ಮನೋರಂಜನೆ

ನವರಸ ನಾಯಕ ತನ್ನ ಮಡದಿಯ ಬರ್ತ್ಡೇ ಪಾರ್ಟಿಯನ್ನು ಈ ಸಲ ಸಂಭ್ರಮಿಸಿದ್ದು ಯಾರ್ ಜೊತೆ ಗೊತ್ತಾ,ವಿಡಿಯೋ ಒಳಗಿದೆ

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರೋ ನವರಸ ನಾಯಕ ಜಗ್ಗೇಶ್ ಇದೀಗ ಒಂದು ಸ್ವಾರಸ್ಯಕರ ವಿಚಾರವನ್ನು ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಜಗ್ಗೇಶ್ ಅವರನ್ನು ಅಭಿಮಾನಿಸುವವರು ಮೊದಲು ಮಾತಾಡೋದೇ ಅವರ ಭಿನ್ನವಾದ ಮ್ಯಾನರಿಸಂ ಮತ್ತು ತಮ್ಮ ವಿಶಿಷ್ಟವಾದ ನಟನಾ ಶೈಲಿ.ಚಿತ್ರರಂಗಕ್ಕೆ ಪೋಷಕ ನಟನಾಗಿ ಎಂಟ್ರಿ ಕೊಟ್ಟು ಖಳನಾಯಕನಾಗಿ, ಹಾಸ್ಯನಟನಾಗಿ ನಟಿಸಿ ಆಮೇಲೆ ತಮ್ಮ ಸ್ವಪ್ರತಿಭೆಯಿಂದಲೇ ನಾಯಕನಟನಾಗಿ ಬೆಳೆದಿರುವ ಜಗ್ಗೇಶ್ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಿದ್ದಾರೆ. ತಾವು ಹೀರೊ ಆಗೋಕೂ ಮುಂಚೆ ಅಂದ್ರೆ ಸಣ್ಣ ಪುಟ್ಟ ಪಾತ್ರಗಳನ್ನ ನಿರ್ವಹಿಸುವ ಪೋಷಕ ನಟನಾಗಿದ್ದಾಗಾಲೇ ತೆಲುಗು ಚಿತ್ರರಂಗದ ಮೇರು ನಟ NTR ನೀವು ಮುಂದೊಂದು ದಿನ ದೊಡ್ಡ ನಟನಾಗಿ ಬೆಳೆಯುತ್ತೀರಿ ಎಂದು ಜಗ್ಗೇಶ್’ಗೆ ಹೇಳಿದ್ದರಂತೆ.

ವಯಕ್ತಿಕ, ಸಿನಿಮಾ ವಿಚಾರಗಳ ಜೊತೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ಮೂಲಕವೇ ಪ್ರತಿಕ್ರಿಯಿಸುತ್ತಾ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವವರು ನವರಸ ನಾಯಕ ಜಗ್ಗೇಶ್.ಕನ್ನಡದ ಮಟ್ಟಿಗೆ ಟ್ವಿಟರ್’ನಲ್ಲಿ ಅತಿಹೆಚ್ಚು ಸಕ್ರಿಯವಾಗಿರೋ ನಟ ಎಂಬ ಕೀರ್ತಿ ನಿಸ್ಸಂದೇಹವಾಗಿ ಜಗ್ಗೇಶ್ ಅವರಿಗೆ ಸಲ್ಲುತ್ತದೆ.ಜಗ್ಗೇಶ್ ರವರಿಗೆ ತಮ್ಮ ಧರ್ಮ ಪತ್ನಿ ಪರಿಮಳ ಅಂದ್ರೆ ತುಂಬಾ ಇಷ್ಟ ಅವರಿಬ್ಬರೂ ಪ್ರೀತಿಸಿ ಮದುವೆಯಾದವರು,ಎಲ್ಲ ಕಷ್ಟ ಸುಖವನ್ನು ಹಚ್ಚಿಕೊಂಡವರು ,ಮೊನ್ನೆ ಪರಿಮಳ ಜಗ್ಗೇಶ್ ರವರು ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡರು,ನವರಸ ನಾಯಕ ಜಗ್ಗೇಶ್​ಗೆ ಫ್ಯಾಮೀಲಿ ಅಂದ್ರೆ ಸಖತ್ ಇಷ್ಟ ಎಲ್ಲೇ ಹೋದರೂ ಇಡೀ ಕುಟುಂಬ ಸಮೇತ ಹೋಗುವ ನವರಸ ನಾಯಕ ಜಗ್ಗೇಶ್ ತನ್ನ ಮಡದಿ ಪರಿಮಳ ಅವರ ಹುಟ್ಟು ಹಬ್ಬದ ಸಂಭ್ರಮಕ್ಕೆ ಇಡೀ ಕುಟುಂಬದ ಜೊತೆ ಹೋಟೆಲ್​ನಲ್ಲಿ ಡಿನ್ನರ್ ಮಾಡಿ ತನ್ನ ಪತ್ನಿಯ ಬರ್ತಡೇಯನ್ನು ಆಚರಿಸಿ ಸಂಭ್ರಮಿಸಿದ್ದಾರೆ.

 

 

View this post on Instagram

 

ಪರಿಮಳನ #birthdayparty ಬಂಧುಗಳ ಜೊತೆ ಸುಂದರಕ್ಷಣ..

A post shared by Jaggesh Shivalingappa (@actor_jaggesh) on

 

 

ಆ ಪಾರ್ಟಿ ಯಲ್ಲಿ ಜಗ್ಗೇಶ್ ಸೇರಿದಂತೆ ಜಗ್ಗೇಶ್ ಮಕ್ಕಳಾದ ಗುರುರಾಜ್, ಯತೀಶ್​, ಸೊಸೆ, ಮೊಮ್ಮಗ ಹಾಗೂ ಕುಟುಂಬದ ಸದಸ್ಯರು ಮುಖ್ಯವಾಗಿ ಜಗ್ಗೇಶ್ ತಮ್ಮ, ನಟ ಕೋಮಲ್ ಕೂಡ ಭಾಗಿಯಾಗಿದ್ದು ವಿಶೇಷ ,ಎಲ್ಲ ಸೇರಿ ಪಾರ್ಟಿಗೆ ಇನ್ನೂ ಮೆರಗು ಬರುವಂತೆ ಮಾಡಿದ್ದಾರೆ,ಈ ನಡುವೆ ಜಗ್ಗೇಶ್ ಈ ಕ್ಷಣವನ್ನು ವಿಡಿಯೋ ಮಾಡಿ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡುವುದರ ಜೊತೆ ತಮ್ಮ ಅಭಿಮಾನಿಗಳ ಜೊತೆ ಈ ಖುಷಿ ಕ್ಷಣವನ್ನು ಹಂಚಿಕೊಂಡಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top