ದೇವರು

ರಾಹು ನೆಲೆಸಿರುವ ಪರಮಪವಿತ್ರ ಕ್ಷೇತ್ರವಿದು.ಇಲ್ಲಿ ರಾಹುವಿಗೆ ಮಾಡುವ ಅಭಿಷೇಕದ ಹಾಲು ನೀಲಿ ಬಣ್ಣಕ್ಕೆ ಬದಲಾಗುತ್ತದೆ. ವಿಜ್ಞಾನ ಲೋಕಕ್ಕೆ ಸವಾಲೆಸದ ಕ್ಷೇತ್ರವಿದು .

ನಮ್ಮ ಜಾತಕದಲ್ಲಿ ಹಲವಾರು ದೋಷಗಳು ಇರುತ್ತವೆ. ಅದು ರಾಹು ದೋಷ ಆಗಿರಬಹುದು, ಕೇತು ದೋಷ ಆಗಿರಬಹುದು, ಅಥವಾ ಸರ್ಪ ದೋಷವೇ ಆಗಿರಬಹುದು. ಜಾತಕದಲ್ಲಿ ಈ ದೋಷಗಳು ಇದ್ದರೆ ಜೀವನವೇ ಸಾಕಾಗಿ ಹೋಗುತ್ತದೆ. ಸರ್ಪದೋಷ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸರ್ಪ ದೋಷವಿದ್ದರೆ ಮದುವೆಯಾಗುವುದು ತಡವಾಗುತ್ತದೆ. ಮದುವೆ ಕಾರ್ಯಕ್ಕೆ ಹಲವು ಅಡೆತಡೆಗಳು ಎದುರಾಗುತ್ತವೆ. ಅನೇಕ ದಂಪತಿಯರಿಗೆ ಸರ್ಪದೋಷದಿಂದ ಸಂತಾನದ ಭಾಗ್ಯ ಇರುವುದಿಲ್ಲ, ಉದ್ಯೋಗದಲ್ಲಿ ತೊಂದರೆಗಳಾಗುತ್ತವೆ ಮತ್ತು ಜೀವನದಲ್ಲಿ ಶಾಂತಿ ನೆಲೆಸುತ್ತದೆ.

ಸರ್ಪ ದೋಷದ ಸಮಸ್ಯೆಗಳಿಗೆ ನಮ್ಮ ಪೂರ್ವಿಕರು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವಾರು ಪರಿಹಾರಗಳನ್ನು ಹೇಳಿದ್ದಾರೆ. ನಮ್ಮ ದಕ್ಷಿಣ ಭಾರತದಲ್ಲಿ ಸರ್ಪ ದೋಷಗಳನ್ನು ನಿವಾರಿಸುವ ಹಲವಾರು ದೇವಸ್ಥಾನಗಳು ಮತ್ತು ಪವಿತ್ರ ಪುಣ್ಯ ಕ್ಷೇತ್ರಗಳಿವೆ. ಅದರಲ್ಲಿ ಅತ್ಯಂತ ವಿಶೇಷ ಈ ರಾಹು ದೇಗುಲ. ಮಾನವ ರೂಪದಲ್ಲಿ ದರ್ಶನ ನೀಡುವ ಏಕೈಕ ದೇವಸ್ಥಾನ ರಾಹುವಿನ ದರ್ಶನದಿಂದ ಜಾತಕದಲ್ಲಿರುವ ಅನೇಕ ದೋಷಗಳು ಪರಿಹಾರವಾಗುತ್ತದೆ.ರಾಹುವಿನ ವಿಶಿಷ್ಟ ದೇಗುಲ ಇರುವುದು ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿ, ಇಲ್ಲಿರುವ 9 ನವಗ್ರಹಗಳ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ರಾಹು ದೇಗುಲ ತಿರುನಾಗೇಶ್ವರ ದೇವಾಲಯ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿನ ಪ್ರಧಾನ ದೇವರು ಶಿವ. ರಾಹು ತನಗೆ ಉಂಟಾದ ಶಾಪದಿಂದಾಗಿ ಮುಕ್ತಿಯನ್ನು ಹೊಂದಲು ಇದೇ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸಿದ್ದನಂತೆ. ಶಾಪದಿಂದ ಮುಕ್ತಿಯಾದ ನಂತರ ಇದೇ ದೇವಾಲಯದಲ್ಲಿ ಮಾನವ ರೂಪದಲ್ಲಿ ನೆಲೆಸಿ ತನ್ನಲ್ಲಿಗೆ ಬರುವ ಭಕ್ತರನ್ನು ಎಲ್ಲಾ ದೋಷಗಳಿಂದ ಮುಕ್ತಿ ಗೊಳಿಸುತ್ತಾನೆ.

