fbpx
ಹೆಚ್ಚಿನ

ಚಾಣಿಕ್ಯನ ಪ್ರಕಾರ ಜೀವನದಲ್ಲಿ ಸಂತೋಷದಿಂದಿರಲು ಈ ಸೂತ್ರಗಳನ್ನು ಪಾಲಿಸಬೇಕು.

ಆಚಾರ್ಯ ಚಾಣಕ್ಯ ಹೇಳಿದ ಪ್ರಕಾರ ಅತಿ ಆಸೆ,ದುರಾಸೆ, ಸ್ವಾರ್ಥಗಳಂತಹ ಅಂಶಗಳನ್ನು ಹೊಂದಿರುವವರನ್ನು ಎಂದಿಗೂ ಪರಿವರ್ತನೆ ಮಾಡಲಾಗುವುದಿಲ್ಲ.ಎಲ್ಲಿ ನಮಗೆ ಮರ್ಯಾದೆ , ಗೌರವ ಇರುವುದಿಲ್ಲವೋ ಅಲ್ಲಿ ನಾವು ಒಂದು ಕ್ಷಣವೂ ಸಹ ಇರಬಾರದು .ಹಾಗೆಯೇ ನಮ್ಮನ್ನು ಗೌರವಿಸದವರ ಹತ್ತಿರವೂ ಸಹ ಇರಬಾರದು.ನದಿಗಳು ಮತ್ತು ವೈದ್ಯರು ಇರುವ ಸ್ಥಳಗಳಲ್ಲಿ ಮಾತ್ರ ವಾಸವಿರಬೇಕಂತೆ. ಅವೇ ವಾಸಿಸುವುದಕ್ಕೆ ಸರಿಯಾದ ಸ್ಥಳಗಳಾಗಿರುತ್ತವೆ .ಯಾವುದೇ ತರದ ಗಲಾಟೆ ಇರದ,ಹೆಚ್ಚು ಆಹಾರ,ನೀರು ಇರುವ ಸ್ಥಳಗಳಲ್ಲಿ ಮಾತ್ರವೇ ಹಣವು ಹೆಚ್ಚಿಗೆ ಇರುತ್ತದೆಯಂತೆ.ಸರೋವರಗಳಲ್ಲಿ ನೀರು ಇರುವಾಗ ಮಾತ್ರವೇ ಅವುಗಳಲ್ಲಿದ್ದು ನೀರು ಇಲ್ಲದಿದ್ದಾಗ ಅವುಗಳನ್ನು ಬಿಟ್ಟು ಹೋಗುವ ಹಂಸಗಳಂತೆ ಮನುಷ್ಯರು ಈ ಭೂಮಿಯ ಜೀವಿಸಬೇಕು.ಒಬ್ಬ ವ್ಯಕ್ತಿಯನ್ನು ಹತ್ತು ಜನರು ಹೊಗಳಿದರೆ ನಾವು ಸಹ ಆ ವ್ಯಕ್ತಿಯನ್ನು ಹೊಗಳಬೇಕಂತೆ.ಆದರೆ ಸ್ವತಃ ಯಾರೂ ಅವರೇ ಹೊಗಳಿಕೊಳ್ಳಬಾರದು.

 

 

 

ನಮಗೆ ಇರುವುದರಲ್ಲಿ ತೃಪ್ತಿಯಾಗಿ ಜೀವಿಸಿದರೆ ನಿಜವಾದ ಆನಂದ ಸಿಗುತ್ತದೆ.ಮನುಷ್ಯರು ಸಹ ಅಕ್ಕ ಪಕ್ಕದ ಮನುಷ್ಯನಿಗೆ ಸಹಾಯ ಮಾಡದೆ ಇರುವವರು ಅವರು ಬದುಕಿದ್ದರೂ ಸಹ ಸತ್ತವರಿಗೆ ಸಮಾನ.ಜಯವನ್ನು ಯಾವಾಗಲೂ ಹಿಂದೆ ಇಟ್ಟು ಕೊಂಡಿರುವವರನ್ನು ಆದರ್ಶವಾಗಿ ಇಟ್ಟುಕೊಂಡರೆ ಅಂತಹವರ ಕಥೆಗಳನ್ನು ಓದಿದರೂ ಸಹ ಅದರಿಂದ ನಾವು ಸ್ಫೂರ್ತಿಯಾಗಿ ಜಯವನ್ನು ಸಾಧಿಸಬಹುದು.ಜೀವನದಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಕೈ ಜಾರಿ ಬಿಡಬಾರದು. ಯಾರ ಜೀವನ ಹೇಗೆ ? ಯಾವಾಗ ? ಬದಲಾಗತ್ತದೆಯೋ ,ಯಾರೂ ಹೇಳಲು ಆಗುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top