ಭವಿಷ್ಯ

ನಿಮ್ಮ ರಾಶಿಯ ಪ್ರಕಾರ ನೀವು ಯಾವ ಮೊಬೈಲ್ ಫೋನ್ ಬಳಸಿದರೆ ಉತ್ತಮ ಗೊತ್ತಾ.

ಇತ್ತೀಚೆಗೆ, ಆಧ್ಯಾತ್ಮಿಕ ವೃತ್ತಿಪರರು ಎಲ್ಲಾ ವಿಷಯಗಳಲ್ಲಿ ಸಲಹೆಗಳನ್ನು ಮತ್ತು ಸೂಚನೆಗಳನ್ನು ನೀಡುತ್ತಿದ್ದಾರೆ. ಇದು ಮೊಬೈಲ್ಗೆ ಬಂದಾಗ, ಯಾವುದೇ ವ್ಯಕ್ತಿಯು ತನ್ನ  ರಾಶಿಗೆ ಅನುಸಾರ ಸ್ಮಾರ್ಟ್ಫೋನ್ ಹೊಂದಿದ್ದಲ್ಲಿ, ಉತ್ತಮ ಪರಿಣಾಮ ಬೀರುತ್ತದೆ. ಅದೃಷ್ಟ ಒಟ್ಟಾಗಿ ಬರುತ್ತದೆ.

12 ರಾಶಿಗಳವರು ತಮ್ಮ ರಾಶಿಗಳಿಗೆ ಅನುಸಾರ ಯಾವ ಸ್ಮಾರ್ಟ್ಫ್ ಫೋನ್ ಗಳನ್ನು ಬಳಸಬಹುದು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಮೇಷ ರಾಶಿ:ಈ  ರಾಶಿಯವರಿಗೆ ತಾಳ್ಮೆ ಮತ್ತು ಸಹನೆ ಬಹಳ ಕಡಿಮೆ. ಅದಕ್ಕಾಗಿಯೇ ಯಾವುದೇ ಕೆಲಸವು ತುಂಬಾ ವೇಗವಾಗಿ ಆಗಬೇಕೆಂದು ಬಯಸುತ್ತಾರೆ. ಆದ್ದರಿಂದ 6/8 ಜಿಬಿ RAM ಮತ್ತು 64/128 ಜಿಬಿ ಶೇಖರಣಾ ಫೋನ್ಗಳನ್ನು ಬಳಸುವುದು ಉತ್ತಮ. ಹೊಸದಾಗಿ ಬಿಡುಗಡೆಯಾದ ಒಂದು ಪ್ಲಸ್ 5 ಸ್ಮಾರ್ಟ್ಫೋನ್ ಅವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ವೃಷಭ:ಈ  ರಾಶಿಯವರು ಪ್ರಕೃತಿ ಮತ್ತು ಸೌಂದರ್ಯವನ್ನು ಪ್ರೀತಿಸುತ್ತಾರೆ. ಅವರು ಯಾವುದೇ ಕೆಲಸಕ್ಕೆ ಚೆನ್ನಾಗಿ ಯೋಚಿಸಿ ಮುಂದುವರಿಯುತ್ತಾರೆ. ಹೆಚ್ಚಿನ ಗುರಿಗಳನ್ನು ಸಾಧಿಸುವ ಬಯಕೆಯು ಪ್ರಬಲವಾಗಿರುತ್ತದೆ. ಆದ್ದರಿಂದ ಅವರು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ನಂತಹ (ಮತ್ತೂ ಹೆಚ್ಚಿನ) ಫೋನ್ಗಳನ್ನು ಖರೀದಿಸಲು ಬಯಸುತ್ತಾರೆ.

