ಹೆಚ್ಚಿನ

ಒಂದು ಫೋಟೋ ಬದಲಿಸುತ್ತದೆ ನಿಮ್ಮ ಅದೃಷ್ಟ.ಗೋಡೆಗೆ ತಗಲಾಕುವ ಫೋಟೋ ಯಾವ ರೀತಿಯದ್ದಾಗಿದ್ದರೆ ಒಳ್ಳೆಯದು.

 

 

 

ಮನೆಯಲ್ಲಿ ಸಿಕ್ಕ ಸಿಕ್ಕ ಫೋಟೋಗಳನ್ನು ಗೋಡೆಗೆ ನೇತುಹಾಕಿರುತ್ತೇವೆ. ಈ ಫೋಟೋಗಳಲ್ಲೇ ಮನೆಯವರ ಅದೃಷ್ಟ, ದುರಾದೃಷ್ಟ ನಿರ್ಧಾರವಾಗುತ್ತಂತೆ.ಫೋಟೋಕ್ಕೂ ನಿಮ್ಮ ಅದೃಷ್ಟ-ದುರಾದೃಷ್ಟಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಮನೆ,ಕಚೇರಿಯ ಗೋಡೆಗಳಿಗೆ ಹಾಕುವ ಫೋಟೋಗಳು ನಿಮ್ಮ ಮನಸ್ಸಿಗೆ,ಶಾಂತಿ ನೀಡುವ  ಹಾಗೆ, ನೆಮ್ಮದಿ ಮತ್ತು  ಶಾಂತಿಯನ್ನು ಕೆಡಿಸುವ ಶಕ್ತಿಯನ್ನು ಹೊಂದಿದೆ.ಗೋಡೆ ಮೇಲೆ ಹಾಕುವ ಫೋಟೋಗಳು ನಿಮ್ಮ ಜೀವನದಲ್ಲಿ ಸುಖ,ಸಮೃದ್ಧಿಗೆ ಕಾರಣವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಗೋಡೆ ಮೇಲಿರುವ ಫೋಟೋಗಳು ನಿಮ್ಮ ಅದೃಷ್ಟದ ಬಾಗಿಲನ್ನು ತೆರೆಸಲಿವೆ.ಸಕಾರಾತ್ಮಕ ಶಕ್ತಿಯ ವೃದ್ಧಿಗಾಗಿ ಮನೆಯ ಗೋಡೆ ಮೇಲೆ ನಗುತ್ತಾ ಇರುವ ಮಕ್ಕಳ ಫೋಟೋಗಳನ್ನು ಹಾಕಬೇಕು.

ಯಾವುದೇ ಕಾರಣಕ್ಕೂ ಗೋಡೆಗಳ ಮೇಲೆ ಕಾಡು ಮೃಗಗಳ ಫೋಟೋಗಳನ್ನು ಹಾಕಬೇಡಿ. ಇದು ಮನುಷ್ಯನ ಕ್ರೋಧವನ್ನು ಹೆಚ್ಚು ಮಾಡುತ್ತದೆ.ಮನೆಯಲ್ಲಿ ನಾಯಿ ಮತ್ತು ಕುದುರೆಯ ಫೋಟೋಗಳನ್ನು ಹಾಕಬಹುದು.ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ.ಮನೆಯ ಗೋಡೆ ಮೇಲಿರುವ ಫೋಟೋಗಳು ಮನುಷ್ಯನ ಗ್ರಹ ಮತ್ತು ನಕ್ಷತ್ರದ ಮೇಲೆ ಪರಿಣಾಮ ಬೀರುತ್ತವೆ.ಉಕ್ಕಿ ಹರಿಯುತ್ತಿರುವ ಸಮುದ್ರದ ಫೋಟೋ ಅಥವಾ ಹೆದರಿಕೆ ಹುಟ್ಟಿಸುವ ಫೋಟೋಗಳನ್ನು ಹಾಕಬೇಡಿ.ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ.

