ಮನೋರಂಜನೆ

ಬಂಧನದ ಭೀತಿಯಲ್ಲಿ ಅರ್ಜುನ್​ ಸರ್ಜಾ- ಮುಂದಿನ ನಡೆ ಏನು.?

ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿರುವ ಮಿ-ಟೂ ಆರೋಪ ಪ್ರಕರಣ ಸಂಬಂಧ ನಟ ಅರ್ಜುನ್ ಸರ್ಜಾಗೆ ಬಂಧನದ ಭೀತಿ ಎದುರಾಗಿದ್ದು ಇಂದು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇತ್ತ ದೂರು ದಾಖಲಿಸಿಕೊಂಡಿರುವ ಕಬ್ಬನ್‌ ಪಾರ್ಕ್‌ ಪೊಲೀಸರು, ದೂರಿಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ದಾಖಲಾಗಿರುವ ದೂರಿನಲ್ಲಿ ಸೆಕ್ಷನ್ 354, 354ಎ, 509 ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಸೆಕ್ಷನ್ 354 – ಅಸಭ್ಯ ವರ್ತನೆ, ಸೆಕ್ಷನ್ 354ಎ – ಲೈಂಗಿಕ ದೌರ್ಜನ್ಯ,ಸೆಕ್ಷನ್ 509 – ಬೆದರಿಕೆ, ಮಾನಹಾನಿ.. ಸೆಕ್ಷನ್ 354, 354ಎ ಪ್ರಕರಣದಲ್ಲಿ ಜಾಮೀನು ಸಿಗುವುದಿಲ್ಲ. ಈ ಕಾರಣದಿಂದಾಗಿ ಅರ್ಜುನ್​ ಸರ್ಜಾ ಅವರಿಗೆ ಈಗ ಬಂಧನದ ಭೀತಿ ಎದುರಾಗಿದೆ.

ಸದ್ಯ ಶ್ರುತಿ ಹರಿಹರನ್​ ದೂರಿನಲ್ಲಿ ಉಲ್ಲೇಖ ಮಾಡಿದ್ದ ಸಾಕ್ಷಿಗಳಾದ ಬೋರೇಗೌಡ ಮತ್ತು ಕಿರಣ್ರನ್ನು ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಸಾಕ್ಷಿಗಳನ್ನ ವಿಚಾರಣೆ ನಡೆಸಿದ ಬಳಿಕ ಅರ್ಜುನ್​ ಸರ್ಜಾರವನ್ನ ಬಂಧಿಸಬೇಕೋ ಬೇಡವೋ ಎಂಬ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಅರ್ಜುನ್‌ ಸರ್ಜಾ ಬಂಧನಕ್ಕೆ ಒಳಪಡುತ್ತಾರೋ ಅಥವಾ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top