fbpx
ಮನೋರಂಜನೆ

ಶಿವಣ್ಣನಿಗೆ ನಾಯಕಿಯಾಗೋ ಚಾನ್ಸ್ ಗಿಟ್ಟಿಸಿಕೊಂಡ 30 ವರ್ಷದ ಈ ಸುಂದರಿ ಯಾರು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನದಾಚೆಗೂ ಆದರಕ್ಕೆ ಪಾತ್ರರಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್.. ಸದಾ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.  ಒಪ್ಪಂ ರಿಮೇಕ್ ಆಗಿರುವ ಕವಚ ಚಿತ್ರದ ಮತ್ತು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ರುಸ್ತುಮ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಶಿವಣ್ಣ ಇದೀಗ ‘ದ್ರೋಣಾ’ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 

ಪ್ರಮೋದ್ ಚಕ್ರವರ್ತಿ ನಿರ್ದೇಶನ ಮಾಡಲಿರುವ ದ್ರೋಣ ಚಿತ್ರ ಜೂನ್ 22ಕ್ಕೆ ಸೆಟ್ಟೇರುತ್ತಿದೆ ಅಂದು ಚಿತ್ರಕ್ಕೆ ಮುಹೂರ್ತ ನಡೆಸಿ ಚಿತ್ರೀಕರಣ ಆಗಸ್ಟ್‌ನಲ್ಲಿ ಆರಂಭವಾಗಲಿದೆ. ಚಿತ್ರಕ್ಕೆ ರಾಮಕೃಷ್ಣ ಎಂಬುವವರು ಸಂಗೀತ ಸಂಯೋಜನೆ ಮಾಡುತ್ತಿದ್ದು ಜಗದೀಶ್ ವಾಲಿಯ ಕ್ಯಾಮರಾ ಕೈಚಳಕ ಚಿತ್ರಕ್ಕಿರಲಿದೆ. ಈ ಚಿತ್ರವು ಸರ್ಕಾರೀ ಶಾಲೆ, ಖಾಸಗಿ ಶಾಲೆ ಎಂಬ ಬೇಧಭಾವದ ಬಗ್ಗೆ ಇರುವ ಕಥೆಯನ್ನು ಹೊಂದಿದ್ದು ಕೇವಲ ವಿದ್ಯಾರ್ಥಿಗಳನ್ನಷ್ಟೇ ಅಲ್ಲ, ಇಡೀ ಸಮಾಜವನ್ನು ಬದಲಿಸೋ ಶಕ್ತಿ ಶಿಕ್ಷಕನಿಗೆ ಇರುತ್ತದೆ ಎಂದು ತೋರಿಸುತ್ತದೆಯಂತೆ.

 

 

ಇದೀಗ ಈ ಚಿತ್ರಕ್ಕೆ ನಾಯಕೆಯ ಆಯ್ಕೆ ಮುಕ್ತಾಯವಾಗಿದ್ದು ಮಲೆಯಾಳಂ ನಟಿ ಇನಿಯಾ ಶಿವಣ್ಣನಿಗೆ ಜೋಡಿಯಾಗಲಿದ್ದಾಳೆ. ಭರ್ತಿ ಮೂವತ್ತು ವರ್ಷ ತುಂಬಿರೋ ಈ ಚೆಲುವೆ ಆರಂಭಾದಲ್ಲಿ ಮಲೆಯಾಳಂ ಧಾರಾವಾಹಿಗಳಲ್ಲಿ ನಟಿಸಿ ಆ ನಂತರ 2004ರಲ್ಲಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಳು. ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ನಟಿಸಿರುವ ಇನಿಯಾ ಈ ಮುಂಚೆ 2015ರಲ್ಲಿ ತೆರೆಕಂಡಿದ್ದ ಅಲೋನ್’ ಎಂಬ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಇದೀಗ ದ್ರೋಣ ಚಿತ್ರದ ಮೂಲಕ ಕನ್ನಡ ಚಿತ್ರಜಗತ್ತಿಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅಂದಹಾಗೆ ಈಕೆ ‘ವಾಘೈ ಸೂಡಾ ವಾ’ (Vaagai Sooda Vaa) ಎಂಬ ಚಿತ್ರದ ಅಮೋಘ ನಟನೆಗಾಗಿ ತಮಿಳುನಾಡು ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top