fbpx
ಮನೋರಂಜನೆ

ಫೇಸ್‌ಬುಕ್‍ನಲ್ಲಿ ಶೃತಿ ವಿರುದ್ಧ ಕೊಳಕು ಕಾಮೆಂಟ್ ಮಾಡಿದ ಕಿಡಿಗೇಡಿಗಳಿಗೆ ಎದುರಾಯ್ತು ಸಂಕಷ್ಟ.

ಒಂದು ವಿವಾದವೆದ್ದರೆ ಅದರ ತಲೆ ಬುಡ ಗೊತ್ತಿಲ್ಲದಿದ್ದರೂ ಬಬ್ರುವಾಹನರಂತೆ ಅಬ್ಬರಿಸೋ ಅವಿವೇಕಿಗಳು ಫೇಸ್‌ಬುಕ್‌ನಂಥಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಿ ಹೋಗಿದ್ದಾರೆ. ಇಂಥಾ ಕೆಲ ಅನಿಷ್ಠ ಮನಸ್ಥಿತಿಯ ಅಪಾಪೋಲಿಗಳು ಹೆಣ್ಣುಮಕ್ಕಳು ವಿವಾದದ ಕೇಂದ್ರಬಿಂದುಗಳಾದಾಗ ಕನಿಷ್ಠ ವಿವೇಚನೆಯೂ ಇಲ್ಲದೆ ಸೊಂಟದ ಕೆಳಗಿನ ಭಾಷೆ ಪ್ರಯೋಗ ಮಾಡುತ್ತಾರೆ. ಫೇಸ್ಬುಕ್ ಗಳಲ್ಲಿ ಕೊಳಕು ಕಾರುತ್ತಾ ವಿಕೃತಾನಂದ ಪಡೆಯುತ್ತಾರೆ. ಇದೀಗ ಇಂಥಾ ಕೊಳಕು ಹುಳುಗಳಿಗೆಲ್ಲ ತಕ್ಕ ಪಾಠ ಕಲಿಸಲು ನಟಿ ಶೃತಿ ಹರಿಹರನ್ ಮುಂದಾಗಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ.. ಇನ್ನೂ ಕೆಲವರು ಈ ವಿಚಾರಕ್ಕೆ ರಾಜಕೀಯ ಎಳೆದು ಧರ್ಮದ, ರಾಜಕೀಯದ ಮತ್ತು ಸೈದ್ದಂತಿಕ ಬಣ್ಣ ಕತ್ತೆ ಗಬ್ಬೆಬ್ಬಿಸಿದ್ದಾರೆ.. ಶ್ರುತಿ ಹರಿಹರನ್ ಮಾಡಿರುವ ಆರೋಪ ಈಗ ಯಾವ್ಯಾವುದೋ ತಿರುವುಗಳನ್ನ ಪಡೆದುಕೊಂಡಿದೆ. ಅರ್ಜುನ್ ಸರ್ಜಾ ಅವರನ್ನು ಸಮರ್ಥಿಸುವ ಭರದಲ್ಲಿ ಶೃತಿ ಹರಿಹರನ್ ನಡತೆ ಸರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಕೆಲವು ನಿರ್ಮಾಪಕರು, ನಟರು, ಜನಸಾಮಾನ್ಯರು ಮಿತಿಮೀರಿ ವರ್ತಿಸುತ್ತಿದ್ದಾರೆ. ಅಂತೆಯೇ ಶೃತಿಯನ್ನು ಸಮರ್ಥಿಸುವ ಭರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಸ್ರೀಪೀಡಕನ ಪಟ್ಟ ಕಟ್ಟುವ ಕೆಲಸವೂ ಚಾಲ್ತಿಯಲ್ಲಿದೆ .

ಅಷ್ಟಕ್ಕೂ ಈ ಪ್ರಕರಣದಲ್ಲಿ ನಿಜಕ್ಕೂ ನಡೆದಿರುವುದೇನು, ಯಾರದ್ದು ತಪ್ಪು, ಯಾರದ್ದು ಸರಿ ಎಂಬುದು ಗೊತ್ತಿರುವುದು ಶೃತಿ ಮತ್ತು ಅರ್ಜುನ್ ಸರ್ಜಾ ಇಬ್ಬರಿಗೆ ಮಾತ್ರ..ಈ ಇಬ್ಬರನ್ನು ಬಿಟ್ಟರೆ ಮತ್ಯಾರಿಗೂ ಘಟನೆಯ ಸಂಪೂರ್ಣ ಮಾಹಿತಿ ಗೊತ್ತಿಲ್ಲ. ಇಬ್ಬರೂ ಸಹ ತಂತಮ್ಮ ಮೂಗಿನ ನೇರಕ್ಕೆ ಹೇಳಿಕೊಳ್ಳುತ್ತಿದ್ದಾರೆ, ಈ ಪ್ರಕರಣದಲ್ಲಿ ನಡೆದದ್ದು ಏನು ಎಂಬುದು ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ತಿಳಿಯಬೇಕಿದೆ. ಆದರೆ ಒಬ್ಬರ ಆರೋಪವೊಂದು ಕೇಳಿ ಬಂದಾಗ ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ಹೇಳುವ ತಾಳ್ಮೆಯನ್ನು ಬಹುತೇಕರು ಕಳೆದುಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ಮನಸ್ಥಿತಿ ಮತ್ತು ಪೂರ್ವಗ್ರಹ ಪೀಡಿತ ವಿಚಾರಗಳು..

