ಮನೋರಂಜನೆ

“ಸನ್ನಿ ಲಿಯೋನ್ ವಿರುದ್ಧ ಪ್ರತಿಭಟನೆ ನಡೆಸಿದ್ರೆ ಕ್ರಮ ಕೈಗೊಳ್ಳುತ್ತೀವಿ” ಪೊಲೀಸ್ ವಾರ್ನಿಂಗ್.

ಬಾಲಿವುಡ್ ನಟಿ ಸನ್ನಿ ಲಿಯೊನಿ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಪ್ರತಿಭಟನೆ ಶುರುವಾಗಿದೆ..ಇದರ ಬೆನ್ನಲ್ಲೆ ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸಬಾರದು ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್​ ಮುತಾಲಿಕ್​ ಕೂಡ ಸನ್ನಿಗೆ ವಿರೋಧ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರು ಬೇಕಾದರೂ ಯಾವ ಚಿತ್ರದಲ್ಲಾದರೂ ನಟನೆ ಮಾಡಬಹುದು.. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ.. ಒಂದು ವೇಳೆ ಸನ್ನಿ ಲಿಯೋನ್ ನಟನೆಯ ವೀರಮಹಾದೇವಿ ಸಿನಿಮಾ ವಿರುದ್ಧ ಯಾರೇ ಪ್ರತಿಭಟನೆ ನಡೆಸಿದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.

ವೀರಮಹಾದೇವಿ ಚಿತ್ರದ ಬಗ್ಗೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮುತಾಲಿಕ್ “ವೀರ ಮಹಾದೇವಿ ಐತಿಹಾಸಿಕ ಚಿತ್ರವಾಗಿದ್ದು ಇದರಲ್ಲಿ ಸನ್ನಿ ಲಿಯೋನ್ ನಟಿಸಬಾರದು.. ಇದು ನಮ್ಮ ಸಂಸ್ಕೃತಿ ವಿಚಾರ. ಹೀಗಾಗಿ ನಾವು ಅದನ್ನ ವಿರೋಧಿಸ್ತೀವಿ. . ವೀರ ಮಹಾದೇವಿ ಚಿತ್ರದ ಚಿತ್ರೀಕರಣಕ್ಕೆ ಸಂಸ್ಕಾರವಿಲ್ಲದ ಸನ್ನಿ ಲಿಯೋನ್ ಪಾತ್ರ ಮಾಡುತ್ತಿರುವುದು ಖಂಡನೀಯ. ಇತಿಹಾಸಕ್ಕೆ ಕಳಂಕ ತರುವುದನ್ನು ನಾವು ಒಪ್ಪುವುದಿಲ್ಲ.. ಗೂಗಲ್ ನಲ್ಲಿ ಸನ್ನಿ ಲಿಯೋನ್ ಹೆಸರು ಟೈಪ್ ಮಾಡಿದರೆ ಬರೀ ನೀಲಿ ಚಿತ್ರಗಳೇ ಸಿಗುತ್ತವೆ.. ವೀರಮಹಾದೇವಿ ಚಿತ್ರದಿಂದ ಸನ್ನಿ ಲಿಯೋನ್ ಕೈ ಬಿಡಬೇಕು. ಇಲ್ಲದಿದ್ದರೆ ಯಾವುದೇ ಥಿಯೇಟರಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದರು. ಅಂದಹಾಗೆ ವೀರ ಮಹಾದೇವಿ ಚಿತ್ರ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಒಟ್ಟು 100 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top