ಭವಿಷ್ಯ

ಅಕ್ಟೋಬರ್ 27ನೇ ತಾರೀಖು ಗುರು ಗ್ರಹ ಅನುರಾಧ ನಕ್ಷತ್ರಕ್ಕೆ ಪಥ ಬದಲಾವಣೆ ಮಾಡಿದೆ ಇದರಿಂದ 12 ರಾಶಿಗಳ ಮೇಲೆ ಬೀರುವ ಪರಿಣಾಮ ಹಾಗೂ ಶುಭ ಹಾಗೂ ಅಶುಭ ಫಲಗಳು ಏನೇನು ಗೊತ್ತಾ

ಧರ್ಮಾಧಿಪತಿಯಾದ ಗುರು ನ್ಯಾಯಾಧಿಪತಿಯಾದ ಶನೈಶ್ಚರನ ನಕ್ಷತ್ರವಾದ ಅನುರಾಧ ನಕ್ಷತ್ರಕ್ಕೆ ಅಕ್ಟೋಬರ್ 27 ನೇ ತಾರೀಖಿನಂದು ಸಂಚಾರ ಮಾಡಿದೆ. ಇದರಿಂದ ಯಾವ ರಾಶಿಗೆ ಶುಭ ಮತ್ತು ಅಶುಭ.ಗುರು ಗ್ರಹವು ಅನುರಾಧ ನಕ್ಷತ್ರಕ್ಕೆ ಪಥ ಬದಲಾವಣೆಯನ್ನು ಇದೇ ಶನಿವಾರದ ದಿನ ಅಂದರೆ ಅಕ್ಟೋಬರ್ 27 ನೇ ತಾರೀಖಿನಂದು ಸಂಚಾರ ಮಾಡಿದೆ. ಇದರಿಂದ ಇನ್ನು ಮುಂದೆ ಆನ್ಯಾಯ ಆಗಿರುವವರಿಗೆಲ್ಲ ಇನ್ನು ಮುಂದೆ ನ್ಯಾಯ ದೊರೆಯಲಿದೆ. ಈ ಗುರುವಿನ ಪಥ ಬದಲಾವಣೆಯಿಂದ ಯಾವ ರಾಶಿಗೆ ಶುಭ ಮತ್ತು ಯಾವ ರಾಶಿಗೆ ಅಶುಭ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

 

 

ಮೇಷ ರಾಶಿ
ಕೋರ್ಟ್ ಕೇಸ್ ಗಳಲ್ಲಿ ಅಲೆದಾಡಬೇಕಾಗುವ ಸನ್ನಿವೇಶ ಎದುರಾಗುತ್ತದೆ, ಶುಭಕಾರ್ಯಗಳ ಯೋಗ ಕೂಡಿಬರುತ್ತದೆ, ಆಕಸ್ಮಿಕ ಮತ್ತು ಅನಿರೀಕ್ಷಿತವಾಗಿ ಉದ್ಯೋಗ ಲಾಭ, ತಂದೆಯಿಂದ, ಧರ್ಮದಿಂದ ಮತ್ತು ಧಾರ್ಮಿಕ ವ್ಯಕ್ತಿಗಳಿಂದ ಬಾಧೆಯನ್ನು ಅನುಭವಿಸಬೇಕಾಗುತ್ತದೆ, ಜ್ಯೋತಿಷ್ಯದಿಂದ ಮೋಸ ಹೋಗುವ ಸಂಭವ ಇದೆ, ಆಕಸ್ಮಿಕ, ಅನಿರೀಕ್ಷಿತವಾಗಿ ತುಂಬಾ ಎಳೆದಾಡುತ್ತಾ ಇರುವ ಕೆಲಸಗಳು ಆದಷ್ಟು ಬೇಗನೆ ನೆರವೇರುತ್ತವೆ, ಉದ್ಯೋಗಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಕೇಸ್ ಗಳು ನಡೆಯುತ್ತಿದ್ದರೆ ಅದರಲ್ಲಿ ಗೆಲುವು ಪ್ರಾಪ್ತಿಯಾಗಲಿದೆ.

