ಮನೋರಂಜನೆ

ತಾಯಿಗೆ ತಕ್ಕ ಮಗ ಚಿತ್ರ ತಂಡದಿಂದ ಅಭಿಮಾನಿಗಳಿಗೆ ಬಂಪರ್ ಆಫರ್,ನಿಮ್ಮ ಅಮ್ಮನ ಜೊತೆ ಸೆಲ್ಫಿ ಕಳಿಸಿ 50,000 ರೂ ಗೆಲ್ಲಿ

ಕನ್ನಡ ಚಿತ್ರ ರಂಗ ದಿನೇ ದಿನೇ ತುಂಬಾ ಎತ್ತರಕ್ಕೆ ಬೆಳೆಯುತ್ತಲಿದೆ,ಎಂತ ಬಾಲಿವುಡ್ ಹಾಲಿವುಡ್ ಚಿತ್ರಗಳಿಗೂ ಟಕರ್ ಕೊಡುವ ಮಟ್ಟಕ್ಕೆ ನಮ್ಮ ಸ್ಯಾಂಡಲ್ ವುಡ್ ಬೆಳೆದಿದೆ ,ಕನ್ನಡದ ಎಷ್ಟೋ ಚಿತ್ರಗಳು ಬೇರೆ ಭಾಷೆಯ ಚಿತ್ರಗಳನ್ನು ಹಿಂದೆ ಹಾಕಿ ಬಾಕ್ಸ್ ಆಫೀಸ್ ಉಡೀಸ್ ಮಾಡಿದ್ದೂ ನಮಗೆಲ್ಲ ಗೊತ್ತೇ ಇದೆ .ಹಾಗೇ ಅನೇಕ ಕುತೂಹಲವಿರುವಂತ ಚಿತ್ರ ತಾಯಿಗೆ ತಕ್ಕ ಮಗ ಅಜಯ್ ,ಆಶಿಕಾ ರಂಗನಾಥ್ ಹಾಗೂ ಸುಮಲತಾ ಅಂಬರೀಷ್ ನಟನೆ ಮಾಡಿರೋ ಈ ಚಿತ್ರ ಬಿಡುಗಡೆಗೆ ವಾರವಷ್ಟೇ ಬಾಕಿ ಉಳಿದಿದೆ.ದೀಗ ಪ್ರೇಕ್ಷಕರಿಗಾಗಿಯೇ ಚಿತ್ರತಂಡ ವಿನೂತನವಾದೊಂದು ಸ್ಪರ್ಧೆಯನ್ನು ಏರ್ಪಡಿಸಿದೆ. ಇದಕ್ಕೆ ತಾಯಿಗೆ ತಕ್ಕ ಮಗ ಸೆಲ್ಫಿ ಕಂಟೆಸ್ಟ್ ಎಂದೂ ಹೆಸರಿಟ್ಟಿದೆ.

 

 

 

ಇದು ಒಂದು ಅಮ್ಮ ಮಗನ ಪ್ರೀತಿಗೆ ಪೂರಕವಾದ ಸ್ಪರ್ಧೆಯಾಗಿದ್ದು ಯಾರೇ ಯಾದರೂ ತಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದುಕೊಂಡು 7338259619ಗೆ ವಾಟ್ಸಪ್ ಮಾಡಬಹುದು. ನಿಮ್ಮ ಫೋಟೋ ಮೊದಲ ಬಹುಮಾನಕ್ಕೆ ಪಾತ್ರವಾದರೆ ಐವತ್ತು ಸಾವಿರ ರೂಪಾಯಿಗಳನ್ನು ಗೆಲ್ಲ ಬಹುದಂತೆ.ಅದು ಒಂದೇ ಬಹುಮಾನವಲ್ಲ ಮೊದಲನೆ ಬಹುಮಾನ 50 ಸಾವಿರ, ಎರಡನೆಯ ಬಹುಮಾನ 25 ಸಾವಿರ, ಮೂರನೇ ಬಹುಮಾನ 15 ಸಾವಿರ ಮತ್ತು ನಾಲಕ್ಕನೇ ಬಹುಮಾನ 10 ಸಾವಿರವೆಂದು ಚಿತ್ರ ತಂಡ ನಿಗದಿ ಮಾಡಿದೆ. ಅಂದಹಾಗೆ ಈ ಸ್ಪರ್ಧೆಗೆ ಫೋಟೋ ಕಳಿಸಲು ನವೆಂಬರ್ 2 ಕಡೆಯ ದಿನಾಂಕ. ನವೆಂಬರ್ 3ರಂದು ಲಕ್ಕಿ ಡ್ರಾ ನಡೆಯಲಿದೆ. ಆ ಬಳಿಕ ಫೇಸ್ ಬುಕ್ ಲೈವ್ ಮೂಲಕ ವಿಜೇತರನ್ನು ಆರಿಸಲಾಗುತ್ತದೆ. ಚಿತ್ರತಂಡಕ್ಕೆ ಸಂಬಂಧಪಟ್ಟವರಿಗೆ ಯಾವ ಕಾರಣಕ್ಕೂ ಈ ಸ್ಪರ್ಧೆಯಲ್ಲಿ ಪ್ರವೇಶವಿಲ್ಲ ಎಂಬ ಸೂಚನೆಯನ್ನೂ ನೀಡಲಾಗಿದೆ.

 

 

 

ಈ ವಿಷಯವನ್ನು ಶಶಾಂಕ್ ಅವರ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು ಸುಮಲತಾ ಅಂಬರೀಷ್ ಇದಕ್ಕೆ ನನ್ನ ಮಗ ಅಭಿಷೇಕ್ ಅಂಬರೀಷ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾ ,ಅಭಿಷೇಕ್ ಬಳಿ ಅವರ ಅಮ್ಮನ ಜೊತೆ ಗಿನ ಸೆಲ್ಫಿ ತುಂಬಾ ಇದೆ ಎಂದು ನಗುವಿನ ಸಿಂಬಲ್ ಹಾಕಿದ್ದಾರೆ ಮತ್ತೆ ಯಾಕೆ ತಡ ನೀವು ನಿಮ್ಮ ಅಮ್ಮನ ಜೊತೆಗಿನ ಫೋಟೋ ಕಳಿಸಿ ಹಣ ಗೆಲ್ಲಿ ,ಆಲ್ ದಿ ಬೆಸ್ಟ್.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top