ಮನೋರಂಜನೆ

ಹೂ ಮಾರುವ ಮಹಿಳೆಯಿಂದ ಮಂಗರಳಾತಿ ಮಾಡಿಸಿಕೊಂಡ ನಟಿ ಪೂಜಾ ಗಾಂಧಿ.

2019ರ ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ.. ಕರ್ನಾಟಕ ಲೋಕಸಭಾ ಉಪಚುನಾವಣೆಯ ಪ್ರಚಾರ ಭರದಿಂದ ಸಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ನಟಿ ಪೂಜಾಗಾಂಧಿ ಅವರು ಜೆಡಿಎಸ್ ಪರ ಪ್ರಚಾರ ಮಾಡುತ್ತಿದ್ದಾರೆ..ಚುನಾವಣಾ ಪ್ರಚಾರದ ವೇಳೆ ಮಹಿಳೆಯೊಬ್ಬರು ಪೂಜಾಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ನಗರದ ಎಸ್.ಎನ್. ಮಾರ್ಕೆಟ್ ನಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಲು ಪೂಜಾಗಾಂಧಿ ಬಂದಿದ್ದರು. ಈ ವೇಳೆ ಸಿಲಿಂಡರ್ ರೇಟ್ ಹೆಚ್ಚಾಗಿದೆ, ಡೀಸೆಲ್, ಪೆಟ್ರೋಲ್ ರೇಟು ಹೆಚ್ಚಾಗಿದೆ, ಗಾಂಧಿ ಬಜಾರ್ ನಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡುತ್ತಿಲ್ಲ. ಈಗ ಮಾತ್ರ ವೋಟ್ ಕೇಳುವುದಕ್ಕೆ ಬಂದಿದ್ದೀರಲ್ಲಾ ಅಂತ ಹೂ ವ್ಯಾಪಾರಿ ಮಹಿಳೆ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಲ್ಲಾ ರೇಟು ಹೀಗೆ ಹೆಚ್ಚಾದರೆ ನಾವು ಬದುಕೋದು ಹೇಗೆ ಎಂದು ಮಹಿಳೆ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಂತೆ ಆಕೆಯನ್ನು ಸಮಾಧಾನಪಡಿಸಲು ಪೂಜಾ ಗಾಂಧಿ ಮುಂದಾದರಾದರೂ ಮಹಿಳೆಯನ್ನು ಸಮಾಧಾನ ಮಾಡುವಲ್ಲಿ ಪೂಜಾಗಾಂಧಿ ವಿಫಲವಾದರು. ನಂತರ ಸ್ಥಳಿಯ ಮುಖಂಡರು ವ್ಯಾಪಾರಿ ಮಹಿಳೆಗೆ ಸಮಾಧಾನ ಮಾಡಿದ್ದಾರೆ. ಮಹಿಳೆ ಮಾತಿನಿಂದ ಪೂಜಾ ಗಾಂಧಿ ತಬ್ಬಿಬ್ಬಾಗಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top