ ಹುದ್ದೆಯನ್ನು ಅವರು ನಿಭಾಯಿಸುತ್ತಿಲ್ಲ. FIRE ಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಸಂಪರ್ಕದಲ್ಲಿರುವುದನ್ನು ಅವರು ಬಿಟ್ಟುಬಿಟ್ಟಿದ್ದರು.

ಮಾಧ್ಯಮ ಕೇಳುತ್ತಿರುವ ಪ್ರಶ್ನೆಗಳಿಗೆ ಇದು ಕೆಲವು ಉತ್ತರಗಳು.

ದಿನದಿಂದ ದಿನಕ್ಕೆ FIRE ಸಂಸ್ಥೆಯು ಬೆಳೆಯುತ್ತಿದೆ ಮತ್ತು ಸುರಕ್ಷಿತ ,ಆರೋಗ್ಯಕರ ಚಲನಚಿತ್ರರಂಗವನ್ನು ಕಟ್ಟುವ ಕೆಲಸಕ್ಕಾಗಿ ಸದಾ ಮುಂದಿರುತ್ತದೆ.ನಮ್ಮ ಹೋರಾಟಗಳನ್ನು ಮುಂದುವರಿಸುತ್ತೇವೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top