 

 

 

ಮನೆಯ ಯಾವುದೇ ಕೋಣೆಯಲ್ಲಿ ಮಹಾಭಾರತ ಯುದ್ಧದ ಫೋಟೋಗಳನ್ನು ಹಾಕಬೇಡಿ. ಇದರಿಂದ ಮನೆಯಲ್ಲಿ ಜಗಳಗಳು ಆಗುತ್ತವೆ.ಖಾಲಿ ಫೋಟೋ ಫ್ರೇಮ್ ಗಳನ್ನು ಇಡಬೇಡಿ.ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.ಮನೆಯಲ್ಲಿ ಹಾಕುವ ಫೋಟೋ ನಮ್ಮ ವ್ಯವಹಾರ ಹಾಗೂ ಕೆಲಸದ ಮೇಲೆ ಪ್ರಭಾವ ಬೀರುತ್ತದೆ.ದೇವರ ಕೋಣೆಯಲ್ಲಿ ಬೇರೆ ಬೇರೆ ಫೋಟೋಗಳನ್ನು  ಹಾಕಲಾಗುತ್ತದೆ. ಕೆಲವೊಂದು ದೊಡ್ಡದಿದ್ದರೆ ಮತ್ತು ಕೆಲವು ಫೋಟೋಗಳು ಚಿಕ್ಕದಾಗಿರುತ್ತವೆ. ಅವು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವರ ಮನೆಯಲ್ಲಿ ಫೋಟೋ ಇಡುವಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.

ದೇವಾನುದೇವತೆಗಳು ಹಾಗೂ ಗುರುವಿನ ಫೋಟೋಗಳನ್ನು ದೇವರ ಮನೆಯಲ್ಲಿ ಹಾಕಬೇಕು. ಇದು ಸ್ಪಷ್ಟ ಹಾಗೂ ಸುಂದರವಾಗಿದ್ದರೆ ಒಳ್ಳೆಯದು.ತುಂಬಾ ಫೋಟೋಗಳನ್ನು ದೇವರ ಮನೆಯಲ್ಲಿ ಹಾಕಬಾರದು.ಹಾಗೆ ಫೋಟೋಗಳು ನಮ್ಮ ಕಣ್ಣಿನ ಅಂತರಕ್ಕಿಂತ ಮೇಲೆ ಅಥವಾ ತುಂಬಾ ಕೆಳಗೆ ಕೂಡ ಇರಬಾರದು.ಮಲಗುವ ಕೋಣೆಯಲ್ಲಿ ಮದುವೆಯಾದ ಸಂದರ್ಭದಲ್ಲಿ ಫೋಟೋ ಅಥವಾ ದಂಪತಿ ಒಟ್ಟಿಗಿರುವ ಫೋಟೋವನ್ನು ಹಾಕಬೇಕು.ತಂದೆ- ತಾಯಿ ಹಾಗೂ ಸಹೋದರರ ಫೋಟೋವನ್ನು ಮನೆಯ  ಉತ್ತರ ದಿಕ್ಕಿನ ಗೋಡೆಗೆ ಹಾಕಿ.ಮೃತ ವ್ಯಕ್ತಿಯ ಫೋಟೋಗಳನ್ನು ದಕ್ಷಿಣದ ಗೋಡೆಗೆ ಹಾಕಿ.ಮನೆಯಲ್ಲಿ ಪ್ರೀತಿ ಹೆಚ್ಚಿಸಲು ಊಟದ ಹಾಲ್  ಬಳಿ ಹೂವಿನ ಫೋಟೋ ಹಾಕಿ.ಆರ್ಥಿಕ  ಅಭಿವೃದ್ಧಿಗಾಗಿ ದೇವರ ಮನೆಯಲ್ಲಿ ಕುಳಿತಿರುವ ಲಕ್ಷ್ಮೀ ಫೋಟೋ ಹಾಕಿ.ಸಂತಾನಕ್ಕಾಗಿ ಮಲಗುವ ಕೋಣೆಯಲ್ಲಿ ಕಮಲದ ಹೂ ಅಥವಾ ಹಸುವಿನ ಫೋಟೋ ಹಾಕಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top