ಮನೋರಂಜನೆ

ರವಿಶ್ರೀವತ್ಸ ಸಂಜನಾಗೆ ಕ್ಷಮೆ ಕೇಳಲು ನೀಡಿದ್ದ ಗಡುವು ಮುಕ್ತಾಯ,ನಾಗೇಂದ್ರ ಪ್ರಸಾದ್​ಗೆ ಕಾಲ್ ಮಾಡಿದ ಸಂಜನಾ.ಆಮೇಲೆ ಆಗಿದಾದ್ರೂ ಏನು

ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಎದ್ದಿರುವ #MeToo ಅಭಿಯಾನ ವಿವಾದದ ಕೇಂದ್ರ ಬಿಂದುವಾಗುತ್ತಿವೆ. ಇತ್ತೀಚೆಗಷ್ಟೆ ನಟಿ ಸಂಜನಾ ಗಲ್ರಾಣಿ ಅವರು ನಿರ್ದೇಶಕ ರವಿ ಶ್ರೀವತ್ಸ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ‘ಗಂಡ ಹೆಂಡತಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಿರ್ದೇಶಕ ತನಗೆ ಮುಜುಗರವಾಗುವಂತೆ ಚುಂಬನ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಲು ತನ್ನ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ವಿರೋಧಿಸಿದಕ್ಕೆ ಅವರು ತನಗೆ ಬೆದರಿಕೆ ಹಾಕಿ 50ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಅದು ಅವರ ಮೊದಲ ಸಿನಿಮಾ, ಆಗ ಅವರಿಗೆ 16 ವರ್ಷವಾಗಿದ್ದ ಕಾರಣ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಇದ್ದರು ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೇಶಕ ರವಿ ಶ್ರೀವತ್ಸ “ನಟಿ ಸಂಜನಾ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. 12 ವರ್ಷಗಳ ನಂತರ ಸುಮ್ಮನೆ ಆರೋಪ ಮಾಡುತ್ತಿದ್ದಾರೆ.” ಎಂದು ಫೇಸ್ಬುಕ್ ಮೂಲಕ ಹೇಳಿಕೊಂಡಿದ್ದರು. ಅಲ್ಲದೇ ಸುದ್ದಿಗೋಷ್ಠಿ ನಡೆಸಿ ರವಿ ಶ್ರೀವತ್ಸ ಅವರು ನಟಿ ಸಂಜನಾ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದರು.. ಅಷ್ಟೇ ಅಲ್ಲದೆ ಸಂಜನಾ ಅವರ ಬಳಿ ಕ್ಷಮೆ ಕೇಳಬೇಕು ಎಂದು ಈ ದಿನದ ವರಿಗೂ ಟೈಮ್ ಕೊಟ್ಟಿದ್ದರು ಇಲ್ಲವಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮುಂಚೆನೇ ಎಚ್ಚರಿಕೆ ಕೊಟ್ಟಿದ್ದರು ,ಈ ಕುರಿತು ನಿರ್ದೇಶಕ ಸಂಘದ ಬಳಿಯೂ ಈ ವಿಚಾರ ಚರ್ಚೆಯಾಗಿತ್ತು .

 

 

 

ನಟಿ ಸಂಜನಾ ಗರ್ಲಾನಿಗೆ ಕ್ಷಮೆ ಕೇಳಲು ನೀಡಿದ್ದ ಗಡುವು ಮುಕ್ತಾಯಗೊಂಡಿದೆ.ಈ ಸಂಬಂಧ ನಿರ್ದೇಶಕರ ಸಂಘದ ಅಧ್ಯಕ್ಷ ವಿ.ನಾಗೇಂದ್ರ ಪ್ರಸಾದ್​ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಅಂದು ರವಿಶ್ರೀವತ್ಸ, ಸಂಜನಾ ಮಾಡಿದ ಆರೋಪಗಳಿಗೆ ದಾಖಲೆ ಸಮೇತ ಉತ್ತರಿಸಿ, ತಮ್ಮ ಮೇಲಿನ ಆರೋಪ ಸುಳ್ಳು ಎನ್ನುವುದನ್ನು ಸಾಬೀತು ಪಡಿಸಲು ಪ್ರಯತ್ನಿಸಿದ್ದರು.ಇದರ ಜತೆಗೆ ಶುಕ್ರವಾರ(ನಿನ್ನೆ)ದೊಳಗೆ ಮಾಧ್ಯಮದ ಮುಂದೆ ಸಂಜನಾ ಕ್ಷಮೆ ಕೇಳಬೇಕೆಂದು ಗಡುವು ನೀಡಲಾಗಿತ್ತು. ಆದರೆ, ಈ ಗಡುವು ಮುಕ್ತಾಯಗೊಂಡಿದ್ದು, ಈ ವಿಚಾರವಾಗಿ ಇಂದು ನಿರ್ದೇಶಕ ಸಂಘದ ಅಧ್ಯಕ್ಷರಾದ ವಿ. ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.‌ ‌‌ಆದ್ರೆ ಸಂಜನಾ ಗರ್ಲಾನಿ, ನಾಗೇಂದ್ರ ಪ್ರಸಾದ್​​​​ಗೆ ಸ್ವತಃ ಕಾಲ್​ ಮಾಡಿ, ‘ಶೂಟಿಂಗ್ ಇರುವ ಕಾರಣ ನವೆಂಬರ್​ 8 ರಂದು ಭೇಟಿ ಮಾಡುವುದಾಗಿ ವಿನಂತಿಸಿಕೊಂಡಿದ್ದಾರಂತೆ. ಹೀಗಾಗಿ ಸಂಜನಾ ಗರ್ಲಾನಿ ಬಗ್ಗೆ ನಿರ್ದೇಶಕ ಸಂಘದಲ್ಲಿ ಇದ್ದ ಮಹತ್ತರ ಸಭೆ ಮುಂದಿನ ತಿಂಗಳಿಗೆ ಮುಂದಕ್ಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top