ಮನೋರಂಜನೆ

ಮಲ್ಟಿಫ್ಲೆಕ್ಸ್ ಷೋನಲ್ಲೂ All time ದಾಖಲೆ ಬರೆದ ‘ದಿ ವಿಲನ್’- ಮೊದಲ ವಾರದಲ್ಲೇ ಪಡೆದ ಶೋಗಳು ಎಷ್ಟು ಗೊತ್ತಾ?

ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಕೇವಲ ನಾಲ್ಕೇ ದಿನದಲ್ಲಿ ಬರೋಬ್ಬರಿ 58ಕೋಟಿ ಗಳಿಕೆ ಮಾಡಿರುವ ವಿಚಾರ ಗೊತ್ತೇ ಇದೆ. ಈ ಮೂಲಕ ಸ್ಯಾಂಡಲ್​ವುಡ್​ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ‘ದಿ ವಿಲನ್’ ಸಿನಿಮಾ ಧೂಳೀಪಟ ಮಾಡಿದ್ದು ಇಬ್ಬರು ಘಟಾನುಘಟಿ ಸ್ಟಾರ್​​ ನಟರು ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿದ್ದಾರೆ. ಹಾಗೆ ನೋಡಿದರೆ ಇತ್ತೀಚೆಗೆ ವಿಲನ್ ಸಿನಿಮಾ ಬಗ್ಗೆ ಆದ ಅಪಪ್ರಚಾರ ಯಾವ ಸಿನಿಮಾಗೂ ಆಗಿರಲಿಲ್ಲ! ವಿಪರ್ಯಾಸ ಎಂದರೆ ವಿಲನ್ ಗೆ ಆಗಿರುವಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಯಾವ ಸಿನಿಮಾಗೂ ಆಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲಸಿಲ್ಲದ ಕೆಲವು ಕಿಡಿಗೇಡಿಗಳು ಸಿನಿಮಾ ಬಗ್ಗೆ ಕೆಟ್ಟದಾಗಿ ಬಿಂಬಿಸಿ ವಿಕೃತಿ ಮೆರೆದಿದ್ದರು. ಅಂತವರೆಲ್ಲಾ ದಿ ವಿಲನ್ ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡು ಮನಸಿನಲ್ಲೇ ಮರುಗುತ್ತಿದ್ದಾರೆ..

 

 

ಮೊದಲ ವಾರದಲ್ಲಿ ಅತಿಹೆಚ್ಚು ಮಲ್ಟಿಪ್ಲೆಕ್ಸ್ ಷೋಗಳು:
ಇದೀಗ ಕನ್ನಡ ಚಿತ್ರರಂಗದಲ್ಲಿ ದಿ ವಿಲನ್ ಸಿನಿಮಾ ಮತ್ತೊಂದು ದಾಖಲೆ ಬರೆದಿದ್ದು ಮೊದಲ ವಾರದಲ್ಲೇ ಅತಿ ಹೆಚ್ಚು ಮಲ್ಟಿಪ್ಲೆಕ್ಸ್ ಶೋಗಳನ್ನ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.. ಮಾಡಲು ಕೆಲಸಿಲ್ಲದೇ ಕೆಲ ಅಪಾಪೋಲಿಗಳು ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೇ ಅಪಪ್ರಚಾರ ಮಾಡಿದರೂ ‘ದಿ ವಿಲನ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು ಮೊದಲ ವಾರ ಮಲ್ಟಿಪ್ಲೆಕ್ಷ್ ಗಳಲ್ಲಿ ಬರೋಬ್ಬರಿ 2072 ಶೋಗಳ ಪ್ರದರ್ಶನ ಕಂಡಿದೆ. ಕನ್ನಡದ ಮಟ್ಟಿಗೆ ಮೊದಲ ವಾರ ಇಷ್ಟು ಶೋಗಳು ಸಿಕ್ಕಿರೋದು ಇದೇ ಮೊದಲು.. ರಾಜಕುಮಾರ ಚಿತ್ರ 1836 ಶೋಗಳನ್ನ ಪಡೆದಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನ ದಿ ವಿಲನ್ ಅಳಿಸಿಹಾಕಿದೆ.

ಮೊದಲ ದಿನ 20.5 ಮತ್ತು ನಾಲ್ಕೇ ದಿನಕ್ಕೆ 58 ಕೋಟಿ ರೂ ಗಳಿಕೆ..
‘ದಿ ವಿಲನ್​’ ಚಿತ್ರ ಮೊದಲ ದಿನವೇ ಬರೋಬ್ಬರಿ 20.5 ಕೋಟಿ ರೂ ಬಾಚಿಕೊಂಡಿದೆ.. ನಾಲ್ಕೇ ದಿನಕ್ಕೆ ಬರೋಬರಿ 58(gross) ಕೋಟಿ ರೂಗಳನ್ನ ಲೂಟಿ ಮಾಡಿದೆ. ನಾಲ್ಕೇ ದಿನಗಳಲ್ಲಿ ಹಾಕಿದ್ದ ಮೊತ್ತ ವಿತರಕರಿಗೆ ವಾಪಾಸ್ ಬಂದಿದ್ದು ತೆರೆಗೆ, ಬಾಡಿಗೆ ಮತ್ತು ಕಮಿಷನ್ ಹಣವನ್ನೆಲ್ಲಾ ಕಳೆದ ನಿರ್ಮಾಪಕನ ಕೈಗೆ 30 ಕೋಟಿ ರೂ ಸೇರಿಕೊಂಡಿದೆ..

ಬಾಕ್ಸ್ ಆಫೀಸ್ ನಲ್ಲಿ ಈ ಪರಿ ಹಣ ಗಳಿಕಗೆ ಮುಖ್ಯ ಕಾರಣ, ಒಂದು ಎಲ್ಲ ಥಿಯೇಟರ್ ಗಳಲ್ಲು ಹೌಸ್ ಫುಲ್ ಆಗಿರೋದು.. ಮತ್ತೊಂದು ಟಿಕೆಟ್ ರೇಟ್ ಜಾಸ್ತಿ ಮಾಡಿರೋದು.. ಜೊತೆಗೆ ವಿಲನ್ ಸಿನಿಮಾ ಮೊದಲ ದಿನದ ಅತಿ ಹೆಚ್ಚು ಶೋ ಕಂಡಿದೆ.. ಎಂದು ವಿತರಕರು ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top