 ಮಿಥುನ:ಇವರು ತಮ್ಮ ಭಾವನೆಗಳನ್ನು ಇತರರೊಂದಿಗೆ ಬಹಳ ಸೃಜನಶೀಲರಾಗಿ ಹಂಚಿಕೊಳ್ಳುವರು.ಗುಂಪಿನಲ್ಲಿರುವುದಕ್ಕಿಂತ ಹೆಚ್ಚಾಗಿ ಏಕಾಂಗಿತನವನ್ನು ಅವರು ಬಯಸುತ್ತಾರೆ. ಹಾಗಾಗಿ ಅವರು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್ ಫೋನ್ ಕೊಂಡರೆ ಉತ್ತಮವಾಗಿರುತ್ತಾರೆ.

ಕರ್ಕಾಟಕ:ಅವರು ಎಲ್ಲಿಗೆ ಹೋದರೂ, ಯಾವ ವಿಧದ ಕೆಲಸವನ್ನು ಮಾಡಿದರೂ, ಸಾಂತ್ವನ ಹೊಂದಲು ಬಯಸುತ್ತಾರೆ. ಇಲ್ಲದ ಚಿಂತೆ ಮತ್ತು ಗೊಂದಲಕ್ಕೆ ಅನಗತ್ಯವಾಗಿ ಸಿಲುಕುವುದಿಲ್ಲ. ನಿರ್ದಿಷ್ಟ ಯೋಜನೆಯೊಂದಿಗೆ  ಇರುತ್ತಾರೆ. ಆದ್ದರಿಂದ ಅವರು ಗೂಗಲ್ ಪಿಕ್ಸೆಲ್ ಫೋನ್ ಖರೀದಿಸಿದರೆ ಒಳಿತು.

ಸಿಂಹ:ಅವರು ಹೊಸ ವಿಷಯಗಳನ್ನು ಕಲಿಯಲು ಉತ್ಸುಕರಾಗಿರುತ್ತಾರೆ. ಅವರು ಎಲ್ಲರಿಗಿಂತ ನವೀನವಾದ ಮತ್ತು ಮುಂದುವರಿದ ಫೋನ್ ಖರೀದಿಸಬೇಕೆಂದು ಭಾವಿಸುತ್ತಾರೆ.ಐಷಾರಾಮಿತನವನ್ನು ಬಯಸುವ ಮಂದಿ. ಆದ್ದರಿಂದHTC U11 ಫೋನ್ ಖರೀದಿಸಿದರೆ ಸೂಕ್ತ.

ಕನ್ಯಾ:ಎಲ್ಲಿಗೆ ಹೋದರೂ, ಯಾರೊಂದಿಗಿದ್ದರೂಸರಳವಾಗಿರಲು ಬಯಸುವವರು. ಅನಗತ್ಯ ವೆಚ್ಚಗಳನ್ನು ಮಾಡುವುದು ಇವರ ಜಾಯಮಾನವಲ್ಲ.ಸಾಮಾನ್ಯ ವ್ಯಕ್ತಿಯಾಗಿ ಬದುಕಲು ಬಯಸುವವರು.ಆದ್ದರಿಂದ ಒಂದು ಸರಾಸರಿ ಮಾದರಿಯಾದಮೋಟೋ ಝಡ್ ಪ್ಲೇ ಫೋನ್ ಖರೀದಿಸಿದರೆ ಉತ್ತಮ.

 

 

 

ತುಲಾ:ಸಂಗೀತ ಕೇಳುವುದು ಮತ್ತು ಪುಸ್ತಕಗಳನ್ನು ಓದುವುದು ಇವರಿಗೆ ಬಲು ಆಸಕ್ತಿಕರ. ಆದ್ದರಿಂದHTC 10 ಸ್ಮಾರ್ಟ್ಫೋನ್ ಅನ್ನು ಖರೀದಿಸುವುದು ಇವರ ನಿರೀಕ್ಷಣಾ ಮಟ್ಟಕ್ಕೆ ಸರಿ ಹೊಂದುತ್ತದೆ.

