ಮನೋರಂಜನೆ

ಕವಚ ನಂತರ ಮತ್ತೊಂದು ರಿಮೇಕ್ ಚಿತ್ರಕ್ಕೆ ಶಿವರಾಜಕುಮಾರ್ ನಾಯಕ?

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನದಾಚೆಗೂ ಆದರಕ್ಕೆ ಪಾತ್ರರಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್. ಹೆಚ್ಚು ಸ್ವಮೇಕ್ ಚಿತ್ರಗಳನ್ನೇ ಮಾಡುತ್ತಿದ್ದ ಶಿವಣ್ಣ ಈಗ ಮಲೆಯಾಳಂನ ಸೂಪರ್ ಹಿಟ್ ‘ಒಪ್ಪಮ್’ ಚಿತ್ರದ ರಿಮೇಕ್ ಆದ ‘ಕವಚ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಮುಂದಿನ ತಿಂಗಳು ತೆರೆ ಕಾಣುವ ನಿರೀಕ್ಷೆಯಿದೆ. ಕವಚ ಸಿನಿಮಾ ನಂತರ ಶಿವಣ್ಣ ಮತ್ತೊಂದು ರೀಮೇಕ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

 

 

ತಮಿಳು ನಿರ್ದೇಶಕ ಎಂ ಮುತ್ತಯ್ಯ ಅವರ ಚಿತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ ಎನ್ನುವ ಸುದ್ದಿ ತಿಂಗಳ ಹಿಂದೆಯಷ್ಟೇ ಹೊರಬಿದ್ದಿತ್ತಲ್ಲಾ, ಅದು ರಿಮೇಕ್ ಸಿನಿಮಾ ಎಂಬ ಮಾತು ಕೇಳಿಬರುತ್ತಿದೆ.. ಮೂಲಗಳ ಪ್ರಕಾರ ಇದು ತಮಿಳಿನ ಕಾರ್ತಿ ಅಭಿನಯ ಮಾಡಿದ್ದ ‘ಕೊಂಬನ್’ ಚಿತ್ರದ ಕನ್ನಡದ ಅವತರಣಿಕೆಯಾಗಲಿದೆಯಂತೆ..ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಅಂದಹಾಗೆ ತಮಿಳಿನ ಖ್ಯಾತ ನಿರ್ಮಾಪಕ ಕೆ.ಇ. ಜ್ಞಾನವೇಲ್ ರಾಜಾ ಈ ಚಿತ್ರಕ್ಕೆ ಬಂಡವಾಳ ತೊಡಗಿಸಲಿದ್ದಾರೆ. ನಿರ್ಮಾಪಕರು ಮತ್ತು ನಿರ್ದೇಶಕ ಕನ್ನಡದ ಸೆಂಚುರಿ ಸ್ಟಾರ್ ಶಿವಣ್ಣನನ್ನು ಭೇಟಿಯಾಗಿ ಈ ಕುರಿತ ಮಾತುಕತೆ ಅಂತಿಮಗೊಳಿಸಿದ್ದಾರೆ. ‘ರುಸ್ತುಂ’ ಹಾಗೂ ‘ದ್ರೋಣ’ ಚಿತ್ರಗಳು ಮುಗಿದ ಮೇಲೆ ಮುತ್ತಯ್ಯ ಅವರ ಸಿನಿಮಾ ಸೆಟ್ಟೇರಲಿದೆಯಂತೆ. ತಮಿಳಿನಲ್ಲಿ ‘ಕುಟ್ಟಿ ಪುಲಿ’, ‘ಕೊಂಬನ್’, ‘ಮರುಧು’, ‘ಕೋಡಿವೀರನ್’ ಅಂಥಾ ಸಿನಿಮಾಗಳನ್ನ ನಿರ್ದೇಶನ ಮಾಡಿ ಖ್ಯಾತಿಗಳಿಸಿರುವ ಮುತ್ತಯ್ಯ ಶಿವಣ್ಣನ ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top