fbpx
ಮನೋರಂಜನೆ

ನಟಿ ಶೃತಿ ಹರಿಹರನ್ ನಿಂದಕರಿಗೆ ಕಾದಿದೆಯಂತೆ ಮಾರಿಹಬ್ಬ

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ.. ಅರ್ಜುನ್ ಸರ್ಜಾ ಅವರನ್ನು ಸಮರ್ಥಿಸುವ ಭರದಲ್ಲಿ ಶೃತಿ ಹರಿಹರನ್ ನಡತೆ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವು ನಿರ್ಮಾಪಕರು, ನಟರು, ಜನಸಾಮಾನ್ಯರು ಮಿತಿಮೀರಿ ವರ್ತಿಸುತ್ತಿದ್ದಾರೆ. ಅಂತೆಯೇ ಶೃತಿಯನ್ನು ಸಮರ್ಥಿಸುವ ಭರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಸ್ರೀಪೀಡಕನ ಪಟ್ಟ ಕಟ್ಟುವ ಕೆಲಸವೂ ಚಾಲ್ತಿಯಲ್ಲಿದೆ.

ಇಬ್ಬರೂ ಕಾನೂನಿನ ಮೊರೆ ಹೋಗಿದ್ದಾರೆ.ಅರ್ಜುನ್ ಮೊನ್ನೆಯಷ್ಟೇ ಶ್ರುತಿ ಹರಿಹರನ್​ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಇದರ ಬೆನ್ನಲ್ಲೇ ಶ್ರುತಿ ಹರಿಹರನ್​ ಕೂಡ ಅರ್ಜುನ್ ಸರ್ಜಾ ಮತ್ತು ಅವರ ಆಪ್ತರ ವಿರುದ್ಧ ದೂರು ನೀಡಿದ್ದಾರೆ.ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ,ಶೃತಿ ಹರಿಹರನ್ ಸುಮಾರು 5 ಪುಟಗಳಲ್ಲಿ ದೂರನ್ನು ನೀಡಿದ್ದಾರೆ. ಶೃತಿ ಹರಿಹರನ್ ದೂರು ನೀಡಿದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು) 354(ಅತ್ಯಾಚಾರ ಉದ್ದೇಶದಿಂದ ಹಲ್ಲೆ), 354ಎ(ಲೈಂಗಿಕವಾಗಿ ಸಹಕರಿಸಲು ಒತ್ತಾಯ) ಅಡಿ ಎಫ್‍ಐಆರ್ ದಾಖಲಾಸಿದ್ದಾರೆ.

 

 

 

