fbpx
ಸಮಾಚಾರ

ಜಡ್ಜ್‌ಗೆ ಲಂಚ ಕೊಟ್ಟ ಆರೋಪ ಹೊತ್ತಿದ್ದ ಶ್ರೀರಾಮುಲು ಈಗ ಯಡಿಯೂರಪ್ಪರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆಯೇ?

ಗಣಿ ಹಗರಣದಲ್ಲಿ ಆರೋಪಿಯಾದ ಮಾಜಿ ಸಚಿವ ಜನಾರ್ದನ ರೆಡ್ಡಿ ಪರ ತೀರ್ಪು ನೀಡಲು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗೆ ಬಿಜೆಪಿ ಮುಖಂಡ ಬಿ ಶ್ರೀರಾಮುಲು ಅವರು ೧೬೦ ಕೋಟಿ ರುಪಾಯಿ ಲಂಚ ನೀಡುವ ಸಂಬಂಧ ಮಾತುಕತೆ ನಡೆಸಿದ್ದರು ಎಂಬ ಆರೋಪ ಬಿಜೆಪಿ ಮುಖಂಡ ಶ್ರೀರಾಮುಲು ಅವರ ಮೇಲೆ ಬಂದಿತ್ತು. ಅದಕ್ಕೆ ಸಂಭಂದಿಸಿದ್ದ ದೃಶ್ಯಗಳನ್ನು ಖಾಸಗಿ ಸುದ್ದಿವಾಹಿನಿ ಪ್ರಸಾರ ಮಾಡಿತ್ತು.. ಇಂಥಾ ಕೆಲಸಕ್ಕೆ ಕೈ ಹಾಕಿ ಪಕ್ಷಕ್ಕೆ ಮುಜುಗರ ತಂದಿದ್ದ ಮಾಸ್ಟರ್ ಮೈಂಡ್ ಶ್ರೀರಾಮುಲು ಈಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನೇ ಸೆಡ್ ಲೈನ್ ಮಾಡಲು ಹೊರಟಿದ್ದಾರಾ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

 

 

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಒಂದೇ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಮುಲು ಅವರೇ ಉಪಮುಖ್ಯಮಂತ್ರಿ ಎಂಬ ಮಾತುಗಳು ಕೇಳಿಬಂದಿದ್ದವು. ಚುನಾವಣೆಯ ನಂತರ 104 ಸ್ಥಾನಗಳನ್ನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಉಪಮುಖ್ಯಮಂತ್ರಿಯಾಗುವ ಆಸೆಯಲ್ಲಿದ್ದ ರಾಮುಲು ಆಗ ಸರ್ಕಾರ ರಚಿಸಲು ಆಪರೇಷನ್ ಕಮಲದಂತಹ ಕಾರ್ಯಗಳಿಗೆ ಚಾಲನೆ ಕೊಟ್ಟಿದ್ದರು ಎನ್ನಲಾಗಿತ್ತು. ಏನೇ ಮಾಡಿದರೂ ಸರ್ಕಾರ ರಚಿಸಲು ಸಾಧ್ಯವಾಗದೇ ಹೋದಾಗ ಕೊನೆಯಲ್ಲಿ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದರು.

 

 

ಆ ನಂತರ ಅನೇಕ ವೇಳೆ ಸರ್ಕಾರವನ್ನು ಉರುಳಿಸಲು ಪ್ರಯತ್ನವನ್ನೂ ಪಡಲಾಗಿತ್ತು ಆದರೆ ಯಾವುದು ಸಕ್ಸಸ್ ಆಗಿರಲಿಲ್ಲ. ಇದೀಗ ಎದುರಾಗಿರುವ ಉಪಚುನಾವಣೆಯಲ್ಲೂ ಯಡಿಯೂರಪ್ಪನವರಿಗಿಂತ ತಮ್ಮ ಹೆಸರೇ ಎಲ್ಲೆಲ್ಲೂ ಹೆಚ್ಚು ಕೇಳಿಬರುವಂತೆ ರಾಮುಲು ನೋಡಿಕೊಂಡಿದ್ದಾರೆ ಎನ್ನಲಾಗಿದ್ದು ಅದಕ್ಕಾಗಿ ಈ ಉಪಚುನಾವಣೆ ಸಮ್ಮಿಶ್ರ ಸರ್ಕಾರ vs ಶ್ರೀರಾಮುಲು ಎಂದೇ ಫೇಸ್ಬುಕ್ ಗಳಲ್ಲಿ ರಾಮುಲು ಬೆಂಬಲಿಗರು ಬಿಂಬಿಸುತ್ತಿದ್ದಾರೆ..

