fbpx
ದೇವರು

ಸೋಮವಾರ ಹಾಗೂ ಶನಿವಾರದ ದಿನ ಮಾಂಸಹಾರ ಸೇವನೆ ಮಾಡ್ಬಾರ್ದು ಅಂತ ಯಾಕೆ ಹೇಳ್ತಾರೆ ಗೊತ್ತಾ ,ಅದರ ಹಿಂದಿರುವ ಕಾರಣ ಏನ್ ಗೊತ್ತಾ

ಸೋಮವಾರ ಶಿವನ ಆರಾಧನೆ ಮಾಡುವ ದಿನ , ಶನೈಶ್ವರ ಅಥವಾ ಆಂಜನೇಯನನ್ನು ಆರಾಧನೆ ಮಾಡುವ ದಿನ ಶನಿವಾರ,ಈ ಎರಡು ದಿನ ಮಾಂಸಹಾರ ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಮಾಂಸಹಾರವನ್ನು ಸೇವನೆ ಮಾಡಿದರೆ ಕಷ್ಟಗಳು ಬರುತ್ತವೆ ಎಂದು ಹೇಳಲಾಗುತ್ತದೆ. ಬನ್ನಿ ಇದರ ಬಗ್ಗೆ ತಿಳಿದುಕೊಳ್ಳೋಣ.

ಆಧ್ಯಾತ್ಮಿಕವಾಗಿ ನಾವು ನೋಡಿದಾಗ, ಮಾಂಸಾಹಾರ ಸೇವನೆ ಮಾಡುವುದು ಅವರವರ ಇಷ್ಟಕ್ಕೆ ಬಿಟ್ಟಿದ್ದು. ಅದು ನಿಜ. ಆದರೆ ಕುಲ ದೇವರು ಎನ್ನುವುದು ಇರುತ್ತದೆ.ಒಬ್ಬ ಮನುಷ್ಯ ಜೀವನದಲ್ಲಿ ಅನುಕೂಲಗಳನ್ನು ಪಡೆಯಬೇಕು, ಹಂತ ಹಂತವಾಗಿ ಅಭಿವೃದ್ಧಿಯತ್ತ ಹೋಗಬೇಕು, ಮಾಡುವ ಕೆಲಸ ಕಾರ್ಯಗಳಲ್ಲಿ ವಿಘ್ನಗಳು ಬರಬಾರದು , ಅಭಿವೃದ್ಧಿಯನ್ನು ಹೊಂದಬೇಕು ಎನ್ನುವವರು ಆಧ್ಯಾತ್ಮಿಕವಾಗಿ ಮೊರೆ ಹೋಗುತ್ತಾರೆ.ಅದನ್ನು ನಾವೆಲ್ಲರೂ ಗಮನಿಸಿದ್ದೇವೆ, ಇಂದು ನಾವೆಲ್ಲರೂ ನಮ್ಮ ಮನೆಯ ದೇವರು ಶಿವ ಅಥವಾ ವಿಷ್ಣುವೇ ಆಗಿರುತ್ತಾನೆ. ಇವರಿಬ್ಬರಲ್ಲಿ ಶಿವನಿಗೆ ಬೇರೆ ಬೇರೆ ಹೆಸರಲ್ಲಿ ಇರುವ ಎಲ್ಲಾ ದೇವರುಗಳು ಇರುತ್ತವೆ, ಆದರೆ ಈ ಶಿವ ನಿಮ್ಮ ಮನೆಯ ದೇವರಾಗಿದ್ದರೆ, ಸೋಮವಾರದ ದಿನ ಮಾಂಸಾಹಾರವನ್ನು ತ್ಯಜಿಸಬೇಕು ಎಂದು ಹೇಳುತ್ತದೆ ಆಧ್ಯಾತ್ಮಿಕತೆ.

 

 

 

ಇದರ ಜೊತೆಗೆ ನಿಮ್ಮ ಮನೆಯ ದೇವರು ವಿಷ್ಣು ಆಗಿದ್ದರೆ, ಸಂಪ್ರದಾಯದ ಪ್ರಕಾರ ನಾರಾಯಣ ,ಆಂಜನೇಯ ಮಹಾಲಕ್ಷ್ಮಿ, ರಂಗನಾಥ ಸ್ವಾಮಿ ಇರಬಹುದು ವಿಷ್ಣುಗೆ ಸಂಬಂಧಪಟ್ಟ ದೇವತೆಗಳು ನಿಮ್ಮ ಮನೆಯ ದೇವರಾಗಿದ್ದರೆ ಶನಿವಾರ ಯಾವುದೇ ಕಾರಣಕ್ಕೂ ನೀವು ಮಾಂಸಹಾರವನ್ನು ಸೇವಿಸಬಾರದು ಎಂದು ಹೇಳುತ್ತದೆ ಆಧ್ಯಾತ್ಮಿಕತೆ.ಆದರೆ ಈ ವಿಚಾರದ ಬಗ್ಗೆ ನಾವು ನೋಡಿದಾಗ, ಆಹಾರದ ಬಗ್ಗೆ ಇದೇ ಸರಿ ಎಂದು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ವ್ಯವಸ್ಥಿತವಾಗಿ ಆಧ್ಯಾತ್ಮಿಕತೆಯನ್ನು ನಾವು ನೋಡಿದಾಗ ಮಾಡುವ ವ್ರತ ಯಜ್ಞ-ಯಾಗಾದಿಗಳು ಅನುಕೂಲವಾಗಬೇಕು ಎಂದರೆ ವೇದದಲ್ಲಿ, ಆಗಮದಲ್ಲಿ, ಉಪನಿಷತ್ತುಗಳಲ್ಲಿ ಮಾಂಸಾಹಾರವನ್ನು ತ್ಯಜಿಸು ಎಂದು ಹೇಳುತ್ತದೆ. ಇದನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡು ಬಂದಾಗ ಯಜ್ಞ ಯಾಗಾದಿಗಳ ಪಲಗಳು ಅತಿ ಶೀಘ್ರವಾಗಿ ನಿಮಗೆ ಲಭ್ಯವಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top