fbpx
ದೇವರು

ಹೆಣ್ಣು ದೇವತೆಗಳಿಗೆ ಕುಂಕುಮಾರ್ಚನೆ ಮಾಡುವುದು ರೂಢಿ,ಕುಂಕುಮಾರ್ಚನೆ ಯಾಕೆ ಮಾಡ್ತಾರೆ ಅದರ ಮಹತ್ವ ಏನು ಹಾಗೂ ವಿಧಿ ವಿಧಾನಗಳ ಬಗ್ಗೆ ತಪ್ಪದೆ ತಿಳ್ಕೊಳ್ಳಿ .

ಕುಂಕುಮಾರ್ಚನೆ ಎಂದರೇನು ? ಕುಂಕುಮಾರ್ಚನೆಯನ್ನು ಮಾಡುವುದರ ಹಿಂದಿನ ಮಹತ್ವ ಏನು ? ಕುಂಕುಮಾರ್ಚನೆಯನ್ನು ಮಾಡುವ ವಿಧಿ ವಿಧಾನಗಳು ಏನೇನು ? ಎಂಬುದುರ ಬಗ್ಗೆ ನಿಮಗೆ ಗೊತ್ತಾ ?

 

 

 

ಸಾಮಾನ್ಯವಾಗಿ ನಾವು ದೇವಿ ಅಥವಾ ದೇವತೆಯರ ದೇವಸ್ಥಾನಗಳಿಗೆ ಮಂಗಳವಾರ ಮತ್ತು ಶುಕ್ರವಾರ ಹಾಗೆ ಅಮಾವಾಸ್ಯೆ ಮತ್ತು ಪೌರ್ಣಮಿಯ ದಿನಗಳಲ್ಲಿ ಹೋಗುತ್ತೇವೆ. ಯಾಕೆಂದರೆ ಅವು ದೇವಿಗೆ ತುಂಬಾ ಶ್ರೇಷ್ಠವಾದ ವಾರಗಳೆಂದು ಮತ್ತು ದಿನಗಳೆಂದು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ.ಆದ್ದರಿಂದ ನಾವು ದೇವಿಯ ದೇವಸ್ಥಾನಕ್ಕೆ ಮಂಗಳವಾರ ಮತ್ತು ಶುಕ್ರವಾರ,ಅಮಾವಾಸ್ಯೆ ಮತ್ತು ಪೌರ್ಣಮಿಯ ದಿನಗಳಲ್ಲಿ ಹೋದಾಗ ಸಾಮಾನ್ಯವಾಗಿ ದೇವಾಲಯಗಳಲ್ಲಿ ವಿಶೇಷವಾಗಿ ಕುಂಕುಮಾರ್ಚನೆಯನ್ನು ಮಾಡುತ್ತಿರುವುದನ್ನು ಅಥವಾ ಮಾಡಿರುವುದನ್ನು ನೋಡಿರುತ್ತೇವೆ .ಈ ಕುಂಕುಮಾರ್ಚನೆ ಎಂದರೇನು ಏಕೆ ಮಾಡಲಾಗುತ್ತದೆ  ಇದರ ಮಹತ್ವವೇನು ವಿಧಿ ವಿಧಾನಗಳೇನು  ಎಂಬುದನ್ನು ತಿಳಿದುಕೊಳ್ಳೋಣ ಬನ್ನಿದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆ ಮಹತ್ವಪೂರ್ಣವಾದ ಸ್ಥಾನವನ್ನು ನೀಡಲಾಗಿದೆ. ಅನೇಕ ಸ್ಥಳಗಳಲ್ಲಿ ನವರಾತ್ರಿಯಲ್ಲಿ ಅದರಲ್ಲೂ ವಿಶೇಷ ರೂಪದಲ್ಲಿ ಈ ಕುಂಕುಮಾರ್ಚನೆಯ ವಿಧಿಯನ್ನು ಮಾಡಲಾಗುತ್ತದೆ.

ಕುಂಕುಮಾರ್ಚನೆ ಎಂದರೇನು ?

ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮ ಜಪವನ್ನು ಮಾಡುತ್ತಾ, ಒಂದು ಚಿಟಕಿ ಕುಂಕುಮವನ್ನು ಅರ್ಪಿಸುವ ಕೃತಿಗೆ ಕುಂಕುಮಾರ್ಚನೆ ಎಂದು ಕರೆಯುತ್ತಾರೆ .ದೇವಿಯ ನಾಮ ಜಪವನ್ನು ಮಾಡುತ್ತಾ ಒಂದೊಂದು ಚಿಟಿಕೆಯಷ್ಟು ಕುಂಕುಮವನ್ನು ದೇವಿಯ ಚರಣಗಳಿಂದ ಹಿಡಿದು ತಲೆಯ ತನಕ ಅರ್ಪಿಸಬೇಕು ಅಥವಾ ಕುಂಕುಮದ ಅಭಿಷೇಕ ಮಾಡಬೇಕು ಕೆಲವೆಡೆಗಳಲ್ಲಿ ಚರಣಗಳಿಗೆ ಮಾತ್ರ ಕುಂಕುಮವನ್ನು ಅರ್ಪಿಸುತ್ತಾರೆ.ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸಬೇಕು. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸಬೇಕು. ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ. ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡಲಾಗುತ್ತದೆ .

ಶಾಸ್ತ್ರ.

 

 

 

ಶಕ್ತಿ ತತ್ವದ ನಿರ್ಮಿತಿಯು ಕೆಂಪು ಪ್ರಕಾಶದಿಂದ ಆಗಿದೆ. ಕುಂಕುಮದಲ್ಲಿ ಶಕ್ತಿ ತತ್ವವನ್ನು ಆಕರ್ಷಿಸುವ ಕ್ಷಮತೆಯೂ ಹೆಚ್ಚಾಗಿ ಬರುತ್ತದೆ. ಆದುದರಿಂದ ದೇವಿಯ ಮೂರ್ತಿ ಕುಂಕುಮಾರ್ಚನೆಯನ್ನು ಮಾಡಿದರೆ ದೇವಿಯು ಜಾಗೃತವಾಗುತ್ತಾಳೆ. ಜಾಗೃತ ಮೂರ್ತಿಯಲ್ಲಿನ ಶಕ್ತಿ ತತ್ವವು ಕುಂಕುಮದಲ್ಲಿ ಬರುತ್ತದೆ. ಆಮೇಲೆ ಆ ಕುಂಕುಮವನ್ನು ನಾವು ಹಚ್ಚಿಕೊಳ್ಳುವುದರಿಂದ ಅದರಲ್ಲಿನ ದೇವಿಯ ಶಕ್ತಿಯೂ ನಮಗೆ ಲಭಿಸುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top