ಅರೋಗ್ಯ

ಶಂಖಪುಷ್ಪ ದೇವರ ಪೂಜೆಗೆ ಅಷ್ಟೆ ಅಲ್ಲ ಆರೋಗ್ಯ ವರ್ಧಕವಾಗಿ ಬಳಸುತ್ತಾರೆ.

ಬಿಳಿ,ಕೆಂಪು,ಕಡು ನೀಲಿ, ನಸು ನೀಲಿ,ತಿಲಿ ನೇರಳೆ ಮುಂತಾದ ಬಣ್ಣಗಳಲ್ಲಿ ಕಾಣಸಿಗುವ ಶಂಖಪುಷ್ಪದಲ್ಲಿ ಏಕ ಮತ್ತು ದ್ವಿತೀಯ ಎಂಬ ಎರಡು ತಳಿಗಳಿವೆ.ಏಕ ತಳಿಯ ಹೂವಿನಲ್ಲಿ ದೊಡ್ಡದಾದ ಒಂದು ಎಸಳಿದ್ದು,ಗಮನಿಸಿ ನೋಡಿದಾಗ ಬುಡದಲ್ಲಿ ಪುಟ್ಟದಾದ ಎರಡು ಎಸಳುಗಳು ಕಾಣಬಹುದು.ಇಂಗ್ಲಿಷಿನಲ್ಲಿ ಬಟರ್ ಫ್ಲೆಪಿಯೆ ಎಂಬ ಹೆಸರಿರುವ ಶಂಖಪುಷ್ಪ ಕ್ಲಿಟೋರಿಯ ಟಿರ್ನೆಟಿಯ ಎಂದು ಸಸ್ಯಶಾಸ್ತ್ರದಲ್ಲಿ ಕರೆಯುತ್ತಾರೆ. ಬಿಳಿವರ್ಣದ ಹೂ ಬಿಡುವ ಶಂಖಪುಷ್ಪ ವೈದ್ಯ ದಷ್ಟಿಯಿ0ದ ಹೆಚ್ಚು ಪ್ರಭಾವಶಾಲಿಯೆಂದು ಹೇಳಲಾಗಿದೆ. ಹೊಟ್ಟೆ ಸೆಳೆತ, ಪಚನದ ತೊಂದರೆ, ಪಿತ್ತಜನಕಾಂಗ, ಮೂತ್ರಪಿಂಡ, ಅನ್ನನಾಳ, ಪಿತ್ತಕೋಶಗಳ ಕಾಯಿಲೆ ಹಾಗೂ ಹೊಟ್ಟೆ ಉಬ್ಬರದ ತೊಂದರೆಗಳನ್ನು ಇವುಗಳ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ.

 

 

 

ಅರೆತಲೆನೋವು ನಿವಾರಿಸಲು ಶಂಖಪುಷ್ಪದ ಬೇರನ್ನು ತೇದು ಅಂಜನದ ಹಾಗೆ ಕಣ್ಣಿಗೆ ಸವರಬೇಕು. ಎಲೆಗಳ ರಸವನ್ನು ಬಿಸಿ ಮಾಡಿ ಲೇಪಿಸಿದರೆ ಬಾವು ನೋವು ಗುಣವಾಗುತ್ತದೆ.ಬೇರಿನ ರಸವನ್ನು ಹಾಲಿನಲ್ಲಿ ಬೆರೆಸಿ ಶ್ವಾಸನಾಳಗಳ ಬಾಧೆ ನಿವಾರಣೆಗೆ ಬಳಸುವುದುಂಟು.ಮುಖದಲ್ಲಿ ಬಿಳಿಕಲೆಗಳಿದ್ದರೆ ಬೇರನ್ನು ಕ್ಷಾರ ಮಾಡಿ ಎಳ್ಳೆಣ್ಣೆಯಲ್ಲಿ ಕಲಸಿ ಲೇಪಿಸಬಹುದು.ಬೇರಿನ ತೊಗಟೆಯಿಂದ ತಯಾರಿಸಿದ ಚೂರ್ಣವನ್ನು ಜೀರಿಗೆ ಕಷಾಯದಲ್ಲಿ ಕದಡಿ ಜೇನುತುಪ್ಪ ಬೆರೆಸಿ ಸೇವಿಸಿದರೆ ದೇಹಬಾಧೆ ನಿವಾರಣೆ.ಬೀಜವನ್ನು ಹುರಿದು ಹುಡಿ ಮಾಡಿ ಬೆಂಕಿ ಗುಳ್ಳೆಗಳ ನೋವು ಶಮನದ ಔಷಧಕ್ಕೆ ಬಳಸುತ್ತಾರೆ.ವೈದ್ಯಗ್ರಂಥಗಳಲ್ಲಿ ಇದರ ಹೂವಿನಿಂದ ಉನ್ಮಾದ,ಅಪಸ್ಮಾರ ಇತ್ಯಾದಿ ಬಾಧೆ ಶಮನಕ್ಕೆ ತಯಾರಿಸುವ ಪಾನಕದ ವಿಧಿಗಳಾಗಿವೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top