ಭವಿಷ್ಯ

ಅಕ್ಟೋಬರ್ 3ನೇ ತಾರೀಖಿನಂದು ಆದ ಗುರುವಿನ ಪಥ ಬದಲಾವಣೆಯಿಂದ ಈಗ ಯಾರಿಗೆ ಶುಭ ಫಲ ಮತ್ತು ಯಾರಿಗೆ ಅಶುಭ ಫಲ ಗೊತ್ತಾ

ಗುರುವಿನ ಈ ಬದಲಾವಣೆಯಿಂದ ಇನ್ನು ಮುಂದೆ ಅನ್ಯಾಯ ಆಗಿರುವವರಿಗೆಲ್ಲ ನ್ಯಾಯ ದೊರೆಯಲಿದೆ.ಗುರು ಬಲ ಬಂದರೆ ಎಲ್ಲವೂ ಒಳಿತಾಗುತ್ತದೆ. ಗುರುವಿನ ಪಥ ಬದಲಾವಣೆಯಿಂದ ಯಾರಿಗೆ ಶುಭ ? ಮತ್ತು ಯಾರಿಗೆ ಅಶುಭ ಎನ್ನುವುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.

ಗುರುವಿನ ಬದಲಾವಣೆ ಬಹಳ ಹಿಂದೆಯೇ ಅಂದರೆ ಅಕ್ಟೋಬರ್ ಮೂರನೇ ತಾರೀಕಿನಂದು ಆಗಿದೆ.ಆದರೆ ಈಗ ಅದು ತನ್ನ ಪಥ ಬದಲಾವಣೆಯಾಗಿದೆ. ಆದರೆ ಈಗ ಶನಿವಾರದ ದಿನ ವಿಶೇಷವಾಗಿ ಒಂದು ಅವಧಿಗೆ ಗುರು ತನ್ನ ಪಥವನ್ನು ಬದಲಾವಣೆ ಮಾಡುತ್ತಿದ್ದಾನೆ. ಯಾವ ರೀತಿ ಎಂದರೆ ಗುರು ನ್ಯಾಯಾಧಿಪತಿಯಾಗಿ ಇರುವ ಶನಿಯ ನಕ್ಷತ್ರವಾದ ಅನುರಾಧಾ ನಕ್ಷತ್ರಕ್ಕೆ ಗುರುವಿನ ಸಂಚಾರವಾಗಲಿದೆ.ಧರ್ಮಾಧಿಪತಿ ಗುರು ಮತ್ತು ನ್ಯಾಯಾಧಿಪತಿ ಶನಿ ಈ ರೀತಿಯಾಗಿ ಸಂಚಾರ ಮಾಡುತ್ತಿರುವುದರಿಂದ ಏನಾಗುತ್ತದೆ ? ಯಾರ್ಯಾರಿಗೆ ಇದುವರೆಗೂ ಅನ್ಯಾಯವಾಗಿದೆಯೋ , ಯಾರಿಗೆ ನ್ಯಾಯ ಸಿಕ್ಕಿರುವುದಿಲ್ಲವೋ ಇನ್ನು ಮುಂದೆ ಅವರಿಗೆ ಎಲ್ಲದರಲ್ಲೂ ನ್ಯಾಯ ಸಿಗಲಿದೆ. ಅದು ಕೂಡ ಧರ್ಮದ ಮುಖಾಂತರವಾಗಿಯೇ ನ್ಯಾಯ ದೊರೆಯಲಿದೆ. ಎಸ್ಟೋ ಕೋರ್ಟ್ ಕೇಸ್ ಗಳಲ್ಲಿಯೂ ಕೂಡ ರಾಜಿ ಮುಖಾಂತರವಾಗಿ ಬಗೆಹರಿಯುವ ಸಾಧ್ಯತೆ ಇದೆ ಮತ್ತು ಪೋಲಿಸ್ ಸ್ಟೇಷನ್ ಗೆ ಹೋದರು ಕೂಡ ಅಲ್ಲಿಯೂ ಕೂಡ ರಾಜಿಯಾಗುವ ಸಾಧ್ಯತೆಗಳಿವೆ,ಹೀಗೆ ಪರಿಪೂರ್ಣವಾದ ಜಯ ಸಿಗಲಿದೆ. ಯಾವ ಕ್ಷೇತ್ರದವರಿಗೆ ಅನುಕೂಲವಾಗಲಿದೆ ಎನ್ನುವುದನ್ನು ನೋಡೋಣ ಬನ್ನಿ.