ಅಷ್ಟೇ ಅಲ್ಲದೆ ಮಾಜಿ ಸಚಿವ ವಿ.ಸೋಮಣ್ಣ ನೀಡಿರುವ “ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಮುಖ್ಯಮಂತ್ರಿ” ಎಂಬ ಹೇಳಿಕೆ ರಾಮುಲು ಡಾಮಿನೇಟ್ ಮಾಡ್ತಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ. ದಿಢೀರ್ ಆಗಿ ಸಿಎಂ ಕುರ್ಚಿಗೆ ರಾಮುಲು ಹೆಸರು ತಂದಿದ್ದು ಏಕೆ ಪ್ರಶ್ನೆ ಇದೀಗ ಎದ್ದಿದೆ. ವಿ.ಸೋಮಣ್ಣ ಅವರ ಈ ಹೇಳಿಕೆ ಉದ್ದೇಶಪೂರ್ವಕವೋ? ಮಾತಿನ ಭರದಲ್ಲಿ ಕೊಟ್ಟ ಹೇಳಿಕೆಯೇ ಎನ್ನುವ ಚರ್ಚೆಗಳು ಆರಂಭವಾಗಿದೆ. ಆ ಒಂದು ಹೇಳಿಕೆಯಿಂದ ಬಿಜೆಪಿಯಲ್ಲಿ ಇದೀಗ ಅಸಮಾಧಾನ ಭುಗಿಲೆದ್ದಿದ್ದು, ಈ ಮೂಲಕ ಸೋಮಣ್ಣ ಹೇಳಿಕೆ ಹಿಂದೆ ಶ್ರೀರಾಮುಲು ಇದ್ದಾರಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಮುಂದಿನ 2019ರ ಲೋಕಸಭೆ ಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರು ಪಕ್ಷದಲ್ಲಿ ಮೂಲೆಗುಂಪು ಆಗುತ್ತಾರೆ ಎಂಬ ಮಾತುಗಳು ಪಕ್ಷದಲ್ಲಿ ಹರಿದಾಡುತ್ತಿವೆ. ಪಕ್ಷದಲ್ಲಿ ಯಾವಾಗಲೂ ತಾನು ಪ್ರಾಮುಖ್ಯನಾಗಿರಬೇಕೆಂಬ ಅವರ ಹತಾಶೆ ಯತ್ನ ಅವರಿಗೆ ಮುಳುವಾಗುವ ಸಾಧ್ಯತೆಯೇ ಹೆಚ್ಚು ಎಂದು ಪಕ್ಷದ ಆಂತರಿಕ ಮೂಲಗಳು ಹೇಳುತ್ತವೆ.. ಅದಕ್ಕೆ ಪೂರಕವೆಂಬಂತೆ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲು ಶ್ರೀರಾಮಲು ಅವರೇ ಒಳಗೊಳಗೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ..

ಕಳೆದ ಚುನಾವಣೆಯಲ್ಲಿ ಉಪಮುಖ್ಯಮಂತ್ರಿಯಾಗುವ ಕನಸಿನಲ್ಲಿದ್ದ ರಾಮುಲು ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಾದ್ಯವಾದರೆ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರವನ್ನು ಉರುಳಿಸಿ ಮುಖ್ಯಮಂತ್ರಿಯಾಗುವ ಆಸೆಯನ್ನು ಹೊಂದಿದ್ದಾರಂತೆ. ಅದಕ್ಕಾಗಿಯೇ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಯಾವಸ್ಸಿನ ನೆಪವೊಡ್ಡಿ ಯಡಿಯೂರಪ್ಪರನ್ನು ಸೆಡ್ ಲೈನ್ ಮಾಡುವ ಷಡ್ಯಂತ್ರ ಮಾಡಲಾಗಿದೆ ಎನ್ನಲಾಗಿದೆ.

2019ರ ಲೋಕಸಭಾ ಚುನಾವಣಾ ಬಳಿಕ ಬಿಎಸ್​ವೈ ಅವರನ್ನು ಮೂಲೆಗುಂಪು ಮಾಡಿ, ಬೇರೆಯವರಿಗೆ ಪಟ್ಟಕಟ್ಟುವುದರಲ್ಲಿ ಸಂಶಯವಿಲ್ಲ ಎನ್ನುತ್ತಿದೆ ರಾಜಕೀಯ ಪಂಡಿತರ ಲೆಕ್ಕಚಾರಗಳು.. ಹಾಗಾಗಿ ಪಟ್ಟ ಕಟ್ಟಿಸಿಕೊಳ್ಳುವ ಆ ಬೇರೆಯವರು ಯಾಕೆ ನಾನೇ ಆಗಬಾರದು ಎಂಬುದು ಶ್ರೀರಾಮುಲು ಲೆಕ್ಕಾಚಾರ ಆಗಿದೆ ಎನ್ನಲಾಗಿದೆ. ಅಲ್ಲಿಯತನಕ ಬಿಎಸ್​ವೈ ಅವರ ವರ್ಚಿಸಿನ ಮೇಲೆ ಬಿಜೆಪಿ ಮತ ಕೇಳಲಿದೆ.. ಈಗಾಗಲೇ ಫೇಸ್ಬುಕ್ ನಲ್ಲಿ ಮುಂದಿನ ಮುಖ್ಯಮಂತ್ರಿ ನಮ್ಮ ಶ್ರೀರಾಮುಲು ಎಂಬ ಪುಟಗಳು ತೆರೆದುಕೊಂಡಿದ್ದು ಭರ್ಜರಿಯಾಗಿ ಕಾರ್ಯವನ್ನು ಆರಂಭಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top