ಮನೋರಂಜನೆ

ಕನ್ನಡ ಚತ್ರರಂಗಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ಕಿಂಗ್ ‘ಸಲ್ಮಾನ್ ಖಾನ್’ ಸಹೋದರ.

ಬಾಲಿವುಡ್ ಸುಲ್ತಾನ್ ‘ಸಲ್ಮಾನ್ ಖಾನ್’ ಅವರ ಸಹೋದರ ಅರ್ಬಾಜ್ ಖಾನ್ ಇದೀಗ ಕನ್ನಡ ಚಿತ್ರರಂಗದತ್ತ ಮುಖ ಮಾಡುತ್ತಿದ್ದಾರೆ.. ಹೌದು, ‘ಆರ್​ಎಸ್ ಪ್ರೊಡಕ್ಷನ್ಸ್’ ಬ್ಯಾನರ್​ನಲ್ಲಿ ಕನಕಪುರ ಶ್ರೀನಿವಾಸ್ ಅವರು ನಿರ್ಮಾಣ ಮಾಡುತ್ತಿರುವ ‘ರಣಂ’ ಚಿತ್ರದಲ್ಲಿ ಅರ್ಬಾಜ್ ಖಾನ್ ನಟಿಸಲಿದ್ದಾರಂತೆ. ಅವರನ್ನು ಕನ್ನಡಕ್ಕೆ ಕರೆತರಲು ಯೋಜನೆ ರೂಪಿಸಿರುವುದು ನಿರ್ವಪಕ ಕನಕಪುರ ಶ್ರೀನಿವಾಸ್..

‘ಈ ಸಿನಿಮಾದಲ್ಲಿ ಅರ್ಬಾಜ್ ಅವರದ್ದು ಅತಿಥಿ ಪಾತ್ರವಾಗಿರಲಿದ್ದು ‘ಈಗಾಗಲೇ ಅರ್ಬಾಜ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಅವರಿಂದಲೂ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಅವರು ಒಪ್ಪಂಧಕ್ಕೆ ಸಹಿ ಹಾಕಿದ ಬಳಿಕ ಅಧಿಕೃತ ಘೋಷಣೆ ಮಾಡಲಿದ್ದೇವೆ’ ಎಂದು ಹೇಳಿಕೆ ನೀಡಿದ್ದಾರೆ ಶ್ರೀನಿವಾಸ್. ಎಲ್ಲವೂ ಅಂದುಕೊಂಡಂತೆ ಆದರೆ, ಅರ್ಬಾಜ್‌ಗೆ ಕನ್ನಡದಲ್ಲಿ ರಣಂ ಮೊದಲ ಸಿನಿಮಾವಾಗಲಿದೆ.

ಈ ಸಿನಿಮಾದಲ್ಲಿ ‘ಆ ದಿನಗಳು’ ಸಿನಿಮಾ ಖ್ಯಾತಿಯ ಚೇತನ್ ಕ್ರಾಂತಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿರಂಜೀವಿ ಸರ್ಜಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು, ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ತೆರೆಕಾಣಲಿದೆಯಂತೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣದ ಹೊಣೆಯನ್ನು ನಿರಂಜನ್ ಬಾಬು ಹೊತ್ತಿದ್ದಾರೆ. ನಾಯಕಿಯಾಗಿ ನೀತು ಗೌಡ ಕಾಣಿಸಿಕೊಳ್ಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top