 

 

 

ಎಣ್ಣೆ ಉದ್ಯಮ ಮತ್ತು ಮಾರಾಟ, ವ್ಯವಹಾರ,ವ್ಯಾಪಾರ ಮಾಡುತ್ತಿರುವವರಿಗೆ ಅದ್ಭುತವಾದ ಉದ್ಯೋಗಗಳು ಸಿಗುತ್ತವೆ.ಸೇವಾ ವೃತ್ತಿಯಲ್ಲಿರುವವರಿಗೆ ಅಂದರೆ ಬೇರೆಯವರ ಕೈಕೆಳಗೆ ಕೆಲಸ ಮಾಡುತ್ತಿರುವವರಿಗೆ ಅದ್ಭುತವಾದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಮತ್ತು ಕಟ್ಟಡದ ಕೆಲಸಗಳು ಅಂದರೆ ಕಟ್ಟಡ ನಿರ್ಮಾಣ ಮಾಡುವ ಕೆಲಸಗಳು, ರೋಡ್ ಕೆಲಸಗಳನ್ನು ಮಾಡುವುದು ಇಂತಹ ಕಠಿಣ ಕೆಲಸ ಮಾಡುತ್ತಿರುವವರಿಗೆ ಅದ್ಭುತವಾದ ಅವಕಾಶಗಳು ಮತ್ತು ಒಳ್ಳೆಯ ಉದ್ಯೋಗಗಳು ಪ್ರಾಪ್ತಿಯಾಗುತ್ತವೆ.ಕಟ್ಟಡ ನಿರ್ಮಾಣಕ್ಕೆ ಬಳಸುವ ಮರಳು, ಇಟ್ಟಿಗೆ, ಕಬ್ಬಿಣ ಈ ಎಲ್ಲಾ ವಸ್ತುಗಳ ವ್ಯಾಪಾರ,ವ್ಯವಹಾರ ಮತ್ತು ಉದ್ಯಮ ಮಾಡುತ್ತಿರುವವರಿಗೆ ಅದ್ಭುತವಾದ ಲಾಭವಾಗಲಿದೆ. ಮತ್ತು ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತವೆ. ಈ ಸಂದರ್ಭದಲ್ಲಿ ಇನ್ನೂ ಮುಂದಿನ ಈ ಮೂರು ತಿಂಗಳ ಅವಧಿಯಲ್ಲಿ ಅದ್ಭುತವಾಗಿ ಬೆಳವಣಿಗೆ ಯಾವುದಕ್ಕೆ ದಾರಿಗಳು ಗೋಚರವಾಗುತ್ತವೆ.

ಮೆಕಾನಿಕಲ್ ವೃತ್ತಿ ,ಟ್ರ್ಯಾಕ್ಟರ್ ರಿಪೇರಿ ಮತ್ತು ಕೃಷಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಅದ್ಭುತವಾದ ಲಾಭಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ, ಜೊತೆಯಲ್ಲಿ ಹಳೆಯ ವಸ್ತುಗಳು, ಯಾವುದೇ ಹಳೆಯ ವಸ್ತುಗಳಾಗಿದ್ದರು ಎಲೆಕ್ಟ್ರಾನಿಕ್, ಬಟ್ಟೆಗಳು , ವೃದ್ಧಾಶ್ರಮ ಮತ್ತು ಅನಾಥ ಮಕ್ಕಳ ಆಶ್ರಮ ನಡೆಸುತ್ತಿರುವವರಿಗೆ ಎಲ್ಲರಿಗೂ ಒಂದು ಚಮತ್ಕಾರಯುತವಾದ ರೀತಿಯಲ್ಲಿ ಯಾವುದೇ ದೈವಾನುಗ್ರಹ, ಗುರುವಿನ ಅನುಗ್ರಹದಿಂದ ಒಳ್ಳೆಯ ಫಲಗಳು ಲಭಿಸುತ್ತವೆ, ಒಳ್ಳೆಯ ರೀತಿಯಲ್ಲಿ ಇನ್ನು ಮುಂದೆ ಎಲ್ಲಾ ವಿಷಯಗಳಲ್ಲೂ ಜಯ ಲಭಿಸಲಿದೆ ಉತ್ತಮವಾದ ರೀತಿಯಲ್ಲಿ ಬದಲಾವಣೆಯಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top