ಮನೋರಂಜನೆ

ಅರ್ಜುನ್ ಸರ್ಜಾ ಪುತ್ರಿ ಆರೋಪಕ್ಕೆ ತಿರುಗೇಟು ನೀಡಿದ ನಟ ಚೇತನ್.

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಹಾಗೂ ಅವರ ಆರೋಪಕ್ಕೆ ಬೆಂಬಲ ನೀಡಿರುವ ನಟ ಚೇತನ್ ಬಗ್ಗೆ ಸರ್ಜಾ ಪುತ್ರ ಆರೋಪವೊಂದನ್ನ ಮಾಡಿದ್ದರು. “ಶ್ರುತಿ ಹರಿಹರನ್ ತಮ್ಮ ಆರೋಪದ್ಲಲಿ ಅರ್ಜುನ್ ಸರ್ಜಾ ಡಿನ್ನರ್ ಗೆ ಕರೆದಿದ್ದರು ಎಂದು ಉಲ್ಲೇಖಿಸಿದ್ದಾರೆ. ಊಟಕ್ಕೆ ಕರೆದಿದ್ದೇ ಲೈಂಗಿಕ ಕಿರುಕುಳ ಆಗುವುದಾದರೆ ಚೇತನ್ ಕೂಡ ನನ್ನನ್ನು ಊಟಕ್ಕೆ ಕರೆದಿದ್ದರು, ಫೋಟೋ ಶೂಟ್ ವೇಳೆ ಚೇತನ್ ನನ್ನ ಬೆನ್ನು ಮುಟ್ಟಿದ್ದರು, ಅದೂ ಕೂಡ ಲೈಂಗಿಕ ಕಿರುಕುಳವಾಗಬಹುದು” ಎಂದು ಐಶ್ವರ್ಯ ಸರ್ಜಾ ಆರೋಪಿಸಿದ್ದರು.

ಐಶ್ವರ್ಯ ಅರ್ಜುನ್ ಅವರ ಆರೋಪಕ್ಕೆ ಚೇತನ್ ತಿರುಗೇಟು ನೀಡಿದ್ದಾರೆ. ಬೀದರ್ ಅಲೆಮಾರಿ ಜನಾಂಗದ ಮೂಲಭೂತ ಸೌಕರ್ಯದ ಬಗ್ಗೆ ತಿಳಿದುಕೊಳ್ಳಲು ಚೇತನ್ ಬಂದಿದ್ದ ಚೇತನ್ ಮಾಧ್ಯಮಗಳೊಂದಿಗೆ ಮಾತನಾಡಿ “ನಾನು ಐಶ್ವರ್ಯ ಸೊಂಟ ಮುಟ್ಟಿಲ್ಲ, ಅದು ಫೋಟೋ ಶೂಟ್ ಅಷ್ಟೇ. ಸರ್ಜಾ ಅವರೇ ಅದನ್ನು ನಿರ್ವಹಣೆ ಮಾಡಿದ್ದರು” ಎಂದು ಹೇಳಿದ್ದಾರೆ..

ನಾನು ಐಶ್ವರ್ಯ ಅವರನ್ನು ಊಟಕ್ಕೆ ಕರೆದೇ ಇಲ್ಲ. ಅವರ ತಂದೆ ಅರ್ಜುನ್ ಸರ್ಜಾ ಅವರೇ ಮನೆಗೆ ಊಟಕ್ಕೆ ಬನ್ನಿ ಎಂದು ನನ್ನನ್ನ ಕರೆದಿದ್ದರು. ಐಶ್ವರ್ಯ ಅವರ ಈ ರೀತಿಯ ಹೇಳಿಕೆಯಿಂದ ಸರ್ಜಾ ಕುಟುಂಬದ ಘನತೆ ಕಡಿಮೆಯಾಗುತ್ತಿದೆ.. ಮೀಟೂ ಒಂದು ಗಂಭೀರ ವಿಷಯ. ” ಎಂದು ಚೇತನ್ ಸರ್ಜಾ ಪುತ್ರಿಗೆ ಖಾರವಾಗಿ ತಿರುಗೇಟು ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top