ವೃಷಭ ರಾಶಿ
ಶುಭ ಕಾರ್ಯಗಳಿಗೆ ಕಾಲ ಕೂಡಿ ಬರಲಿದೆ, ಆರ್ಥಿಕವಾಗಿ ಪ್ರಗತಿಯಾಗಲಿದೆ, ಅದೃಷ್ಟ ಒಲಿದು ಬರಲಿದೆ, ಆಕಸ್ಮಿಕವಾಗಿ ಅದೃಷ್ಟ ಒಲಿದು ಬರುತ್ತದೆ, ಸ್ಥಿರಾಸ್ತಿ ಮನೆ ಎಲ್ಲವೂ ಆಗುತ್ತದೆ, ತಂದೆಯಿಂದ ಸಹಕಾರ ಸಿಗುತ್ತದೆ, ಉದ್ಯೋಗದಲ್ಲಿ ಲಾಭವಾಗುತ್ತದೆ, ತಿರುಗಾಟ ಜಾಸ್ತಿಯಾಗಲಿದೆ, ಅನಿರೀಕ್ಷಿತವಾಗಿ ಬೇಡದಿದ್ದರೂ ಇದ್ದಕ್ಕಿದ್ದ ಹಾಗೆ ಪ್ರಯಾಣ ಮಾಡುವ ಸಂದರ್ಭಗಳು ಹೆಚ್ಚಾಗುತ್ತದೆ, ಜೊತೆಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ.

ಮಿಥುನ ರಾಶಿ
ರೋಗ ಭಾದೆಗಳಿಗೆ ಒಳಗಾಗಬೇಕಾಗುತ್ತದೆ ,ಶತ್ರು ಕಾಟ ಜಾಸ್ತಿಯಾಗುತ್ತದೆ, ಸಂಗಾತಿಯೇ ಶತ್ರುವಾಗಿ ಪರಿವರ್ತನೆಯಾಗುತ್ತಾರೆ, ಆರ್ಥಿಕವಾದ ನಷ್ಟ ಅನುಭವಿಸಬೇಕಾಗುತ್ತದೆ, ದರಿದ್ರತನ ವಿಪರೀತವಾಗಿ ಕಾಡುತ್ತದೆ, ಉದ್ಯೋಗದಲ್ಲಿ ನಷ್ಟ, ಉದ್ಯೋಗದಲ್ಲಿ ಅಪವಾದಗಳು, ನಿಂದನೆಗಳು ಬರುತ್ತವೆ, ಹೊಟ್ಟೆಗೆ ಸಂಬಂಧಪಟ್ಟಂತೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಲಿದೆ, ಕಾಲು ನೋವು ಹೆಚ್ಚಾಗಲಿದೆ, ಮೈಕೈ ನೋವು ಹೆಚ್ಚಾಗಲಿದೆ, ದೃಷ್ಟಿ ದೋಷ ಇವೆಲ್ಲವೂ ಸಹ ಹೆಚ್ಚಾಗಲಿದೆ. ಏನು ಮಾಡಲು ಹೋದರೂ ಎಳೆದಾಟಗಳು, ಸೇವಕರ ಕೊರತೆ ಎದುರಾಗಲಿದೆ, ಉದ್ಯೋಗದಲ್ಲಿ ಕೆಲಸ ಸಿಗುವುದಿಲ್ಲ.

ಕಟಕ ರಾಶಿ
ಅನುಕೂಲವಾಗಲಿದೆ, ಮಕ್ಕಳಿಂದ ಅನುಕೂಲ, ಶುಭಕಾರ್ಯಗಳು ಪ್ರಾಪ್ತಿ, ಉದ್ಯೋಗದಲ್ಲಿ ಬದಲಾವಣೆ ಅಥವಾ ಉದ್ಯೋಗ ಯೋಗದಲ್ಲಿ ಅಭಿವೃದ್ಧಿ ಯಾಗಲಿದೆ, ಆದರೆ ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟಂತೆ ಸಣ್ಣದಾಗಿ ಶಸ್ತ್ರಚಿಕಿತ್ಸೆ ಉಂಟಾಗಲಿದೆ.

ಸಿಂಹ ರಾಶಿ 
ಸ್ಥಿರಾಸ್ತಿ ಒಲಿದು ಬರಲಿದೆ, ಸ್ಥಿರಾಸ್ತಿ ಗೋಸ್ಕರ ಸಾಲ ಮಾಡುವ ಸನ್ನಿವೇಶ, ಸಾಲದ ಪ್ರಮಾಣ ಅಧಿಕವಾಗಲಿದೆ, ಮಕ್ಕಳಿಗೋಸ್ಕರ ಸಾಲ , ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ, ಏನಾದರೂ ದೀರ್ಘ ಕಾಲದ ರೋಗ ಬಾಧೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ, ಮಕ್ಕಳಿಂದ ಅಪಮಾನ ಅವಮಾನ ಉಂಟಾಗಲಿದೆ, ಸ್ಥಿರಾಸ್ತಿ ಒಲಿದು ಬರಲಿದೆ, ಸಂಗಾತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಅನುಕೂಲಗಳು, ಶುಭ ಫಲಗಳು ಪ್ರಾಪ್ತಿಯಾಗಲಿದೆ.