ವೃಶ್ಚಿಕ:ಅವರು ನಾಲ್ಕು ಜನರ ಮಧ್ಯೆ ಪ್ರತ್ಯೇಕವಾಗಿರಲು ಬಯಸುತ್ತಾರೆ. ಅವರು ಯಾವಾಗಲೂ ಈ ಪ್ರಯತ್ನದಲ್ಲಿರುತ್ತಾರೆ. ಎಲ್ಲರಂತೆ ನಾನಿರಬಾರದೆಂದು ಬಯಸುತ್ತಾರೆ. ಹಾಗಾಗಿ ಬ್ಲ್ಯಾಕ್ಬೆರಿ ಪಾಸ್ಪೋರ್ಟ್ ಫೋನ್ ಸರಿಯಾಗಿ ಹೊಂದುತ್ತದೆ.

ಧನುಸ್ಸು:ಅವರು ಯಾವಾಗಲೂ ಸೃಜನಶೀಲರಾಗಿರಲು ಬಯಸುತ್ತಾರೆ.  ನಾಲ್ಕು ಜನರ ಮಧ್ಯೆವಿಶೇಷವಾಗಿರಬೇಕೆಂಬುದು ಇವರ ಬಯಕೆ . ಇವರು ಐಫೋನ್ ಬಳಸಿದರೆ ಉತ್ತಮ. ಐಫೋನ್ 7 ಅಥವಾ7 ಪ್ಲಸ್ ಫೋನ್ ಇವರಿಗೆ ಹೊಂದಿಕೆಯಾಗುತ್ತದೆ.

ಮಕರ:ಇವರು ಯಾವುದೇ ಸಂದರ್ಭದಲ್ಲಿ ನಿಖರತೆಯನ್ನುಇಚ್ಛಿಸುತ್ತಾರೆ. 100 ಪ್ರತಿಶತದಷ್ಟು ಕೆಲಸವನ್ನು ಮಾಡಲು ಹಂಬಲಿಸುತ್ತಾರೆ. ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವವರು. ಆದ್ದರಿಂದ ಇವರು ಸೋನಿ ಕಂಪನಿಯ ಎಕ್ಸ್ಪೀರಿಯಾ ಎಕ್ಸ್ಪ್ರೆಸ್ ಪ್ರೀಮಿಯಂ ಫೋನ್ ಅನ್ನು ಖರೀದಿಸಿದರೆ ಉತ್ತಮ.

ಕುಂಭ:ಇವರಿಗೆ ಯಾವಾಗಲೂ ಮನರಂಜನೆ ಬೇಕು. ಇವರಿಗೆ ಹೆಚ್ಚು ಮೋಜು ಮತ್ತು ವಿನೋದ ಬೇಕು. ಇವರ ಊಹಾ ಶಕ್ತಿ ಮತ್ತು ಕಲ್ಪನಾ ಶಕ್ತಿಯು ಅದ್ಭುತವಾಗಿದೆ.ಹಾಗಾಗಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್ ಅನ್ನುಖರೀದಿಸುವುದು ಉತ್ತಮ.

ಮೀನ:ಹೊಸ ವಿಷಯಗಳಲ್ಲಿ ಅವರು ಹೆಚ್ಚು ಆಸಕ್ತರಾಗಿರುತ್ತಾರೆ. ಎಲ್ಲರಿಗಿಂತ ಮುಂದಿರಲು ಯೋಚಿಸುತ್ತಾರೆ. ಅವರು ಅಗ್ರ ಸ್ಥಾನದಲ್ಲಿರಲು ಬಯಸುತ್ತಾರೆ. ಆದ್ದರಿಂದ ಅವರು ಆಪಲ್ ಐಫೋನ್7 ಪ್ಲಸ್ ಅನ್ನು ತೆಗೆದುಕೊಂಡಿದ್ದಾದರೆ ಉತ್ತಮ.ಈ ಎಲ್ಲಾ ವಿಷಯಗಳು ಕೇವಲ ಕಾಲ್ಪನಿಕವಾಗಿದ್ದ್ದು ತಮಾಷೆ ಮತ್ತು ಮನೋರಂಜನೆಗಾಗಿ ಮಾಡಲಾಗಿರುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top