fbpx
ಮನೋರಂಜನೆ

ಕೊನೆಗೂ ತನ್ನ ಮದ್ವೆ ಗುಟ್ಟು ರಟ್ಟು ಮಾಡಿದ ಅರ್ಜುನ್ ಸರ್ಜಾ ವಿರುದ್ಧದ ಶೃತಿ ಹರಿಹರನ್ ದೂರು

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ.. ಅರ್ಜುನ್ ಸರ್ಜಾ ಅವರನ್ನು ಸಮರ್ಥಿಸುವ ಭರದಲ್ಲಿ ಶೃತಿ ಹರಿಹರನ್ ನಡತೆ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವು ನಿರ್ಮಾಪಕರು, ನಟರು, ಜನಸಾಮಾನ್ಯರು ಮಿತಿಮೀರಿ ವರ್ತಿಸುತ್ತಿದ್ದಾರೆ. ಅಂತೆಯೇ ಶೃತಿಯನ್ನು ಸಮರ್ಥಿಸುವ ಭರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಸ್ರೀಪೀಡಕನ ಪಟ್ಟ ಕಟ್ಟುವ ಕೆಲಸವೂ ಚಾಲ್ತಿಯಲ್ಲಿದೆ.

 

 

 

ಈ ಎಲ್ಲಾ ವಿಚಾರಗಳು ಚಾಲ್ತಿಯಲ್ಲಿರುವಾಗಲೇ ಮೀಟೂ ಅಭಿಯಾನದಲ್ಲಿ ನಟ ಅರ್ಜುನ್​ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ಕುರಿತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಇಬ್ಬರೂ ಕಾನೂನಿನ ಮೊರೆ ಹೋಗಿದ್ದಾರೆ. ನಿನ್ನೆಯಷ್ಟೇ ಶ್ರುತಿ ಹರಿಹರನ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದರ ಬೆನ್ನಲ್ಲೇ ಶ್ರುತಿ ಹರಿಹರನ್​ ಕೂಡ ಅರ್ಜುನ್ ಸರ್ಜಾ ಮತ್ತು ಅವರ ಆಪ್ತರ ವಿರುದ್ಧ ದೂರು ನೀಡಿದ್ದಾರೆ.ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ,ಶೃತಿ ಹರಿಹರನ್ ಸುಮಾರು 5 ಪುಟಗಳಲ್ಲಿ ದೂರನ್ನು ನೀಡಿದ್ದಾರೆ. ಶೃತಿ ಹರಿಹರನ್ ದೂರು ನೀಡಿದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು) 354(ಅತ್ಯಾಚಾರ ಉದ್ದೇಶದಿಂದ ಹಲ್ಲೆ), 354ಎ(ಲೈಂಗಿಕವಾಗಿ ಸಹಕರಿಸಲು ಒತ್ತಾಯ) ಅಡಿ ಎಫ್‍ಐಆರ್ ದಾಖಲಾಗಿದೆ.

ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ನೀಡಿರುವ ದೂರಿನಲ್ಲಿ ಏನಿದೆ?