ಈ ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿರುವ ಅನೇಕ ಮಂದಿ ಶ್ರುತಿ ಹರಿಹರನ್ ಒಬ್ಬ ನಟಿ ಹಾಗೂ ಹೆಣ್ಣು ಎಂದು ಲೆಕ್ಕಿಸದೆ ಅಸಭ್ಯ ಪದಗಳಿಂದ ಕಾಮೆಂಟ್ ಮಾಡುವುದಲ್ಲದೆ ಅವರ ಫೋನಿಗೆ ಕಾಲ್ ಮಾಡಿ ಕೆಟ್ಟ ಕೆಟ್ಟ ದಾಗಿ ಮಾತನಾಡುತ್ತಿದ್ದಾರೆ ಇದರಿಂದ ಬೇಸತ್ತ ಶ್ರುತಿ ಅವರುಗಳ ವಿರುದ್ದವೂ ಕಠಿಣ ಕ್ರಮ ಕೈ ಗೊಳ್ಳಲು ಯೋಚಿಸಿದ್ದಾರೆ.
ಪ್ರಕರಣ ಬಳಿಕ ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ನಕಲಿ ಅಕೌಂಟ್ ತೆರೆದು ಶೃತಿಗೆ ನಿಂದನೆ ಮಾಡಲಾಗುತ್ತಿದೆ. ಅಲ್ಲದೇ ಅಶ್ಲೀಲ ಪದಗಳನ್ನು ಬಳಸಿ ತೇಜೋವಧೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಂದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈಂ ಗೆ ಇಂದು ದೂರು ನೀಡಲಾಗುತ್ತದೆ. ನಟಿ ಶೃತಿ ಹರಿಹರನ್ ಪರವಾಗಿ ದೂರು ನೀಡಲು ಅವರ ಮ್ಯಾನೇಜರ್ ತೀರ್ಮಾನಿಸಿದ್ದಾರೆ.ಇದಕ್ಕೆ ಸಂಬಂಧ ಪಟ್ಟಂತೆ ಖಾಸಗಿ ವಾಹಿನಿ ಜೊತೆ ಮಾತನಾಡಿದ ಶ್ರುತಿ ಹರಿಹರನ್ ಆಪ್ತ ಹೇಳಿದು ಇಷ್ಟು “ಈ ಬಗ್ಗೆ ನಾವು ಕೇಸ್ ದಾಖಲಿಸಿದ ಬಳಿಕವೂ ಕೆಲವರು ಸಾಮಾಜಿಕ ಜಾಲತಾಣವನ್ನು ತೀರಾ ಅತಿಯಾಗಿ ಬಳಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಶೃತಿ ಅವರ ಪರ್ಸನಲ್ ಫೋನ್ ನಂಬರಿಗೂ ಅಸಹ್ಯಕರವಾದ ಮೆಸೇಜ್ ಗಳನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ಯಾರು ಶೃತಿ ಅವರ ವಿರುದ್ಧ ವೈಯಕ್ತಿಕವಾಗಿ ನಿಂದನೆಗಿಳಿದಿದ್ದಾರೆ ಅವರ ವಿರುದ್ಧ ದೂರು ದಾಖಲಿಸಬೇಕು ಅಂತ ತೀರ್ಮಾನ ಮಾಡಿದ್ದೇವೆ. ಹಾಗೆಯೇ ಶೃತಿ ಅವರ ಮ್ಯಾನೇಜರ್ ಮುಖಾಂತರ ಇಂದು ಈ ಕಂಪ್ಲೇಂಟ್ ದಾಖಲಿಸುತ್ತೇವೆ ಅಂದ್ರು”.

“ಈಗಾಗಲೇ ಪ್ರಕರಣ ಸಂಬಂಧ ಇಬ್ಬರು ನಟರೂ ಕಾನೂನಾತ್ಮಕವಾಗಿಯೇ ಎದುರಿಸುತ್ತಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಒಂದು ಹೆಣ್ಣು ಮಗಳನ್ನು ಹೀನಾಯವಾಗಿ ನಿಂದಿಸುವುದು ಸರಿಯಿಲ್ಲ. ಅವರ ಅಭಿಪ್ರಾಯವನ್ನು ಆರೋಗ್ಯಕರವಾಗಿ ಚರ್ಚೆ ಮಾಡಲಿ. ಅದನ್ನು ನಾವು ಬೇಡ ಅನ್ನಲ್ಲ. ಆದ್ರೆ ಅದು ಆರೋಗ್ಯಕರವಾಗಿರಲಿ. ಸೊಂಟದ ಕೆಳಗಿನ ಭಾಷೆಗಳನ್ನು ಬಳಸುವ ಮೂಲಕ ಓರ್ವ ನಟಿಯಾಗಿರುವ ಶೃತಿಗೆ ಘಾಸಿಯಾಗುತ್ತದೆ. ಯಾಕಂದ್ರೆ ಅವರ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಅನ್ನೋದನ್ನು ಮೊದಲು ಅವರು ತಿಳಿದುಕೊಳ್ಳಬೇಕು. ಇದನ್ನು ನೋಡಿಕೊಂಡು ಇಂತಹ ಕೆಲಸಗಳನ್ನು ನಿಲ್ಲಿಸಬೇಕು ಅಂತ ಅವರು ಕೇಳಿಕೊಂಡರು”.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top