 

 

 

ಕನ್ಯಾ ರಾಶಿ
ಅನಿರೀಕ್ಷಿತವಾಗಿ ಅಪವಾದಗಳು ಬರುತ್ತವೆ, ದಾಯಾದಿಗಳ ಕಲಹ ಗಳು ಹೆಚ್ಚಾಗುತ್ತವೆ, ಸ್ಥಿರಾಸ್ತಿ ನಷ್ಟ ,ಸಂಗಾತಿಯಿಂದ ದೂರ ಹೋಗಬೇಕಾಗುತ್ತದೆ ಅಥವಾ ಆ ರೀತಿಯ ಆಲೋಚನೆಗಳು ಬರುತ್ತವೆ, ದೈವನಿಂದನೆ, ಗುರು ನಿಂದನೆ ಇವೆಲ್ಲವೂ ಕೂಡ ಬರುತ್ತವೆ, ದಾಯಾದಿ ಕಲಹ ಗಳು ನೆರೆಹೊರೆಯವರು ಶತ್ರುಗಳಾಗುತ್ತಾರೆ.

ತುಲಾ ರಾಶಿ
ಸ್ಥಿರಾಸ್ತಿ ಗೋಸ್ಕರವಾಗಿ ಸಾಲ ಮತ್ತು ಹಣವನ್ನು ದೊರಕಿಸುವುದು, ವಾಹನವನ್ನು ಕೊಂಡುಕೊಳ್ಳಬೇಕು ಎನ್ನುವ ಪರಿಸ್ಥಿತಿ, ಮಕ್ಕಳಿಗೋಸ್ಕರ ಸಾಲ ಮಾಡಬೇಕು, ಹಣಕಾಸಿನ ಸಮಸ್ಯೆಗಳು, ಆರ್ಥಿಕವಾಗಿ ಅಭಿವೃದ್ಧಿಯಾಗುವುದು ಮತ್ತು ಉತ್ತಮವಾದ ಹೆಸರು ಬರುವುದಕ್ಕೆ ದಾರಿಯಾಗಲಿದೆ.
ವೃಶ್ಚಿಕ ರಾಶಿ
ದಾರಿದ್ರ್ಯತನ ವಿಪರೀತವಾಗಿ ಕಾಡುತ್ತದೆ, ಸೋಮಾರಿತನ ಆಲಸ್ಯ ಹೆಚ್ಚಾಗಲಿದೆ, ಉದ್ಯೋಗದಲ್ಲಿ ಸಮಸ್ಯೆಗಳು ಬರುತ್ತವೆ, ಹಣ ಬರುವುದಿಲ್ಲ, ಮಕ್ಕಳ ಸಮಸ್ಯೆಗಳು ಹೆಚ್ಚಾಗುತ್ತವೆ, ಬೆಳವಣಿಗೆಗಳು ಆಗುವುದಿಲ್ಲ, ತಮ್ಮ ಗೌರವಕ್ಕೆ ಧಕ್ಕೆ ಬರಲಿದೆ, ಒಳ್ಳೆಯತನಕ್ಕೆ ಪೆಟ್ಟು ಬೀಳಲಿದೆ, ಭಾವನೆಗಳಿಗೆ ಧಕ್ಕೆ ಉಂಟಾಗಲಿದೆ.