ಶ್ರುತಿ ಹರಿಹರನ್ ನವೆಂಬರ್ 2015 ವಿಸ್ಮಯ ಚಿತ್ರೀಕರಣದ ವೇಳೆ ನಡೆದಿದ್ದ ಘಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬೆಳಗ್ಗೆ 7.30- ಸಂಜೆ 6.30ರವರೆಗೆ ಶೂಟಿಂಗ್ ಇತ್ತು. ಸ್ಕ್ರಿಪ್ಟ್ ನಲ್ಲಿ ರೋಮ್ಯಾಂಟಿಕ್ ಸೀನ್ ಇತ್ತು. ಒಂದು ದೃಶ್ಯದಲ್ಲಿ ಇಬ್ಬರು ತಬ್ಬಿಕೊಳ್ಳಬೇಕಾಗಿತ್ತು. ಸೀನ್ ಆದ ಮೇಲೆ ನಿರ್ದೇಶಕರು ರಿಹರ್ಸಲ್ ಮಾಡಿದ್ದರು. ಈ ವೇಳೆ ಅರ್ಜುನ್ ಸರ್ಜಾ ಅಸಹ್ಯವಾಗಿ ನನ್ನನ್ನು ನೋಡಿದ್ದರು. ಆಗ ಅರ್ಜುನ್ ಸರ್ಜಾ ಹಿಂಭಾಗದಿಂದ ನನ್ನನ್ನು ಅಪ್ಪಿಕೊಂಡರು. ಇದಕ್ಕೆ ನಾನು ವಿರೋಧಿಸಿದೆ. ಆಗ ನನ್ನ ತೊಡೆ ಹಾಗೂ ಎದೆ ಭಾಗವನ್ನು ಸ್ಪರ್ಶಿಸಿ ತೀವ್ರ ಮುಜುಗರವನ್ನು ಉಂಟು ಮಾಡಿದ್ದರು. ಶೂಟಿಂಗ್ ಆದಾ ಕಾರಣ ನಾನು ಇದನ್ನೆಲ್ಲ ತಡೆದುಕೊಂಡೆ. ನಾನು ಇದಕ್ಕೆ ಪ್ರತಿಕ್ರಿಯಿಸುವ ಮೊದಲೇ ಅವರು ನನನ್ನು ಗಟ್ಟಿಯಾಗಿ ಅಪ್ಪಿಕೊಂಡರು. ನನ್ನನ್ನು ತಬ್ಬಿಕೊಂಡು ನನ್ನ ಬೆನ್ನ ಮೇಲೆ ಸವರುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಷ್ಟೆ ಅಲ್ಲದೇ ಅರ್ಜುನ್ ಸರ್ಜಾ ನಿರ್ದೇಶಕರಿಗೆ ಈ ದೃಶ್ಯವನ್ನು ಇನ್ನು ಚೆನ್ನಾಗಿ ಮಾಡಬಹುದೇ ಎಂದು ಕೇಳಿದರು. ಬಳಿಕ ನಾನು ನಿರ್ದೇಶಕರ ಬಳಿ ಹೋಗಿ ಹೀಗೆಲ್ಲಾ ಆದರೆ ನನಗೆ ಕೆಲಸ ಮಾಡಲು ಆಗುವುದಿಲ್ಲ ಎಂದಿದ್ದೆ. ಅರ್ಜುನ್ ಸರ್ಜಾರ ಈ ವರ್ತನೆಯಿಂದ ನನಗೆ ಮುಜುಗರ ಉಂಟಾಗಿ ಕಾರವಾನ್(ಸಿನಿಮಾ ಸೆಟ್ ನಲ್ಲಿ ಮೇಕಪ್ ಮಾಡುವ ವಾಹನ) ನಲ್ಲಿ ಅಳುತ್ತ ಕುಳಿತುಕೊಂಡೆ. ಸಿನಿಮಾದ ರೋಮ್ಯಾಂಟಿಕ್ ದೃಶ್ಯವನ್ನು ಬಳಸಿಕೊಂಡು ನನ್ನ ಕೈ ಹಿಡಿದುಕೊಂಡು ಎಳೆದಾಡಿದ್ದರು.

 

ಇನ್ನೊಂದು ದೃಶ್ಯದಲ್ಲಿ ನಾನು ಹಾಸಿಗೆ ಮೇಲೆ ಮಲಗಿರಬೇಕಿತ್ತು. ಈ ದೃಶ್ಯವನ್ನು ದುರುಪಯೋಗಪಡಿಸಿಕೊಂಡು ಕೈ ಎಳೆದು ತಬ್ಬಿಕೊಂಡರು. ಅತ್ಯಂತ ಹತ್ತಿರವಾಗಿ ಬರಲು ನನ್ನನ್ನು ಎಳೆದುಕೊಂಡರು. ಅವರನ್ನು ತಳ್ಳಿ ನಾನು ಹೊರಗೆ ಬಂದೆ. ಹೆಣ್ಣಿನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡಿದ್ದರು. ಈ ವೇಳೆ ನಾನು ಕಿರುಚಿದೆ. ತುಂಬಾ ಅಳುತ್ತಾ ಕುಳಿತುಕೊಡಿದ್ದೆ. ಇದರಿಂದ ನನಗೆ ಬೇಸರ ಉಂಟಾಗಿ ಸಹ ನಿರ್ದೇಶಕ ಭರತ್ ನೀಲಕಂಠರ ಗಮನಕ್ಕೆ ತಂದಿದ್ದೆ. ಆಗ ಅವರು ರಿಹರ್ಸಲ್ ಬೇಡ ನೇರವಾಗಿ ಶೂಟಿಂಗ್ ಮಾಡುತ್ತೇನೆ ಎಂದು ಅವರು ತಿಳಿಸಿದ್ದರು.ದೇವನಹಳ್ಳಿ ಆಸ್ಪತ್ರೆಯಲ್ಲಿ ಚಿತ್ರೀಕರಣ ಇತ್ತು. ನನ್ನ ಜೊತೆ ಕೆಟ್ಟದಾಗಿ ಅರ್ಜುನ್ ಸರ್ಜಾ ನಡೆದುಕೊಂಡಿದ್ದರು. ಶೂಟಿಂಗ್ ಸಂದರ್ಭದಲ್ಲಿ ನನ್ನ ಪ್ರೈವೆಟ್ ರೆಸಾರ್ಟ್ ಇದೆ ಅಲ್ಲಿಗೆ ಬಾ ಎಂದು ಕರೆದಿದ್ದರು. ನಾನು ಏನಕ್ಕೆ ಎಂದು ಕೇಳಿದೆ. ಆಗ ಅವರು ನಾನು ಇಂದು ಫುಲ್ ಫ್ರೀ ಇದ್ದು ನನ್ನೊಂದಿಗೆ ಸಮಯ ಕಳೆ ಯಬೇಕು ಎಂದಿದ್ದರು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೊನೆಗೂ ಮದ್ವೆ ರಹಸ್ಯ ಬಯಲು ಮಾಡಿದ ಶೃತಿ ಹರಿಹರನ್ ದೂರು:

 

 

 

ಹಿಂದೆ ಶ್ರುತಿ ಹರಿಹರನ್ ಗೆ ಮಾಡುವೆ ಆಗಿದೆ ಅಂತಿಲ್ಲ ಅನೇಕ ಗಾಸಿಪ್ಗಳು ಹರಿದಾಡುತ್ತಿತ್ತು ಹಿಂದೆ ಅದಕ್ಕೆ ಪ್ರತಿಕ್ರಿಯಿಸಿದ ಶ್ರುತಿ ಅದೆಲ್ಲ ಸುಳ್ಳು ನಂಗೆ ಇನ್ನು ಮದುವೆ ಆಗಿಲ್ಲ ಎಂದು ಹೇಳಿಕೊಂಡಿದ್ದರು ಆದ್ರೆ ಈಗ ಅರ್ಜುನ್ ಸರ್ಜಾ ಅವರ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿರುವ ನಟಿ ಶೃತಿ ಹರಿಹರನ್ ಅವರಿಗೆ ಮದುವೆ ಆಗಿದೆ ಎಂಬ ಅಂಶ ಅವರು ಪೊಲೀಸರಿಗೆ ನೀಡಿರುವ ದೂರಿನ ಪ್ರತಿಯಲ್ಲಿ ಬಹಿರಂಗವಾಗಿದೆ.ಹೌದು, ಇಂದು ನಟಿ ಶೃತಿ ಹರಿಹರನ್ ಅವರು ಸುಮಾರು 5 ಪುಟಗಳಲ್ಲಿ ಅರ್ಜುನ್ ಸರ್ಜಾ ಅವರ ವಿರುದ್ಧ ದೂರು ನೀಡಿದ್ದರು. ಇದರಲ್ಲಿ ತಮ್ಮ ಹೆಸರಿನ ವಿಳಾಸದೊಂದಿಗೆ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದಾರೆ. ಇದರೊಂದಿಗೆ ಹರಿಹರನ್ ಅವರಿಗೆ ಮದುವೆ ಆಗಿದೆ ಅಂಶ ಬಹಿರಂಗವಾಗಿದೆ. ಇದಕ್ಕೂ ಮುನ್ನ ನಟಿ ಶೃತಿ ಹರಿಹರನ್ ಅವರಿಗೆ ಮದುವೆ ಆಗಿದೆಯೇ ಇಲ್ಲವೇ ಎಂಬ ಸಂಗತಿ ಇಷ್ಟು ದಿನಗಳ ಕಾಲ ಗುಟ್ಟಾಗಿಯೇ ಇತ್ತು. ಆದರೆ ಮೀಟೂ ಅಭಿಯಾನದ ಭಾಗವಾಗಿ ನೀಡಿದ ದೂರಿನಿಂದ ಶೃತಿ ಅವರಿಗೆ ಮದುವೆ ಆಗಿದೆ ಎಂಬ ಅಂಶ ತಿಳಿದು ಬಂದಿದೆ.

ರಾಮ್ ಕುಮಾರ್ ಕೂಡ ನೃತ್ಯ ಕಲಾವಿದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ರಾಮ್ ಕುಮಾರ್ ಕೇರಳದ ಪ್ರಸಿದ್ಧ ಕಲರಿ ಪಟ್ಟು ಎಂದು ತಿಳಿದು ಬಂದಿದೆ. ಈ ಹಿಂದೆ ಶೃತಿ ಸಹ ರಾಮ್ ಕುಮಾರ್ ಜತೆ ರಿಲೇಷನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಆದರೆ ಎಲ್ಲಿಯೂ ತಾವು ಮದುವೆಯಾಗಿರುವುದಾಗಿ ಶೃತಿ ಹೇಳಿರಲಿಲ್ಲ. ಶ್ರುತಿ ಹರಿಹರನ್ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ ‘ಪ್ರೇಮ’ ಎಂಬ ವಿಡಿಯೋ ಹಾಡಿನಲ್ಲಿ ಇಬ್ಬರು ಅಭಿನಯ ಮಾಡಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top