ವಿಚಿತ್ರವೆಂದರೇ, ಶೃತಿ ಹರಿಹರನ್ ಅವರು ಸರ್ಜಾ ಮೇಲೆ #ಮೀಟೂ ಆರೋಪ ಮಾಡಿದೇಟಿಗೆ ಕೆಲಸಿಲ್ಲದ ಕಿಡಿಗೇಡಿಗಳೆಲ್ಲಾ ಹಿಂದೇಮುಂದೇ ನೋಡದೆ ಶೃತಿಯ ಚಾರಿತ್ರ್ಯ ಹರಣ ಮಾಡುವ ಕೆಲಸಕ್ಕೆ ಮುಂದಾಗಿದ್ದರು.. ಅದು ಎಷ್ಟರ ಮಟ್ಟಿಗೆ ಅಂದರೆ ಆಕೆಯ ವಿರುದ್ಧ ಅವಹೇಳನಕಾರಿಯಾಗಿ ಮಾತಾಡುತ್ತಿರೋದಲ್ಲದೆ ಸೊಂಟದ ಕೆಳಗಿನ ಅಸಹ್ಯ ಭಾಷೆ ಬಳಸಿ ನಿದಿಸುವ ನೀಚ ಮಟ್ಟಕ್ಕೂ ಇಳಿದಿದ್ದಾರಂತೆ.. ಆರೋಪಕ್ಕೆ ಒಳಗಾಗಿರುವ ವ್ಯಕ್ತಿಯ ಮೇಲೆ ಯಾರಿಗಾದರೂ ಅಷ್ಟೊಂದು ನಂಬಿಕೆ ಇದ್ದರೇ, ವಿಚಾರದ ಬಗ್ಗೆ ಆರೋಗ್ಯಕರವಾಗಿ ಚರ್ಚೆ ಮಾಡಲಿ, ಕಾನೂನು ರೀತಿಯಾಗಿ ಹೋರಾಟ ಮಾಡಲಿ. ಆದರೆ ಅದು ಬಿಟ್ಟು ಓರ್ವ ಹೆಣ್ಣನ್ನು ಸೊಂಟದ ಕೆಳಗಿನ ಭಾಷೆಗಳನ್ನು ಬಳಸುವ ಮೂಲಕ ಸಾರ್ವಜನಿಕವಾಗಿ ನಿಂದಿಸುವುದು ಸರಿಯಿಲ್ಲ ಎನ್ನುವುದು ಪ್ರಜ್ಞಾವಂತ ಜನರ ಅಭಿಪ್ರಾಯ. ಇಷ್ಟು ದಿನ ಇಂಥವನ್ನೆಲ್ಲ ಅವುಡುಗಚ್ಚಿ ಸಹಿಸುತ್ತಾ ಬಂದಿದ್ದ ಶೃತಿ ಇದೀಗ ಇಂಥಾ ಕ್ರಿಮಿಗಳ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿ ಸರಿಯಾದ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಅಕ್ಟೋಬರ್ 20ರಂದು ಮೊದಲ ಬಾರಿಗೆ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ #METOO ಪೋಸ್ಟ್ ಹಾಕಿದ್ದ ಶ್ರುತಿ ಹರಿಹರನ್ ಅವ್ರ ಪೋಸ್ಟ್​ಗೆ ಸುಮಾರು 700ಕ್ಕೂ ಹೆಚ್ಚು ಕಮೆಂಟ್​ಗಳು ಬಂದಿದ್ದವು. ಈ ಕಮೆಂಟ್​ಗಳಲ್ಲಿ ಶ್ರುತಿಯನ್ನು ವೈಯಕ್ತಿಕವಾಗಿ ಅಸಹ್ಯವಾಗಿ ನಿಂದಿಸಿದ್ದವೇ ಜಾಸ್ತಿ ಇದ್ದವು ಎನ್ನಲಾಗಿದೆ. ಅಷ್ಟೇ ಅಲ್ಲದೇ, ಆ ನಂತರದ ಪೋಸ್ಟ್​ಗಳಿಗೂ, ಅಷ್ಟೇ ಕೆಳಮಟ್ಟದ ನಿಂದನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಡಿದೆದ್ದಿರುವ ಶ್ರುತಿ, ಇಂಥ ಅಪಾಪೋಲಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top