fbpx
ಅರೋಗ್ಯ

ಕೆಂಪಕ್ಕಿಯಲ್ಲಿರೋ ಪೋಷಕಾಂಶಗಳ ಬಗ್ಗೆ ಗೊತ್ತಾದ್ರೆ ಬಿಳಿ ಅಕ್ಕಿ ಸಹವಾಸ ಬೇಡ ಅಂತೀರಾ.

ದಕ್ಷಿಣ ಭಾರತ ದವರಿಗೆ ಊಟದಲ್ಲಿ ಅನ್ನ ಇಲ್ಲವೆಂದರೆ ಆ ಊಟ ಪರಿಪೂರ್ಣ ಅಲ್ಲ ,ಅಕ್ಕಿಯಲ್ಲಿ ವಿವಿಧ ವಿಧಗಳಿದ್ದು ಜನರು ಪಾಲಿಶ್ ಮಾಡಿದ ಬಿಳಿ ಅಕ್ಕಿ ಕಡೆಗೆ ಹೆಚ್ಚು ಮೋಹವನ್ನು ತೋರಿಸುತ್ತಾರೆ ಆದರೆ ನಾವು ಕೆಂಪಕ್ಕಿಯಲ್ಲಿರುವ ಈ ಗುಣಗಳನ್ನು ಬಿಳಿ ಅಕ್ಕಿಯ ಜೊತೆ ಹೋಲಿಸಿ ನೋಡಬೇಕಾಗುತ್ತದೆ .

ಹಾಗಾದರೆ ಕೆಂಪಕ್ಕಿ ಯಾವ ರೀತಿಯಲ್ಲಿ ನಮಗೆ ತುಂಬಾ ಒಳ್ಳೆಯದು ಬನ್ನಿ ತಿಳಿದುಕೊಳ್ಳೋಣ.

ಬಿಳಿ ಅಕ್ಕಿಯನ್ನು ತಯಾರಿಸುವಾಗ ಮೇಲಿನ ಪದರವನ್ನು ತೆಗೆಯುತ್ತಾರೆ ಈ ಪದರದಲ್ಲಿ ಆ್ಯಂಟಿಆಕ್ಸಿಡೆಂಟ್ ವಿಟಮಿನ್ ಬಿ ಹಾಗೂ ಫೈಬರ್ ಅಂಶ ಬಹಳ ಹೆಚ್ಚಾಗಿರುತ್ತದೆ ಅಷ್ಟೇ ಅಲ್ಲದೆ ಕಾರ್ಬೋಹೈಡ್ರೇಟ್ ಸ್ವಲ್ಪ ಮಟ್ಟಿನ ಕೊಬ್ಬಿನ ಅಂಶ ಮಿನರಲ್ ಅಂಶವೂ ಇರುತ್ತದೆ .

 

 

 

ಕೆಂಪಕ್ಕಿಯನ್ನು ಬಿಳಿ ಅಕ್ಕಿಯ ಜೊತೆಗೆ ಹೋಲಿಸಿ ನೋಡಿದರೆ ಎರಡರಷ್ಟು ಹೆಚ್ಚಿನ ಪಾಸ್ಪರಸ್ ಹಾಗೂ ಮ್ಯಾಂಗನೀಸ್ ಅಂಶಗಳು ಇರುತ್ತವೆ .ಕೆಂಪಕ್ಕಿಯಲ್ಲಿರುವ ಸೆಲೆನಿಯಂ ಅಂಶವೂ ಹೃದಯ ನಾಳಗಳನ್ನು ಬಲಪಡಿಸುತ್ತದೆ ಅಲ್ಲದೆ ಹೃದಯ ನಾಳಗಳಲ್ಲಿ ಅನಾವಶ್ಯಕ ಕೊಬ್ಬು ಸೇರಿಕೊಳ್ಳುವುದು ತಡೆಯುತ್ತದೆ ಅಷ್ಟೇ ಅಲ್ಲದೆ ಅನೇಕ ಹೃದಯ ಸಮಸ್ಯೆಗಳಿಗೂ ಇದು ರಾಮಬಾಣ ಕ್ಯಾನ್ಸರ್ ಅಂತಹ ಸಮಸ್ಯೆಗೂ ಇದು ರಾಮಬಾಣ .ಕೆಂಪಕ್ಕಿಯಲ್ಲಿರುವ ಫೈಬರ್ ಅಂಶವು ಹೊಟ್ಟೆಯ ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತದೆ ಅಷ್ಟೇ ಅಲ್ಲದೆ ಕೆಂಪಕ್ಕಿಯನ್ನು ನಿತ್ಯವೂ ಸೇವಿಸುತ್ತಾ ಬಂದರೆ ಕ್ಯಾಲೋರಿ ಕಡಿಮೆಯಾಗಿ ದೇಹದ ತೂಕ ಇಳಿಯುತ್ತದೆ .ಕೆಂಪಕ್ಕಿ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಮಿತವಾಗಿ ಕಾಪಾಡಿಕೊಂಡು ಬರುತ್ತದೆ ಇದರಿಂದ ಸಕ್ಕರೆ ಕಾಯಿಲೆಯ ಅಪಾಯವೂ ಇರುವುದಿಲ್ಲ .ಕೆಂಪಕ್ಕಿಯಲ್ಲಿರುವ ಮ್ಯಾಂಗನೀಸ್ ಹಾಗೂ ಪಾಸ್ಪರಸ್ ಅಂಶಗಳು ನರಮಂಡಲವನ್ನು ವೃದ್ಧಿಗೊಳಿಸುತ್ತದೆ ಹಾಗೂ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕೆಂಪಕ್ಕಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಬಹಳ ಹೆಚ್ಚಾಗಿದ್ದು ಇದು ಚರ್ಮ ರೋಗವನ್ನು ತಡೆಯುತ್ತದೆ ಅಷ್ಟೇ ಅಲ್ಲದೇ ಹೊಳೆಯುವ ಚರ್ಮವನ್ನು ನೀಡುತ್ತದೆ ಹಾಗೂ ಕೂದಲ ಕಾಂತಿಯನ್ನು ಕಾಪಾಡಿಕೊಂಡು ಹೋಗುತ್ತದೆ .

 

 

 

ಕೆಂಪಕ್ಕಿ ಯಲ್ಲಿರುವ ಮ್ಯಾಂಗನೀಸ್ ಅಂಶವು ಮೂಳೆಗಳ ಬೆಳವಣಿಗೆಗೆ ಬಹಳ ಮುಖ್ಯವಾದದ್ದು ನಿಯಮಿತವಾಗಿ ಸೇವಿಸುತ್ತಾ ಬಂದರೆ ಹಲ್ಲುಗಳು ಹಾಗೂ ಮೂಳೆಗಳು ಬಲವಾಗುತ್ತವೆ.ಕೆಂಪಕ್ಕಿಯಲ್ಲಿ ಫೋಲೇಟ್ ಅಂಶವು ಬಹಳ ಹೆಚ್ಚಾಗಿದ್ದು ಇದು ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಬಹಳ ಒಳ್ಳೆಯದು ಇದು ಬಾಣಂತಿಯರಲ್ಲಿ ಹಾಲು ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top