 

 

 

ಇತರೆ ದೇವಾಲಯಗಳಲ್ಲಿ ರಾಹುವಿಗೆ ಸರ್ಪಾಕಾರದ ಮುಖ ವಿರುತ್ತದೆ, ಆದರೆ ಇಲ್ಲಿ ಮಾತ್ರ ರಾಹು ಮಾನವ ರೂಪದ ಮುಖವನ್ನು ಹೊಂದಿರುವುದು ವಿಶೇಷ ಎನಿಸುತ್ತದೆ. ಅಷ್ಟೇ ಅಲ್ಲ ಈ ದೇವಾಲಯದಲ್ಲಿ ರಾಹು ತನ್ನ ಇಬ್ಬರು ಪತ್ನಿಯರು ಮತ್ತು ನಾಗವಲ್ಲಿಯ ಜೊತೆ ನೆಲೆಸಿದ್ದಾನೆ. ರಾಹು-ಕೇತು ಸರ್ಪ ದೋಷಗಳಿಂದ ನೊಂದವರು ಮೂರ್ಛೆ ಬರುವ ತೊಂದರೆ ಇರುವವರು ಈ ದೇವಾಲಯಕ್ಕೆ ಭೇಟಿ ನೀಡಿ ಒಂದು ದಿನ ರಾತ್ರಿ ನಿದ್ರೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಸ್ವಾಮಿಯ ಅಭಿಷೇಕವನ್ನು ಕಾಣುತ್ತಾರೆ. ಹೀಗೆ ಮಾಡುವುದರಿಂದ ಸರ್ಪದೋಷದಿಂದ ಮತ್ತು ರಾಹು ಕೇತುವಿನ ದೋಷದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ .
ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ರಾಹುವಿಗೆ ಮಾಡುವ ಕ್ಷೀರಾಭಿಷೇಕ, ರಾಹುವಿಗೆ ಕ್ಷೀರಾಭಿಷೇಕ ಮಾಡುವ ಸಮಯದಲ್ಲಿ ಹಾಲು ನೀಲಿ ಬಣ್ಣಕ್ಕೆ ತಿರುಗುತ್ತದೆ, ನೆಲದ ಮೇಲೆ ಬಿದ್ದ ತಕ್ಷಣ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಪ್ರತಿನಿತ್ಯ ರಾಹು ಕಾಲದಲ್ಲಿ ಈ ರಾಹು ದೇವನಿಗೆ ಕ್ಷೀರಾಭಿಷೇಕ ಮಾಡುವ ಸಮಯದಲ್ಲಿ, ಈ ದೃಶ್ಯ ನೋಡಲು ಕಾಣ ಸಿಗುತ್ತದೆ. ಈ ಚಮತ್ಕಾರ ಪ್ರತಿಯೊಬ್ಬ ಭಕ್ತರು ಆಶ್ಚರ್ಯ ಗೊಳ್ಳುವಂತೆ ಮಾಡುತ್ತದೆ. ವಿಜ್ಞಾನ ಲೋಕ ಕೂಡ ಈ ಅಚ್ಚರಿಗೆ ಬೆರಗಾಗಿದೆ. ತಿರು ನಾಗೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ರಾಹು ದೋಷ, ಕೇತು ದೋಷ ಮತ್ತು ಸರ್ಪ ದೋಷಗಳಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಬಹುದಂತೆ. ನಾವೆಲ್ಲ ಅಂದುಕೊಂಡಂತೆ ರಾಹು ಕೆಟ್ಟವನಲ್ಲ. ಆತ ಸಂದರ್ಭಕ್ಕೆ ಅನುಗುಣವಾಗಿ ನಮ್ಮ ಗ್ರಹಗತಿಗಳಿಗೆ ಅನುಸಾರವಾಗಿ ಒಳ್ಳೆಯದನ್ನು ಸಹ ಮಾಡುತ್ತಾನೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top