fbpx
ಮನೋರಂಜನೆ

ನಿಲ್ಲದ ಹುಚ್ಚ ವೆಂಕಟ್ ಹುಚ್ಚಾಟ “ನನ್ನ ಸಾವಿಗೆ ಹುಚ್ಚ ವೆಂಕಟ್ ಕಾರಣ”,ನಿರ್ದೇಶಕನ ಟ್ವೀಟ್

ತನ್ನ ಐಲಾಟಗಳಿಂದಲೇ ಹೆಸರವಾಸಿಯಾಗಿ ಕಂಡ ಕಂಡವರಿಗೆಲ್ಲಾ ಪುಕ್ಸಟ್ಟೆ ಅವಾಜು ಬಿಟ್ಟು, ಒಂದಿಬ್ಬರಿಗೆ ಗೂಸಾ ಕೂಡ ಕೊಟ್ಟು ಯದ್ವಾ ತದ್ವಾ ಫೇಮಸ್ ಅದಾತ ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಮಾನವಾಗಿ ಸೋತು ಸುಣ್ಣವಾದ ನಂತರ ಮಾಯವಾಗಿದ್ದ ಹಾಗು ಕೆಲ ದಿನಗಳಿಂದ ಯಾವ ರಗಳೆ ರಾಮಾಯಣಗಳೂ ಇಲ್ಲದೆ ತನ್ನ ಪಾಡಿಗೆ ತಾನಿದ್ದಂತಿದ್ದ ಈತನ ಕಂಡುಕೊನೆಗೂ ಈತನ ತಲೆ ಸರಿಯಾಗಿದೆ ಅಂದುಕೊಂಡರೆ ಅದು ನಿಜಕ್ಕೂ ತಲೆಕೆಟ್ಟ ನಿರ್ಧಾರ. ಯಾಕೆಂದರೆ ಸ್ವಯಂ ಘೋಷಿತ ವಿಶ್ವ ವಿಖ್ಯಾತ ನಟ ಹುಚ್ಚಾ ವೆಂಕಟ ಮತ್ತೆ ಸುದ್ದಿಯಾಗಿದ್ದಾರೆ .

ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಮಾಡಬಾರದ ಕಿರಿಕ್ ಮಾಡಿ ಬಿಗ್ ಬಾಸ್ ಮನೆಯಿಂದ ಹೊರಬಂದು,ನಂತರ ಹುಡುಗಿ ವಿಷಯಕ್ಕೆ ವಿಷ ಕುಡೀತೀನಿ ಅಂತ ಡ್ರಾಮಾ ಮಾಡಿ ಆಯಿತು ಆ ನಂತರ ಮೊನ್ನೆ ಕಂಠ ಪೂರ್ತಿ ಕುಡಿದು ನಾಡು ರಸ್ತೆಯಲ್ಲಿ ಹುಚ್ಚಟ್ಟ ಮಾಡಿದ್ದೂ ಆಯಿತು ಹೀಗೆ ಮತ್ತೆ ಮಾಮೂಲಿ ತನ್ನ ಹುಚ್ಚಟ್ಟ ದಿಂದ ಕಿರಿಕ್ ಮಾಡುತ್ತಾ ಸದಾ ಕಾಲ ಸುದ್ದಿ ಮಾಡೋ ಹುಚ್ಚ ವೆಂಕಟ್ .ಈ ಸಲ ಹುಚ್ಚ ವೆಂಕಟ್ ಸುದ್ದಿ ಯಲ್ಲಿ ಇರೋದು ಈ ವಿಷಯಕ್ಕೆ ನಟ ಮತ್ತು ನಿರ್ದೇಶಕ ಒಬ್ಬ ನನ್ನ ಸಾವಿಗೆ ಹುಚ್ಚ ವೆಂಕಟ್ ನ ಬೆದರಿಕೆಯೇ ಕಾರಣ ಎಂದು ಟ್ವಿಟ್ ಮಾಡಿದ್ದಾನೆ , ಹೌದು ಹುಚ್ಚ ವೆಂಕಟ್ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಸಾವಿಗೆ ಹುಚ್ಚ ವೆಂಕಟ್ ನ ಬೆದರಿಯೇ ಕಾರಣ ಎಂದು ಯುವ ನಿರ್ದೇಶಕರೊಬ್ಬರು ಟ್ವೀಟ್ ಮಾಡಿದ್ದಾರೆ.

 

 

 

ಫೇಸ್ ಬುಕ್ ಲೈಫ್ ಸಿನಿಮಾ ನಿರ್ದೇಶಕ ಕೀರ್ತನ್ ಶೆಟ್ಟಿ ಅವರು ಈ ರೀತಿಯ ಟ್ವೀಟ್ ಮಾಡಿದ್ದಾರೆ. ಕೀರ್ತನ್ ಅವರು, ಮತ್ತೆ ಹುಚ್ಚ ವೆಂಕಟನ್ ಆರ್ಭಟ, ನನ್ನ ಮೇಲೆ ಅವಾಚ್ಯ ಪದಗಳಿಂದ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆಗೂ ಯತ್ನ ನಡೆದಿದ್ದು, ನನ್ನ ಸಾವಿಗೆ ಹುಚ್ಚ ವೆಂಕಟ್‍ನ ಬೆದರಿಕೆಯೇ ಕಾರಣ” ಎಂದು ಟ್ವೀಟ್ ಮಾಡಿ ಮಾಧ್ಯಮಗಳಿಗೆ ಟ್ಯಾಗ್ ಮಾಡಿದ್ದಾರೆ.ಹುಚ್ಚ ವೆಂಕಟ್ ಸಿನಿಮಾದಲ್ಲಿ ನಟಿಸುವುದಾಗಿ ಒಪ್ಪಿ 30,000 ರೂ. ಹಣ ಪಡೆದು, ಈಗ ಶೂಟಿಂಗೂ ಬರುತ್ತಿಲ್ಲ. ಇತ್ತ ತೆಗೆದುಕೊಂಡಿರುವ ಹಣವನ್ನು ವಾಪನ್ ಕೊಡುತ್ತಿಲ್ಲ. ಫೋನ್ ಮಾಡಿದರೆ ಕೆಟ್ಟಾದಾಗಿ ಬೈತಾರೆ ಎಂದು ಕೀರ್ತನ್ ಆರೋಪಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top