ಧನಸ್ಸು ರಾಶಿ
ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು, ಕಾಲು ನೋವು, ಮೈಕೈ ನೋವು, ಗ್ಯಾಸ್ಟಿಕ್ ಸಮಸ್ಯೆಗಳು ಬರುತ್ತವೆ, ದೃಷ್ಟಿ ದೋಷಗಳು ಹೆಚ್ಚಾಗುತ್ತವೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸ್ಥಿರಾಸ್ತಿ ನಷ್ಟಗಳು ಜಾಸ್ತಿಯಾಗುತ್ತದೆ.
ಮಕರ ರಾಶಿ
ಲಾಭದ ಪ್ರಮಾಣ ಹೆಚ್ಚಾಗಲಿದೆ, ಸ್ವಂತ ಉದ್ಯಮ, ವ್ಯಾಪಾರ, ವ್ಯವಹಾರವನ್ನು ಯಾರು ಮಾಡುತ್ತಿದ್ದಾರೆ ಅವರೆಲ್ಲರಿಗೂ ಕೂಡ ಲಾಭ ಬರುತ್ತದೆ,ಶನೈಶ್ಚರನು ವ್ಯಯ ಭಾವದಲ್ಲಿ ಇರುವುದರಿಂದ ಬಂದ ಲಾಭವೆಲ್ಲವೋ ಹಾಗೆಯೇ ಹೊರಟು ಹೋಗುತ್ತದೆ, ನಷ್ಟ ಉಂಟಾಗಲಿದೆ,ಪರರ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ ಮತ್ತು ಸಹಕಾರ ದೊರೆಯಲಿದೆ, ಸ್ನೇಹಿತರಿಂದ ಅನುಕೂಲ, ಹಿರಿಯರಿಂದ ಅನುಕೂಲ, ಕೋರ್ಟ್ ಕೇಸ್ ಗಳಲ್ಲಿ ಜಯ ಲಭಿಸಲಿದೆ.

 

ಕುಂಭ ರಾಶಿ
ಉದ್ಯೋಗ ಬದಲಾವಣೆ ಮಾಡುವ ಆಲೋಚನೆಗಳು ಅಥವಾ ದೂರ ಪ್ರದೇಶಕ್ಕೆ ಹೋಗಬೇಕಾಗುವಂತಹ ಆಲೋಚನೆಗಳು ಮೂಡುತ್ತವೆ, ಆರ್ಥಿಕ ವಿಚಾರಕ್ಕೆ ಸಂಬಂಧಪಟ್ಟಂತೆ ನೋಡಿದಾಗ ಎಳೆದಾಟಗಳು ಜಾಸ್ತಿಯಾಗುತ್ತವೆ, ಉದ್ಯೋಗ ಬದಲಾವಣೆ ಮಾಡಬೇಕು ಅಥವಾ ಅತಿ ಹೆಚ್ಚು ಸಂಬಳದ ಉದ್ಯೋಗವನ್ನು ನೋಡಿಕೊಳ್ಳಬೇಕು ಎನ್ನುವ ಆಲೋಚನೆಗಳು ಬರುತ್ತವೆ, ಅವೆಲ್ಲವೂ ಕೂಡ ಯಶಸ್ವಿಯಾಗುತ್ತವೆ. ಅಭಿವೃದ್ಧಿಯನ್ನು ಕಾಣುವ ಯೋಗ ಫಲಗಳು ಲಭಿಸುತ್ತವೆ, ಸ್ಥಿರಾಸ್ತಿ ಒಲಿದು ಬರುತ್ತದೆ ಮತ್ತು ವಾಹನವು ಕೂಡ ಕೂಡಿಬರುತ್ತದೆ.
ಮೀನ ರಾಶಿ 
ಅಭಿವೃದ್ಧಿ ಅನಿಸಿದರೂ ಕೂಡ ಬಂದಂತಹ ಅದೃಷ್ಟ ಕೈ ತಪ್ಪಿ ಹೋಗುತ್ತದೆ, ನಷ್ಟದ ಪ್ರಮಾಣ ಹೆಚ್ಚಾಗಲಿದೆ, ದೈವ ಚಿಂತನೆ, ವಯೋವೃದ್ಧರ ಅಥವಾ ಹಿರಿಯರ ಆರೋಗ್ಯಕ್ಕೆ ಹೆಚ್ಚಾಗಿ ಖರ್ಚು ಮಾಡುವ ಪರಿಸ್ಥಿತಿ, ಉದ್ಯೋಗದಲ್ಲಿ ಅಲೆದಾಟಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುತ್ತದೆ, ಅನಿರೀಕ್ಷಿತ ದುರ್ಘಟನೆಗಳು ಉಂಟಾಗುತ್ತವೆ ಅದಕ್ಕೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ, ಸ್ವಂತ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು, ಪದೇ ಪದೇ ಜ್ವರ ಹೆಚ್ಚಾಗಿ ಬಾಧಿಸಲಿದೆ ,ಜಾಸ್ತಿ ಸೋಮಾರಿತನ ಹೆಚ್ಚಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top