ಮನೋರಂಜನೆ

ಸನ್ನಿ ಲಿಯೋನ್​ ಹೆಸರನ್ನ ಗೂಗಲ್ ಮಾಡಿದ್ರೆ ಬರೀ ನೀಲಿ ಚಿತ್ರಗಳೇ ಸಿಗುತ್ತವೆ- ಸನ್ನಿ ವಿರುದ್ಧ ಮುತಾಲಿಕ್ ಆಕ್ರೋಶ.

ಬಾಲಿವುಡ್ ನಟಿ ಸನ್ನಿ ಲಿಯೊನಿ ವಿರುದ್ಧ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಪ್ರತಿಭಟನೆ ಶುರುವಾಗಿದೆ..ಇದರ ಬೆನ್ನಲ್ಲೆ ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸಬಾರದು ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್​ ಮುತಾಲಿಕ್​ ಕೂಡ ಸನ್ನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ವೀರಮಹಾದೇವಿ ಚಿತ್ರದ ಬಗ್ಗೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮುತಾಲಿಕ್ “ವೀರ ಮಹಾದೇವಿ ಐತಿಹಾಸಿಕ ಚಿತ್ರವಾಗಿದ್ದು ಇದರಲ್ಲಿ ಸನ್ನಿ ಲಿಯೋನ್ ನಟಿಸಬಾರದು.. ಇದು ನಮ್ಮ ಸಂಸ್ಕೃತಿ ವಿಚಾರ. ಹೀಗಾಗಿ ನಾವು ಅದನ್ನ ವಿರೋಧಿಸ್ತೀವಿ. . ವೀರ ಮಹಾದೇವಿ ಚಿತ್ರದ ಚಿತ್ರೀಕರಣಕ್ಕೆ ಸಂಸ್ಕಾರವಿಲ್ಲದ ಸನ್ನಿ ಲಿಯೋನ್ ಪಾತ್ರ ಮಾಡುತ್ತಿರುವುದು ಖಂಡನೀಯ. ಇತಿಹಾಸಕ್ಕೆ ಕಳಂಕ ತರುವುದನ್ನು ನಾವು ಒಪ್ಪುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಗೂಗಲ್ ನಲ್ಲಿ ಸನ್ನಿ ಲಿಯೋನ್ ಹೆಸರು ಟೈಪ್ ಮಾಡಿದರೆ ಬರೀ ನೀಲಿ ಚಿತ್ರಗಳೇ ಸಿಗುತ್ತವೆ.. ವೀರಮಹಾದೇವಿ ಚಿತ್ರದಿಂದ ಸನ್ನಿ ಲಿಯೋನ್ ಕೈ ಬಿಡಬೇಕು. ಇಲ್ಲದಿದ್ದರೆ ಯಾವುದೇ ಥಿಯೇಟರಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಂದಹಾಗೆ ವೀರ ಮಹಾದೇವಿ ಚಿತ್ರ ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಒಟ್ಟು 100 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top